ಕಲಬೆರಕೆ ತುಪ್ಪ ಪತ್ತೆ  ವಿಧಾನ

ನಾವು ತಿನ್ನುವ ಆಹಾರಗಳು ಎಷ್ಟರ ಮಟ್ಟಿಗೆ ಶುದ್ಧವಾಗಿದೆ ಎಂಬುವುದು ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆಯಾಗಿದೆ. ನಾವು ಗುಣಮಟ್ಟದ್ದು ಎಂದು ದುಬಾರಿ ಬೆಲೆಕೊಟ್ಟು ತರುವ ಎಷ್ಟೋ ಆಹಾರ ವಸ್ತುಗಳು ಕಲಬೆರಕೆಯ ಆಹಾರಗಳಾಗಿರುತ್ತವೆ ಎನ್ನುವುದು ಕಟು ಸತ್ಯ. ಶುದ್ಧ ಹಸುವಿನ ತುಪ್ಪ ಕಂಡು ಹಿಡಿಯುವುದು ಹೇಗೆ ಎಂಬ ಮಾಹಿತಿ ಶುದ್ಧ ತುಪ್ಪ ಅಂತ ಹೇಳುತ್ತಾ ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳ ತುಪ್ಪಗಳು ದೊರೆಯುತ್ತವೆ, ಆದರೆ ಎಲ್ಲಾ ತುಪ್ಪಗಳು ಶುದ್ಧವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಕೆಲ ತುಪ್ಪಗಳಲ್ಲಿ ವನಸ್ಪತಿ ಮಿಶ್ರವಾಗಿರುತ್ತದೆ. ಏಕೆಂದರೆ ವನಸ್ಪತಿ ಬೆಲೆ ತುಂಬಾ ಕಡಿಮೆ ಇರುವುದರಿಂದ ತಕ್ಷಣ ನೋಡಿದಾಗ ತುಪ್ಪದ ರೀತಿಯಲ್ಲೇ ಕಾಣುವುದರಿಂದ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಕೆಲವೊಂದು ತುಪ್ಪದಲ್ಲಿ ಪ್ರಾಣಿಗಳ ತುಪ್ಪವನ್ನು ಬಳಸುತ್ತಾರೆ. ವನಸ್ಪತಿಗಳಲ್ಲಿರುವ ಟ್ರ್ಯಾನ್ಸ್‌ಕೊಬ್ಬಿನಂಶ ನಮ್ಮ ದೇಹಕ್ಕೆ ಹಾನಿಕಾರವಾಗಿದೆ. ಇನ್ನು ಆಕರ್ಷಕವಾಗಿ ಕಾಣಲು ಕೃತಕ ಬಣ್ಣವನ್ನು ಕೂಡ ಬಳಸಿರುತ್ತಾರೆ. ನಾವು ಆರೋಗ್ಯಕ್ಕೆ ಒಳ್ಳೆಯದೆಂದು ಕಲಬೆರಕೆಯಾದ ತುಪ್ಪವನ್ನು ತಿನ್ನಲು ಪ್ರಾರಂಭಿಸಿದರೆ ಇದರಿಂದ ಅನಾರೋಗ್ಯ ತಪ್ಪಿದ್ದಲ್ಲ.

