ಕಲಬುರಗಿ: 14 ಮಂದಿಗೆ ಸೋಂಕು, 10 ಗುಣಮುಖ

 

ಕಲಬುರಗಿ,ಮೇ.25-ಜಿಲ್ಲೆಯಲ್ಲಿ ಕೊರೊನಾ ರೌದ್ರಾವತಾರ ಮುಂದುವರೆದಿದ್ದು, ಇಂದು ಮತ್ತೆ 14 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.

ಸೋಂಕು ಪೀಡಿತರಲ್ಲಿ 14 ಜನ ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಾಗಿದ್ದು, ಅದರಲ್ಲಿ ಒಬ್ಬರು ಕಲಬುರಗಿಯವರಾಗಿದ್ದು, ಉಳಿದವರು ಚಿತ್ತಾಪುರ ತಾಲ್ಲೂಕಿನವರಾಗಿದ್ದಾರೆ.

42 ವರ್ಷದ ಪುರುಷ (ಪಿ-2139), 18 ವರ್ಷದ ಯುವಕ (ಪಿ-2140), 30 ವರ್ಷದ ಪುರುಷ (ಪಿ-2141), 10 ವರ್ಷದ ಬಾಲಕ (ಪಿ-2142), 55 ವರ್ಷದ ಮಹಿಳೆ (ಪಿ-2143), 45 ವರ್ಷದ ಪುರುಷ (ಪಿ-2144), 18 ವರ್ಷದ ಯುವಕ (ಪಿ-2145), 40 ವರ್ಷದ ಪುರುಷ (ಪಿ-2146), 15 ವರ್ಷದ ಬಾಲಕಿ (ಪಿ-2147), 26 ವರ್ಷದ ಯುವಕ (ಪಿ-2148), 29 ವರ್ಷದ ಮಹಿಳೆ (ಪಿ-2149), 68 ವರ್ಷದ ವೃದ್ಧ (ಪಿ-2150), 35 ವರ್ಷದ ಮಹಿಳೆ (2151) ಮತ್ತು 29 ವರ್ಷದ ಯುವಕ (ಪಿ-2152)ನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

@12bc = 10 ಜನ ಗುಣಮುಖ

ಕೊರೊನಾ ಸೋಂಕಿನಿಂದ ಗುಣಮುಖರಾದ 10 ಜನರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಗರದ ಮೋಮಿನಪುರ ಬಡಾವಣೆಯ 30 ವರ್ಷದ ಮಹಿಳೆ (ಪಿ-953), 30 ವರ್ಷದ ಮಹಿಳೆ (ಪಿ-1080), 15 ವರ್ಷದ ಬಾಲಕಿ (ಪಿ-1081), 14 ವರ್ಷದ ಬಾಲಕಿ (ಪಿ-1083), 55 ವರ್ಷದ ಮಹಿಳೆ (ಪಿ-1083), 50 ವರ್ಷದ ಮಹಿಳೆ (ಪಿ-1085), 60 ವರ್ಷದ ಪುರುಷ (ಪಿ-1086), 10 ವರ್ಷದ ಬಾಲಕಿ (ಪಿ-1087), 35 ವರ್ಷದ ಪುರುಷ (ಪಿ-848) ಮತ್ತು ಮಿಜಗುರಿ ಬಡಾವಣೆಯ 38 ವರ್ಷದ ಪುರುಷ (ಪಿ-849) ಹಾಗೂ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯಲ್ಲಿ ಚಿತ್ತಾಪುರದ 30 ವರ್ಷದ ಮಹಿಳೆ (ಪಿ-1084) ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು.

ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ 72 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 7 ಜನ ಬಲಿಯಾಗಿದ್ದಾರೆ. ಉಳಿದಂತೆ 76 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

Share

Leave a Comment