ಕಳಪೆ ಗುಣಮಟ್ಟದ ಸಿಸಿರಸ್ತೆ ನಿರ್ಮಾಣ

ಗಬ್ಬೂರು ಮೇ-೧೬ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನೆಡೆಯುತ್ತಿರುವ ಚರಂಡಿ ಮತ್ತು ಸಿಸಿ ರಸ್ತೆ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು ಮತ್ತು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಡಿ,ಎಸ್,ಎಸ್, ಎನ್ ಮೂರ್ತಿ ಸ್ಥಾಪಿತ ಹೋಬಳಿ ಘಟಕ ಆರೋಪಿಸಿದೆ.
ಗಬ್ಬೂರು ಗ್ರಾಮದಲ್ಲಿ ಹೆಚ್,ಕೆ,ಆರ್,ಡಿ,ಬಿ ಯೋಜನೆಯಡಿಯಲ್ಲಿ ನಿರ್ಮಾಣ ವಾಗುತ್ತಿರುವ ಸಿಸಿ ರಸ್ತೆ ಮತ್ತ ಚರಂಡಿ ಕಾಮಗಾರಿಯ ನೀರನ್ನು ಉದ್ದೇಶ ಪೂರ್ವಕವಾಗಿ ಎಲ್ಲಾ ಚರಂಡಿಗಳ ಕಲುಷಿತ ನೀರುನ್ನು ದಲಿತ ಮತ್ತು ಹಿಂದುಳಿದ ಕೇರಿಗಳಿಗೆ ಹರಿಸುವುದನ್ನು ನಿಲ್ಲಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎನ್. ಮೂರ್ತಿ ಸ್ಥಾಪಿತ ಹೋಬಳಿ ಘಟಕವು ಸಂಪೂರ್ಣವಾಗಿ ಎಲ್ಲಾ ಜಿಲ್ಲಾಡಳಿತ ಕಛೇರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಉಪ ನಿರ್ದೇಶಕರಾದ ಬಿ,ಬಿ,ಪಾಟೀಲ ಹಾಗೂ ತಾಂತ್ರಿಕ ಅಧಿಕಾರಿಯಾದ ಬಸವರಾಜ ಗೆಜ್ಜೇಭಾವಿ ಇವರುಗಳು ರಾಜಕೀಯ ಒತ್ತಡಕ್ಕೆ ಮಣಿದು ತುಂಡು ಗುತ್ತಿಗೆದಾರರಿಂದ (ಕಿಕ್ ಬ್ಯಾಕ್) ಎಂಜಲು ಕಾಸಿಗೆ ನಾಲಿಗೆ ಚಾಚಿ ಒಂದು ದಲಿತ ಜನಾಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆಂದು ಸಾರ್ವಜನಿಕರ ಆರೋಪವಾಗಿದ್ದು ಇದು ಮೇಲ್ನೋಟಕ್ಕೆ ಸತ್ಯವೆಂದು ಕಂಡುಬರುತ್ತದೆ.