ಇನ್ನು ಶುದ್ಧ ತುಪ್ಪ ತುಂಬಾ ಗಟ್ಟಿಯಾಗಿರುವುದಿಲ್ಲ, ಎಣ್ಣೆಯ ರೀತಿಯೂ ಇರವುದಿಲ್ಲ, ಇನ್ನು ಒಂದು ಪದರ ಎಣ್ಣೆ ರೀತಿಯಿದ್ದು, ಕೆಳಗಡೆ ಗಟ್ಟಿಯಾಗಿರುವುದಿಲ್ಲ, ಶುದ್ಧ ತುಪ್ಪವನ್ನು ಒಂದು ಡಬ್ಬದಲ್ಲಿ ತುಂಬಿಟ್ಟರೆ ಅದು ಮೇಲಿನಿಂದ ಕೆಳಗೆವರೆಗೆ ನೋಡಲು ಒಂದೇ ರೀತಿ ಇರುತ್ತದೆ, ಹಾಗೂ ಜಿಡ್ಡು-ಜಿಡ್ಡಾಗಿರುತ್ತದೆ. ಕಲಬೆರಕೆ ಮಾಡಿದ ತುಪ್ಪ ನೋಡಲು ಅಕರ್ಷಕವಾಗಿದ್ದು ಗ್ರಾಹಕರನ್ನು ಸೆಳೆಯುತ್ತದೆ, ತುಪ್ಪಕ್ಕೆ ದನ, ಎಮ್ಮೆ, ಹಂದಿ ಮುಂತಾದ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡುತ್ತದೆ. ಇನ್ನು ತುಪ್ಪದ ವಾಸನೆ ಬರಬೆಕೆಂದು ಕೃತಕ ಸುವಾಸನೆಗಳನ್ನು ಕೂಡ ಬಳಸಿರುತ್ತಾರೆ.

ತುಪ್ಪದಲ್ಲಿ ಹಲವಾರು ಔಷಧೀಯ ಗುಣಗಳಿರುವುದರಿಂದ ಇದನ್ನು ಅಯುರ್ವೇದದಲ್ಲಿ ಅನೇಕ ಅರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಮದ್ದಾಗಿ ಬಳಸಲಾಗುವುದು. ತುಪ್ಪ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಿ, ದೇಹಕ್ಕೆ ಅಗ್ಯತವಾದ ಒಳ್ಳೆಯ ಕೊಬ್ಬಿನಂಶ ಹಾಗೂ ಪೋಷಕಾಂಶಗಳನ್ನು ನೀಡುತ್ತದೆ. ಮಕ್ಕಳ ಬುದ್ಧಿಶಕ್ತಿ ಹಾಗೂ ದೈಹಿಕ ಬೆಳವಣಿಗೆಗೆ ತುಪ್ಪ ಸಹಾಯ ಮಾಡುವುದರಿಂದ ಮಕ್ಕಳಿಗೆ ಕೂಡ ತುಪ್ಪ ಹಾಕಿ ಆಹಾರ ನೀಡಲಾಗುವುದು. ಶುದ್ಧ ತುಪ್ಪವೆಂದು ಕಲಬೆರಕೆಯಾದ ತುಪ್ಪ ನೀಡಿದರೆ ಬೆಳೆಯುವ ಮಕ್ಕಳ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನೀವು ಕೊಂಡು ತಂದ ತುಪ್ಪದ ಶುದ್ಧತೆಯನ್ನು ಕೆಲವು ಪರೀಕ್ಷೆಗಳ ಮೂಲಕ ಕಂಡು ಹಿಡಿಯಬಹುದಾಗಿದೆ. ತುಪ್ಪದ ಶುದ್ಧತೆಯನ್ನು ಮನೆಯಲ್ಲಿಯೇ ಕಂಡು ಹಿಡಿಯಬಹುದಾಗಿದ್ದು ಇಲ್ಲಿ ತುಪ್ಪ ಕಲಬೆರಕೆಯಾಗಿದೆಯೇ ಇಲ್ಲವೆ ಎಂದು ಕಂಡು ಹಿಡಿಯುವುದು ಹೇಗೆ ಎಂಬ ಮಾಹಿತಿ ನೀಡಲಾಗಿದೆ ನೋಡಿ:

