ಕಲಬುರಗಿ ವಿಮಾನ ನಿಲ್ದಾಣಕ್ಕೆ ರೇಣುಕಾಚಾರ್ಯರ ಹೆಸರಿಡಲು ಆಗ್ರಹ

 

ಕಲಬುರಗಿ ಅ 16: ಕಲಬುರಗಿ ವಿಮಾನ ನಿಲ್ದಾಣಕ್ಕೆ ಜಗದ್ಗುರು ರೇಣುಕಾಚಾರ್ಯರ ಹೆಸರಿಡುವಂತೆ  ಶ್ರೀ ಜಗದ್ಗುರು ರೇಣುಕಾಚಾರ್ಯ ಭಕ್ತ ಬಳಗದವರು ಇಂದು ಸುದ್ದಿಗೋಷ್ಠಿಯಲ್ಲಿ  ಆಗ್ರಹಿಸಿದರು.

ವಿಷಯ ಕುರಿತಂತೆ ನಾಳೆ ( ಅ.17) ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬಳಗದ ವತಿಯಿಂದ ಮನವಿ ಸಲ್ಲಿಸಲಾಗುವದು ಎಂದು ಬಳಗದ ಅಧ್ಯಕ್ಷ ಅಣವೀರಯ್ಯ ಸ್ವಾಮಿ ಕೋಡ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ದಕ್ಷಿಣ ಭಾರತದಾದ್ಯಂತ ಕೋಟ್ಯಂತರ ಜನ ಜಗದ್ಗುರು ರೇಣುಕಾಚಾರ್ಯರ ಆರಾಧಕರಿದ್ದಾರೆ.ಈ ಎಲ್ಲ ಜನಗಳ ಭಕ್ತಿ ಭಾವನೆಗಳನ್ನು  ಕೇಂದ್ರ ಮತ್ತು ರಾಜ್ಯ ಸರ್ಕಾರ ಗೌರವಿಸಿ ಕಲಬುರಗಿ ವಿಮಾಣ ನಿಲ್ದಾಣಕ್ಕೆ ಜಗದ್ಗುರು ರೇಣುಕಾಚಾರ್ಯರ  ಹೆಸರಿಡುವದು ಸೂಕ್ತ ಎಂದರು.

ಮುಂದಿನ ವಾರ ಕಲಬುರಗಿಯಲ್ಲಿ ಎಲ್ಲ ಸಮುದಾಯಗಳ ಧರ್ಮಗುರುಗಳ, ವಿವಿಧ ಮುