ಕಲಾವಿದರನ್ನು ಪ್ರೋತ್ಸಾಹಿಸಿ-ಶೀಲವಂತರ

ಗುಳೇದಗುಡ್ಡ,ಜ12 ರಂಗಭೂಮಿಕಲಾವಿದರತವರೂರು.ಇಲ್ಲಿ ಸಾಕಷ್ಟು ರಂಗಭೂಮಿಕಲಾವಿದರು, ಕವಿಗಳು ಹಾಗೂ ಅವರಿಗೆ ಪ್ರೋತ್ಸಾಹ ನೀಡುವಕಲಾಸಕ್ತರುಇಲ್ಲಿದ್ದಾರೆ.ಲಕ್ಷ್ಮೀ ಸಹಕಾರಿ ಬ್ಯಾಂಕ್‍ನ ಶತಮಾನೋತ್ಸವ ಕಾರ್ಯಕ್ರಮಗಳು ನಾಟಕ ಪ್ರದರ್ಶನದ ಮೂಲಕ ಆರಂಭಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.ಇದು ಬಸವಣ್ಣ ನಡೆದಾಡಿದ ನಾಡು.ಹೀಗಾಗಿ ಬಸವಣ್ಣವರಜೀವನಚರಿತ್ರೆಆಧಾರಿತಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಕ್ಷ್ಮೀ ಸಹಕಾರಿ ಬ್ಯಾಂಕ್‍ನಅಧ್ಯಕ್ಷ, ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.

 

 
ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ ಮಾತನಾಡಿ, ದಿ.ಕಂದಗಲ್ ಹನಮಂತರಾಯರು, ಎಚ್.ಆರ್.ಭಸ್ಮೆ, ನಿಂಗೇಶ ಬುಳ್ಳಾ ಅವರು ಸೇರಿದಂತೆ ಅನೇಕ ಕವಿಗಳು ಹಾಗೂ ರಂಗಭೂಮಿಕಲಾವಿದರುರಂಗಪರಂಪರೆಗೆ ಸಾಕಷ್ಟು ಕೊಡುಗೆಯನ್ನು ನೀಡುವ ಮೂಲಕ ನೇಕಾರರಊರು ಗುಳೇದಗುಡ್ಡ ರಂಗಭುಮಿಕಲಾವಿದರಊರುಎಂದು ಪ್ರಸಿದ್ಧಿ ಪಡೆದಿದೆಎಂದರು.

 

 
ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಅಧ್ಯಕ್ಷ ಸಂಪತಕುಮಾರರಾಠಿ, ಬ್ಯಾಂಕ್‍ನಉಪಾಧ್ಯಕ್ಷ ಮುತ್ತಣ್ಣ ಕಳ್ಳಿಗುಡ್ಡ, ರಾಯಪ್ಪಗಾಣಿಗೇರ, ರವೀಂದ್ರ ಪಟ್ಟಣಶೆಟ್ಟಿ, ಬ್ಯಾಂಕ್‍ನ ನಿರ್ದೇಶಕರಾದ ಮಾಗುಂಡಪ್ಪ ಹಾನಾಪೂರ, ಸಂಜಯಕಾರಕೂನ, ಮುರುಗೇಶ ರಾಜನಾಳ, ಪುರುಷೋತ್ತಮ ಪಸಾರಿ, ಶರಣುಚಿಕ್ಕನರಗುಂದ, ಸಂಗಪ್ಪ ಹುನಗುಂದ, ಈರಣ್ಣ ಶೇಖಾ, ಮಹೇಶ ಬಿಜಾಪುರ, ವಿಷ್ಣು ಬಳಿಗೇರ ವೀರಣ್ಣಕುರಹಟ್ಟಿ, ಇತರರುಇದ್ದರು.
ಬಳಿಕ ಕುಂದಗೋಳದ ಶಿರೂರದ ವಿಶ್ವಭಾರತಿರಮ್ಯ ನಾಟಕತಂಡದಿಂದಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ ನಡೆಯಿತು.

Leave a Comment