. ಶುದ್ಧ ತುಪ್ಪವನ್ನು ಕಂಡು ಹಿಡಿಯುವ ಸರಳವಾದ ವಿಧಾನವೆಂದರೆ ಒಂದು ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಒಂದು ಚಮಚ ತುಪ್ಪ ಹಾಕಿ, ತುಪ್ಪ ಕೂಡಲೇ ಕರಗಿ ಕಂದು ಬಣ್ಣಕ್ಕೆ ತಿರುಗಿದರೆ ಅದು ಶುದ್ಧ ತುಪ್ಪ, ಅದು ಕರಗಲು ಸಮಯ ತೆಗೆದುಕೊಂಡರೆ, ಅದರ ಬಣ್ಣ ಹಳದಿಯಾಗಿಯೇ ಇದ್ದರೆ ಆ ತುಪ್ಪ ಕಲಬೆರಕೆಯಾಗಿದೆ ಎಂದು ಹೇಳಬಹುದು. ಇನ್ನು ಸುದ್ಧ ತುಪ್ಪವನ್ನು ಒಂದು ಗಾಜಿನ ಡಬ್ಬದಲ್ಲಿ ಹಾಕಿಡಿ, ಅದರ ತಳದಲ್ಲಿ ಒಂಥರಾ ಜಿಡ್ಡು ನಿಂತಿದ್ದರೆ ಆ ತುಪ್ಪ ಶುದ್ಧವಾದ ತುಪ್ಪವಾಗಿರುತ್ತದೆ.

ಇನ್ನು ಕೆಲವೊಂದು ತುಪ್ಪದ ಜತೆ ತೆಂಗಿನೆಣ್ಣೆ ಮಿಶ್ರವಾಗಿರುತ್ತದೆ. ನಿಮಗೆಈ ತುಪ್ಪದಲ್ಲಿ ಎಣ್ಣೆ ಕಲಬೆರಕೆಯಾಗಿದೆ ಎಂದು ಅನಿಸಿದರೆ ತುಪ್ಪವನ್ನು ಕಾಯಿಸಿ ಅದನ್ನು ಫ್ರಿಡ್ಜ್‌ನಲ್ಲಿಟ್ಟರೆ ಆಗ ನಿಮಗೆ ಎರಡು ಪದರಗಳು ಕಾಣ ಸಿಗುತ್ತದೆ, ಎರಡು ಪದರಗಳು ಒಂದು ತೆಂಗಿನೆಣ್ಣೆಯದ್ದಾಗಿರುತ್ತದೆ, ಮತ್ತೊಂದು ತುಪ್ಪದಾಗಿರುತ್ತದೆ. ತುಪ್ಪ ಹಾಗೂ ತೆಂಗಿನೆಣ್ಣೆಯ ಪ್ರತ್ಯೇಕವಾದ ಪದರಗಳು ಏರ್ಪಟ್ಟಿದ್ದರೆ ಅದು ಕಲಬೆರಕೆಯಾಗಿದೆ ಎಂದು ಹೇಳಬಹುದು. ಶುದ್ಧ ತುಪ್ಪ ಗಟ್ಟಿಯಾದಗ ಎರಡು ರೀತಿಯ ಪದರಗಳಾಗಿ ಕಾಣುವುದಿಲ್ಲ.

ಒಂದು ಟೆಸ್ಟ್ ಟ್ಯೂಬ್‌ನಲ್ಲಿ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದಕ್ಕೆ ಅಷ್ಟೇ ಪ್ರಮಾಣದ ಹೈಡ್ರೋಕ್ಲೋರಿಕ್ ಆಮ್ಲ(ಊಅಐ) ಹಾಕಿ, ನಂತರ ಈ ಎರಡು ಮಿಶ್ರಣವಿರುವ ಟೆಸ್ಟ್ ಟ್ಯೂಬ್ ಅನ್ನು ಚೆನ್ನಾಗಿ ಅಲುಗಾಡಿಸಿ. ಆಗ ತಳ ಭಾಗದಲ್ಲಿ ಪಿಂಕ್ ಅಥವಾ ಕೆಂಪು ಬಣ್ಣದ ಪದರವಿದ್ದರೆ ಆ ತುಪ್ಪ ಕಲಬೆರಕೆಯಾಗಿದೆ ಎಂದು ಹೇಳಬಹುದು. ಶುದ್ಧ ತುಪ್ಪವಾಗಿದ್ದರೆ ತಳ ಭಾಗದಲ್ಲಿ ಕೆಂಪು ಹಾಗೂ ಪಿಂಕ್ ಬಣ್ಣ ಕಂಡು ಬರುವುದಿಲ್ಲ.

