ಕಲ್ಲಂಗಡಿಯಲ್ಲಿ ಅರಳಿದ ಮೋದಿ‌ – ಜಿನ್ಪಿಂಗ್

ಚೆನ್ನೈ: ಭಾರತಕ್ಕೆ ಭೇಟಿ ನೀಡಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಅನೌಪಚಾರಿಕ ಶೃಂಗ ಸಭೆ ನಡೆಸಿದ್ದು, ಈ ಸಂಬಂಧ ಚೆನ್ನೈಗೆ ಶುಕ್ರವಾರ ಆಗಮಿಸಿದ್ದರು.
ಉಭಯ ನಾಯಕರಿಗೆ ಶುಭ ಕೋರುವಂತೆ ಹಣ್ಣು ಮತ್ತು ತರಕಾರಿ ಕೆತ್ತನೆಯ ಕಲಾವಿದ ಕಲ್ಲಂಗಡಿ ಹಣ್ಣಿನಲ್ಲಿ ಚಿತ್ರ ಬರೆದು ಸ್ವಾಗತ ಕೋರಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಎಂ.ಎಲಾಂಚೆಜೈನ್ ಎಂಬುವರೇ ಕಲ್ಲಂಗಡಿ ಹಣ್ಣಿನಲ್ಲಿ ಈ ಚಿತ್ರ ಬಿಡಿಸಿದ್ದು ತೈವಾನಿನ ಸ್ನೇಹಿತರೊಬ್ಬರ ಸಹಾಯ ಪಡೆದಿದ್ದಾರೆ. ಅಲ್ಲದೆ ಕ್ಸಿ ಅವರಿಗೆ ಭಾರತಕ್ಕೆ ಸ್ವಾಗತ ಎಂದು ಚೈನಾ ಭಾಷೆಯಲ್ಲಿ ಬರೆದಿದ್ದಾರೆ.
ಥೇಣಿ ಜಿಲ್ಲೆಯ ಗುಡುನೂರು ವಾಸಿಯಾಗಿರುವ ಈ ಕಲಾವಿದ ಇದಕ್ಕಾಗಿ ಸೂಕ್ತವಾದ ಹಣ್ಣನ್ನು ಹುಡುಕಿದ್ದರಂತೆ. 4-5 ಕೆಜಿ ತೂಕದ ಕಲ್ಲಂಗಡಿ ಹಣ್ಣನ್ನು ಆಯ್ದುಕೊಂಡು ಅದರಲ್ಲಿ ಮೋದಿ ಹಾಗೂ ಜಿನ್ಪಿಂಗ್ ಅವರ ಭಾವಚಿತ್ರವನ್ನು ಬಿಡಿಸಿದ್ದಾರೆ.
ಮಹಾಬಲಿಪುರಂನಲ್ಲಿ ಉಭಯ ನಾಯಕರ ಅನೌಪಚಾರಿಕ ಶೃಂಗಸಭೆ ಹಿನ್ನೆಲೆಯಲ್ಲಿ 45 ಕಿಲೋಮೀಟರ್ ಕ್ರಮಿಸಿ ಬಂದಿದ್ದಾರೆ. ತಮ್ಮ ಈ ಕೆತ್ತನೆಯನ್ನು ನಾಯಕರು ಉಳಿದುಕೊಂಡಿರುವ ಹೋಟೆಲ್ ಎದುರು ಪ್ರದರ್ಶಿಸಿದ್ದಾರೆ.

Leave a Comment