ಕಲಬುರಗಿ: 4 ಕಡೆ ಜ್ವರ ತಪಾಸಣಾ‌ ಕೇಂದ್ರ

 

ಕಲಬುರಗಿ,ಏ.6-ಕೋವಿಡ್-19 ಪ್ರಕರಣ ಕಂಡುಹಿಡಿಯಲು ಕಲಬುರಗಿ ನಗರದ ನಾಲ್ಕು ಕಡೆ ಜ್ವರ ತಪಾಸಣಾ ಕೇಂದ್ರಗಳು ತೆರೆಯಲಾಗಿದ್ದು, ಇಂದಿನಿಂದಲೇ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ಪ್ರಾಥಮಿಕ ಅರೋಗ್ಯ ಕೇಂದ್ರ ಅಶೋಕ ನಗರ, ಪ್ರಾಥಮಿಕ ಅರೋಗ್ಯ ಕೇಂದ್ರ ಶಿವಾಜಿ ನಗರ, ಪ್ರಾಥಮಿಕ ಅರೋಗ್ಯ ಕೇಂದ್ರ ನ್ಯೂ ರೆಹಮತ್ ನಗರ ಹಾಗೂ ತಾರಪೈಲ್ ಸಾರ್ವಜನಿನ ಆಸ್ಪತ್ರೆಯನ್ನು  ಜ್ವರ ತಪಾಸಣಾ ಕೇಂದ್ರವೆಂದು ಗುರುತಿಸಲಾಗಿದೆ.

ಈ ಕೇಂದ್ರಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಪಾಳಿ ಆಧಾರದ ಮೇಲೆ ವೈದ್ಯರು, ಸ್ಡಾಫ್ ನರ್ಸ್ ಹಾಗೂ ಇನ್ನಿತರ ಸಿಬ್ಬಂದಿಗಳು ಕರ್ತವ್ಯ‌ ನಿರ್ವಹಿಲಿದ್ದಾರೆ.

ನೆಗಡಿ, ಕೆಮ್ಮು, ಜ್ವರ ಹಾಗು ಉಸಿರಾಟದ ತೊಂದರೆ ಕಂಡುಬಂದಲ್ಲಿ ಕಲಬುರಗಿ ನಗರದ ಸಾರ್ವಜನಿಕರು ಸಮೀಪದ ಈ ಜ್ವರ ತಪಾಸಣಾ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

@12bc = ಅಶೋಕ ನಗರ

ಬೋರಾಬಾಯಿ ನಗರ, ಅಶೋಕ ನಗರ, ವಡ್ಡರಗಲ್ಲಿ, ಬಸವ ನಗರ, ಜಿಲಾನಾಬಾದ್, ಸಮತಾ ಕಾಲೋನಿ, ವಿಜಯ ನಗರ, ಸಿಐಬಿ ಕಾಲೋನಿ, ಕಾಂತಾ ಕಾಲೋನಿ, ಶಾಂತಿನಗರ.

@12bc = ಶಿವಾಜಿ ನಗರ

ಆಶ್ರಯ ಕಾಲೋನಿ, ದುಬೈ ಕಾಲೋನಿ, ಸುವರ್ಣ ನಗರ, ಶಿವಶಕ್ತಿ ನಗರ, ಚಿಂಚೋಳಿ ಕ್ರಾಸ್, ಜಿಡಿಎ ಕಾಲೋನಿ (ಶಹಾಬಜಾರ್), ಆಳಂದ ಕಾಲೋನಿ, ಆಳಂದ ಚೆಕ್ ಪೋಸ್ಟ್ ಮತ್ತು ರೇವಣಸಿದ್ದೇಶ್ವರ ಕಾಲೋನಿ.

@12bc = ನ್ಯೂ ರೆಹಮತ್ ನಗರ:

ರೆಹಮನ್ ಕಾಲೋನಿ, ನ್ಯೂ ರೆಹಮತ್ ನಗರ, ಗುಲ್ಷನ್ ಎ ಅರಾಫತ್, ಪಿರ್ದೋಷ್ ಕಾಲೋನಿ, ಅಕ್ಬರ್ ಭಾಗ್, ಗುಲ್ಷನ್ ನಗರ, ಅಹ್ಮದ್ ನಗರ, ಮೆಹಬೂಬ್ ನಗರ, ಯಾದುಲ್ಲಾ ಕಾಲೋನಿ, ಮುಜಾಹಿದ್ ನಗರ.

@12bc =ತಾರಫೈಲ್

ಅಂಬಿಕಾ ನಗರ, ದೇವಾನಗರ ಹೌಸಿಂಗ್ ಬೋರ್ಡ್ ಕಾಲೋನಿ, ಗೌಸ್ ನಗರ, ರೆಹಮತ್ ನಗರ, ವಿಶಾಲ ನಗರ, ಪಿ ಆಂಡ್ ಟಿ ಕಾಲೋನಿ, ಸದಾಶಿವ ನಗರ, ಪಿಡಬ್ಲ್ಯೂಡಿ ವಸತಿ ಗೃಹ, ಜೆಮ್ ಶೆಟ್ಟಿ ನಗರ, ಜಿಡಿಎ ಸ್ಲಮ್ ಬಡಾವಣೆಯ ಜನರು ಈ ಕ್ಲಿನಿಕ್ ಗಳ ಲಾಭ ಪಡೆಯಬೇಕೆಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

Leave a Comment