ಒಂದು ಚಮಚ ತುಪ್ಪವನ್ನು ತೆಗೆದುಕೊಂಡು ನಮ್ಮ ಅಂಗೈಗೆ ಹಾಕಿ, ತುಪ್ಪ ಅಂಗೈಗೆ ಬಿದ್ದಾಗ ಮೈ ಉಷ್ಣತೆಯಿಂದಾಗಿ ತಕ್ಷಣವೇ ಕರಗಲು ಆರಂಭಿಸುತ್ತದೆ, ತುಪ್ಪ ಕರಗಲು ತುಂಬಾ ಸಮಯ ತೆಗೆದುಕೊಂಡರೆ ಅದು ಕಲಬೆರಕೆಯಾದ ತುಪ್ಪವಾಗಿದೆ. ವನಸ್ಪತಿ ಹಾಗೂ ಇತರ ವಸ್ತುಗಳನ್ನು ಬಳಸಿ ಕಲಬೆರಕೆಯಾದ ತುಪ್ಪ ಸುಲಭವಾಗಿ ಕರಗುವುದಿಲ್ಲ.

ಇನ್ನು ಮತ್ತೊಂದು ರೀತಿಯಲ್ಲೂ ಪರೀಕ್ಷಿಸಬಹುದು, ತುಪ್ಪದ ಡಬ್ಬಿಯನ್ನು ಮೂಸಿ ನೋಡಿದಾಗ ತುಪ್ಪದ ವಾಸನೆ ಬರಬಹುದು, ಆದರೆ ಅದು ಶುದ್ಧ ತುಪ್ಪವೇ ಎಂದು ತಿಳಿಯಲು ಸ್ವಲ್ಪ ತುಪ್ಪವನ್ನು ಅಂಗೈಗೆ ಹಾಕಿ ತಿಕ್ಕಿ, ಒಂದು ೨೦ ನಿಮಿಷ ಬಿಟ್ಟು ಕೈಯನ್ನು ಮೂಸಿ ನೋಡಿ, ಕೈ ತುಪ್ಪದ ವಾಸನೆ ಬಂದರೆ ಅದು ಶುದ್ಧ ತುಪ್ಪ, ಕೃತಕ ಸುವಾಸನೆ ಬಳಸಿದ್ದರೆ ಅಂಗೈ ಮೇಲೆ ಅಷ್ಟೊತ್ತು ತುಪ್ಪದ ವಾಸನೆ ಇರುವುದಿಲ್ಲ.

ಇನ್ನು ತುಪ್ಪದ ಶುದ್ಧತೆಯನ್ನು ಪರಿಶೀಲಿಸುವ ಮತ್ತೊಂದು ವಿಧಾನವೆಂದರೆ ಸ್ವಲ್ಪ ತುಪ್ಪವನ್ನು ಕರಗಿಸಿ, ಅದಕ್ಕೆ ಸ್ವಲ್ಪ ಐಯೋಡಿಯನ್ ದ್ರಾವಣವನ್ನು ಹಾಕಿ. ಐಯೋಡಿನ್ ದ್ರಾವಣ ಕಂದು ಬಣ್ಣದಲ್ಲಿದ್ದು ಅದು ನೀಲಿ ಬಣ್ಣಕ್ಕೆ ತಿರುಗಿದ್ದರೆ ಆ ತುಪ್ಪದಲ್ಲಿ ಬೇರೆ ಯಾವುದು ವಸ್ತುಗಳನ್ನು ಬಳಸಿ ಕಲಬೆರಕೆ ಮಾಡಲಾಗಿದೆ ಎಂದು ಹೇಳಬಹುದು.

, ತುಪ್ಪ ಶುದ್ಧವಾಗಿಲ್ಲ ಅಂತ ತಿಳಿದು ಬಂದರೆ ಅಂತಹ ತುಪ್ಪವನ್ನು ಬಳಸಬೇಡಿ.

Leave a Comment