ಕಲ್ಲಿದ್ದಲು ಕೊರತೆ 2 ವಿದ್ಯುತ್ ಘಟಕ ಬಂದ್

ರಾಯಚೂರು, ನ. ೯- ಕಲ್ಲಿದ್ದಲು ಕೊರತೆಯಿಂದಾಗಿ ರಾಯಚೂರಿನ ಎರಡು ಥರ್ಮಲ್ ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿದೆ.
ಶಕ್ತಿನಗರ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಗಳು ವಿದ್ಯುತ್ ಉತ್ಪಾದನೆಯಲ್ಲಿ ನಿಲ್ಲಿಸಿವೆ.

ರಾಜ್ಯ ಸರ್ಕಾರವು, ರಾಯಚೂರಿನ ವಿದ್ಯುತ್ ಶಾಖೋತ್ಪನ್ನ ಘಟಕಗಳಿಗೆ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ಈವರೆಗೂ ಕಲ್ಲಿದ್ದಲು ಪೂರೈಕೆಯಾಗಿಲ್ಲ. ಹಾಗಾಗಿ ಕಲ್ಲಿದ್ದಲು ಕೊರತೆ ಎದುರಿಸುತ್ತಿರುವ ಈ ಎರಡು ಘಟಕಗಳು ಸ್ಥಗಿತಗೊಂಡಿದೆ.

ಆರ್‌ಟಿಪಿಎಸ್‌ನ ನಾಲ್ಕನೆ ಘಟಕದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಹಾಗಾಗಿ ಈ ಘಟಕದಲ್ಲೂ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ.
ವಿದ್ಯುತ್ ಕೇಂದ್ರದ ಐದನೇ ಘಟಕ ಕಳೆದ ಕೆಲ ದಿನಗಳಿಂದ ದುರಸ್ತಿಯಲ್ಲಿದೆ.

ಉಳಿದ ಆರು ಘಟಕಗಳಲ್ಲಿ ಕೇವಲ 900 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ವೈಟಿಪಿಎಸ್‌ನಲ್ಲಿ ಎರಡು ಘಟಕಗಳಿದ್ದರೂ ವಿದ್ಯುತ್ ಸಾಗಾಣೆ ಮಾರ್ಗದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ.

Leave a Comment