ಕಲಾವಿದ ಬಸವರಾಜಜಾನೆ ಅಭಿನಂದನೆ ಸಮಾರಂಭ 15 ರಂದು

ನಮ್ಮ ಪ್ರತಿನಿಧಿಯಿಂದ)

ಕಲಬುರಗಿ ಜು 11: ಹಿರಿಯ ಚಿತ್ರ ಕಲಾವಿದ ಬಸವರಾಜ ಜಾನೆ ಅವರ ಅಭಿನಂದನೆ ಮತ್ತು ಕೃತ್ತಿಕ ಅಭಿನಂದನ ಗ್ರಂಥ ಸಮರ್ಪಣೆ ಸಮಾರಂಭ ಜುಲೈ 15 ರಂದು ಜಿಲ್ಲಾ ಕೋರ್ಟ್ ರಸ್ತೆಯ ವಿಶ್ವೇಶ್ವರಯ್ಯ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.ಸಮಾರಂಭದ ಮುನ್ನಾದಿನವಾದ ಜುಲೈ, 14ರಂದು ಬಸವರಾಜ ಜಾನೆಯವರ ಸಮಗ್ರ ಚಿತ್ರಕಲಾಕೃತಿಗಳ ಪ್ರದರ್ಶನ ಮತ್ತು ರಾಜ್ಯಮಟ್ಟದ ಚಿತ್ರಕಲಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನ ಗ್ರಂಥದ ಸಂಪಾದಕ ಡಾ ಪರಶುರಾಮ ಪಿ, ಗೌರವ ಸಂಪಾದಕ ಡಾ ಸ್ವಾಮಿರಾವ ಕುಲಕರ್ಣಿ ಮತ್ತು  ಅಭಿನಂದನ ಸಮಿತಿ ಅಧ್ಯಕ್ಷ ಡಾ ಎ ಎಸ್ ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

14 ರಂದು  ಬೆಳಿಗ್ಗೆ 10:30ಕ್ಕೆ ಜಾನೆ ರಚಿಸಿದ ಕಲಾಕೃತಿಗಳ ಪ್ರದರ್ಶನವನ್ನು ವಿಕಾಸ ಅಕಾಡೆಮಿಯ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ  ಉದ್ಘಾಟಿಸುವರು

ಜುಲೈ, 15ರಂದು ಬೆಳಿಗ್ಗೆ 10:00 ಗಂಟೆಗೆ  ಹಿರಿಯ ಚಿತ್ರಕಲಾವಿದ ಬಸವರಾಜ ಜಾನೆ ಅವರ ಅಭಿನಂದನ  ಸಮಾರಂಭ ಮತ್ತು ‘ಕೃತಿಕ’ ಅಭಿನಂದನ ಕೃತಿ ಲೋಕಾರ್ಪಣೆಯಾಗಲಿದೆ. ಕರ್ನಾಟಕ ಕೇಂದ್ರಿಯ  ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ‘ಕೃತಿಕ’ ಅಭಿನಂದನ ಗ್ರಂಥವನ್ನು  ಖ್ಯಾತ ಚಿತ್ರಕಲಾವಿದ ಡಾ. ಸಿ. ಚಂದ್ರಶೇಖರ ಲೋಕಾರ್ಪಣೆ ಮಾಡುವರು. ಕೃತಿ ಕುರಿತು ಬೆಂಗಳೂರು ವಿ.ವಿ.ಯ ಕನ್ನಡ  ಪ್ರಾಧ್ಯಾಪಕರಾದ ಪ್ರೊ. ರಾಜಪ್ಪ ದಳವಾಯಿ  ಮಾತನಾಡುವರು. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವಪ್ರಿಯಾಂಕ್ ಖರ್ಗೆ, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಹಿರಿಯ ಚಿತ್ರಕಲಾವಿದ,ಬರಹಗಾರ ಬಸವರಾಜ  ಉಪ್ಪಿನ್ ಮತ್ತು  ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ  ಮೀರಾ ಸುರೇಶ ಪಂಡಿತ ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಚಿತ್ರಕಲಾವಿದ ನಾಡೋಜ ಡಾ. ಜೆ.ಎಸ್. ಖಂಡೇರಾವ  ವಹಿಸುವರು . ಈ ಎರಡು ದಿನ ಮಧ್ಯಾಹ್ನ 1 ರಿಂದ 1:30ರ ವರೆಗೆ ಬಸವರಾಜ ಜಾನೆ ಕುರಿತು ಬೆಂಗಳೂರಿನ ರಮೇಶ ತೇರದಾಳ ನಿರ್ದಶನದ ಸಾಕ್ಷಚಿತ್ರ ಪ್ರದರ್ಶನವಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ನಾಡೋಜ ಡಾ ಜೆ ಎಸ್ ಖಂಡೇರಾವ್,ಆರ್ ಡಿ ಚಂದ್ರಶೇಖರ, ಬಸವರಾಜ ಉಪ್ಪಿನ, ಮಂಜುಳಾ ಜಾನೆ,ನಾರಾಯಣ ಎಂ ಜೋಶಿ ಉಪಸ್ಥಿತರಿದ್ದರು

Leave a Comment