ಕಲಬುರಗಿ: ಸೋಂಕಿತರ ಸಂಖ್ಯೆ 205ಕ್ಕೆ ಏರಿಕೆ

 

ಕಲಬುರಗಿ,ಮೇ.29-ಮಹಾರಾಷ್ಟ್ರದಿಂದ ಆಗಮಿಸಿದ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ 15 ಜನ ವಲಸೆ ಕಾರ್ಮಿಕರಿಗೆ ಕೊರೊನಾ ವೈರಸ್ ಸೋಂಕು (ಕೋವಿಡ್-19) ತಗುಲಿರುವುದು ಇಂದು ದೃಢಪಟ್ಟಿದ್ದು, ಇವರಲ್ಲಿ 6, 8, 10 ಮತ್ತು 12 ವರ್ಷದ ನಾಲ್ವರು ಮಕ್ಕಳು ಸೇರಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ದ್ವೀಶತಕ (205) ದಾಟಿದೆ.

ಚಿತ್ತಾಪುರ ತಾಲ್ಲೂಕಿನ 20 ವರ್ಷದ ಯುವಕ (ಪಿ-2568), 25 ವರ್ಷದ ಮಹಿಳೆ (ಪಿ-2569), 8 ಬಾಲಕಿ (ಪಿ-2570) 23 ವರ್ಷದ ಯುವಕ (ಪಿ-2571), 10 ವರ್ಷದ ಬಾಲಕಿ (ಪಿ-2572), 20 ವರ್ಷದ ಯುವಕ (ಪಿ-2573), 30 ವರ್ಷದ ಮಹಿಳೆ (ಪಿ-2574), 36 ವರ್ಷದ ಮಹಿಳೆ (ಪಿ-2575), 33 ವರ್ಷದ ಮಹಿಳೆ (ಪಿ-2576), 6 ವರ್ಷದ ಬಾಲಕ (ಪಿ-2577), 42 ವರ್ಷದ ಪುರುಷ (ಪಿ-2578), 32 ವರ್ಷದ ಮಹಿಳೆ (2579), 12 ವರ್ಷದ ಬಾಲಕಿ (ಪಿ-2580), 35 ವರ್ಷದ ಪುರುಷ (ಪಿ-2581) ಮತ್ತು 38 ವರ್ಷದ ಪುರುಷ (ಪಿ-2582)ನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈಚೆಗೆ ಮಹಾರಾಷ್ಟ್ರದಿಂದ ಆಗಮಿಸಿದ ಇವರನ್ನು ಚಿತ್ತಾಪುರ ತಾಲ್ಲೂಕಿನ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈವರೆಗೆ ಜಿಲ್ಲೆಯಲ್ಲಿ 205 ಜನರಿಗೆ ಸೋಂಕು ತಗುಲಿದಂತಾಗಿದ್ದು, ಅದರಲ್ಲಿ 75 ಜನ ಗುಣಮುಖರಾಗಿದ್ದು, 7 ಜನ ನಿಧನ ಹೊಂದಿದ್ದಾರೆ. ಉಳಿದಂತೆ 123 ಜನರಿಗೆ ಚಿಕಿತ್ಸೆ ಮುಂದುವರೆದಿದೆ.

Share

Leave a Comment