ಕಲೆ ಉಳಿವಿಗಾಗಿ ಕೈಜೋಡಿಸಿದ ರಮೇಶ್ ಅರವಿಂದ್

 

ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಕನ್ನಡಿಗರ ಮನಗೆದ್ದ ರಮೇಶ್ ಅರವಿಂದ್ ಇದೀಗ ವಿಭಿನ್ನ ರೀತಿಯಾ ಕಲೆಗಳನ್ನು ಕಲಿಸುವ ಮೂಲಕ ಮತ್ತೊಮ್ಮೆ ನಾಗರಿಕರ ಮನಸೂರೆಗೊಂಡಿದ್ದಾರೆ.

ಮೈಸೂರಿನ ಸೃಜನಾತ್ಮಕ ಸ್ಟುಡಿಯೋಗಳಲ್ಲಿ ಒಂದಾಗಿರುವ ಹಾಬಿ ಪ್ಲೇಸ್ ಮತ್ತು ಹಾಬಿ ಸೆಂಟರ್ ಸಿಲಿಕಾನ್ ಸಿಟಿಯಲ್ಲಿ ತಮ್ಮ ಮೊದಲ ಹಾಬಿ ಪ್ಲೇಸ್ ಅನ್ನು ಆರಂಭಿಸಿದ್ದು, ನಗರದಲ್ಲಿ ಕಲೆ ಉಳಿವಿಗಾಗಿ ಲ್ಯಾಂಗ್‌ಫೋರ್ಡ್ ಗಾರ್ಡನ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ ಈ ಹಾಬಿ ಪ್ಲೇಸ್‌ಗೆ ಖ್ಯಾತ ನಟ ರಮೇಶ್ ಅರವಿಂದ್ ಮತ್ತು ಹಾಬಿ ಪ್ಲೇಸ್‌ನ ಸಂಸ್ಥಾಪಕಿ ಸವಿತಾ ರಂಗ ಚಾಲನೆ ನೀಡಿದರು.

ದೃಶ್ಯ ಮತ್ತು ಕಲೆಯ ಉಳಿವಿಗಾಗಿ ಹಾಗೂ ಇದರ ಅಗತ್ಯತೆ ಬಗ್ಗೆ ಈಗೀನ ಜನತೆಗೆ ಸಂದೇಶ ರವಾನಿಸುವ ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಆರಂಭಗೊಂಡಿರುವ ಹಾಬಿ ಪ್ಲೇಸ್‌ನಲ್ಲಿ ಸವಿತಾ ರಂಗ ಅವರು ನಶಿಸುತ್ತಿರುವ ಪುರಾತನ ಕಾಲದ ಕಿನ್ನಾಲ ಕಲೆಯ ಸೌಂದರ್ಯವನ್ನು ಉಣಬಡಿಸಿದರು. ಇದೇ ವೇಳೆ ರಮೇಶ್ ಅರವಿಂದ್ ಅವರು ಮಡಕೆ ತಯಾರಿಸುವ ಚಕ್ರವನ್ನು ತಿರುಗಿಸಿ ಮಡಕೆ ತಯಾರಿಸುವ ಪ್ರಯತ್ನ ಮಾಡಿದರು. ಪ್ರತಿದಿನ ಜೀವನ ಹೇಗೆ ಭಾವನಾತ್ಮಕವಾಗಿರುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ ಎಂದು ತೋರಿಸಿಕೊಟ್ಟರು. ಕಳೆದ ೬ ವರ್ಷಗಳಿಂದ ಹಾಬಿ ಪ್ಲೇಸ್ ಮೈಸೂರಿನ ಯುವ ಸಮುದಾಯ ಮತ್ತು ಮಕ್ಕಳ ನೆಚ್ಚಿನ ಜನಪ್ರಿಯ ಸೃಜನಾತ್ಮಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಸೃಜನಾತ್ಮಕ ಕಲಾವಿದರು, ದೃಶ್ಯ ಕಲಾವಿದರು ಮತ್ತು ಕಲಾವಿದರು ಒಟ್ಟಾಗಿ ಸೇರಿ ಇಲ್ಲಿ ಸೃಜನಶೀಲ, ಕಲಿಕೆ, ತರಬೇತಿ, ಪ್ರೇರಣೆ, ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಹಾಬಿಯ ಸಂಸ್ಥಾಪಕಿ ಸವಿತಾ ಶೆಣೈ ರಂಗ ಅವರು, ಹಾಬಿ ಪ್ಲೇಸ್‌ನಲ್ಲಿ ನಾವು ವಿನೋದದ ಸೃಷ್ಟಿಯನ್ನು ನೋಡುತ್ತೇವೆ, ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತಿಸುವವರು ಇಲ್ಲಿ ಸಮರ್ಪಕವಾದ ರೀತಿಯಲ್ಲಿ ಅನುಭವವನ್ನು ಹೊಂದಬಹುದಾಗಿದೆ. ನಮ್ಮ ಪ್ರಮುಖ ಉದ್ದೇಶ ಕಲೆಯ ಬಗ್ಗೆ ಶಿಕ್ಷಣ ನೀಡುವುದು, ಉತ್ಪಾದನೆ, ಉತ್ತೇಜನ ಮತ್ತು ಸಂರಕ್ಷಿಸುವುದಾಗಿದೆ ಎಂದು ತಿಳಿಸಿದರು.

ರಮೇಶ್ ಅರವಿಂದ್ ಅವರು ಮಾತನಾಡಿ, ನಮ್ಮ ಅತಿ ವೇಗದ ಜೀವನಶೈಲಿಯಲ್ಲಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕೆಲ ಸಮಯವನ್ನು ನೀಡುತ್ತಿಲ್ಲ. ಒಂದು ವೇಳೆ ಭಾವನೆಗಳನ್ನು ವ್ಯಕ್ತಪಡಿಸುವವರಿದ್ದರೆ ಅದು ಬೆರಳೆಣಿಕೆಯಷ್ಟು ಮಾತ್ರ ಇರುತ್ತದೆ ಮತ್ತು ಅದು ಪ್ರಜ್ಞಾಪೂರ್ವಕವಾಗಿರುವುದಿಲ್ಲ. ಈ ಹಾಬಿ ಪ್ಲೇಸ್ ಈ ಎಲ್ಲಾ ಜಂಜಾಟಗಳನ್ನು ಮರೆಸುವಂತಹ ಸ್ಥಳವಾಗಿದೆ. ಇಲ್ಲಿಗೆ ಬರುವವರು ತಮ್ಮ ಒತ್ತಡವನ್ನು ಮರೆಯಬಹುದಾಗಿದೆ ಮತ್ತು ತಮ್ಮ ಪ್ರೀತಿ ಪಾತ್ರರಿಗೆ ವಿಭಿನ್ನ ರೀತಿಯ ಕಲೆಯನ್ನು ಸೃಷ್ಟಿ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

Leave a Comment