ಇತ್ತ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಉಪ ನಿರ್ದೇಶಕರಾದ ಬಿ,ಬಿ,ಪಾಟೀಲ ಉದ್ದೇಶ ಪೂರ್ವಕವಾಗಿ ಮತ್ತು ಪರೋಕ್ಷವಾಗಿ ದಲಿತರ ಶೋಷಣೆ ಮಾಡುತ್ತಿದ್ದು ಅಲ್ಲದೆ ಈ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದು ಸವರ್ಣಿಯರ ಕುಮ್ಮಕ್ಕಿನಿಂದ ನುಸುಳುವ ಯತ್ನ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಹಲವಾರು ವರ್ಷಗಳಿಂದ ದಲಿತ ಸಮುದಾಯದ ಏರಿಯದಲ್ಲಿ ನೀರಿನ ಪ್ರಮಾಣ (ಸಿಪೇಜ್) ಅಂತರ್ಜಲ ಹೆಚ್ಚಾಗಿದ್ದು ಬಹುತೇಕ ಕುಟುಂಬಗಳನ್ನು ಸ್ಥಳಾಂತರಿಸಲು ಈ ಹಿಂದೆ ಜಿಲ್ಲಾಡಳಿತವು ಪ್ರತ್ಯಕ್ಷವಾಗಿ ಸ್ಥಳ ವೀಕ್ಷಿಸಿ ಸಂಬಂಧಪಟ್ಟ ಸ್ಥಳೀಯ ಆಢಳಿತಕ್ಕೆ(ಗ್ರಾಮ ಪಂಚಾಯತಿಗೆ) ಮೌಖಿಕವಾಗಿ ಹಲವಾರು ಭಾರಿ ನಿರ್ದೇಶನ ನೀಡಿದರು. ಇತ್ತ ಸ್ಥಳೀಯ ಆಡಳಿತವಾಗಲಿ ಮತ್ತು ಜನಪ್ರತಿನಿಧಿಗಳಾಗಲ್ಲಿ ಈ ಜನಾಂಗದ ಕಳಕಳಿಗೆ ಸ್ಪಂದಿಸುತ್ತಿಲ್ಲ ಅಲ್ಲದೆ ಕಾಮಗಾರಿಯು ಸಂಪೂರ್ಣ ಕಳಪೆಗುಣಮಟ್ಟದಿಂದ ಕೂಡಿದ್ದು ಚರಂಡಿ ನಾಲೆ ಅಗೆಯದೆ ನೆಲದ ಮೇಲೆ ಚರಂಡಿ ನಿರ್ಮಿಸುತ್ತಿದು, ಈ ಚರಂಡಿಯು ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದೇ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿ ಆಕ್ರೋಶಕ್ಕೆ ಗುರಿಯಾಗಿದೆ. ಇಂತಃ ಪರಿಸ್ಥಿತಿ ಒಂದೆಡೆಯಾದರೆ ಇತ್ತ ಸಿಸಿರಸ್ತೆ ಕಾಮಗಾರಿಗಳು ಸತ್ವರಹಿತ ಮಣ್ಣನ್ನು ತೆಗೆಯದೆ ಚರಂಡಿ ಕಾಮಗಾರಿಯ ಸತ್ವರಹಿತ ಮಣ್ಣನ್ನು ಸಮತಟ್ಟಾಗಿ ಮಾಡಿಕೊಂಡು ಕಳಪೆ ರಸ್ತೆ ನಿರ್ಮಿಸುವ ಹುನ್ನಾರ ಮತ್ತೊಂದು ಕಡೆ ನೆಡೆದಿದೆ ಇಂತಃ ಬೇಜವಾಬ್ದಾರಿ ಕಾಮಗಾರಿಗಳನ್ನು ಮಾಡುವುದಕ್ಕೆ ತಾಲೂಕಿನ ತಾಂತ್ರಿಕ ಉಪ ನಿರ್ದೇಶಕರಾದ ಬಿ.ಬಿ,ಪಾಟೀಲ ಹಾಗೂ ತಾಂತ್ರಿಕ ಅಧಿಕಾರಿಯಾದ ಬಸವರಾಜ ಗೆಜ್ಜೆಭಾವಿ ಇವರು ಸಹಕರಿಸುತ್ತಿರುವುದು ತಾಲೂಕ ಆಡಳಿತಕ್ಕೆ ಇಡಿದ ಕೈಗನ್ನಡಿಯಾಗಿದೆ. ಅದರಂತೆ ಇವರ ಮೇಲೆ ಸಂಬಂಧ ಪಟ್ಟ ಜಿಲ್ಲಾಢಳಿತವು ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಹಂತ ಹಂತವಾಗಿ ಹೋರಾಟ ಮಾಡಲಾಗುವುದೆಂದು ದಲಿತ ಸಂಘರ್ಷ ಸಮಿತಿ ಹೋಬಳಿ ಘಟಕವು ಒತ್ತಾಯಿಸಿತು.

Leave a Comment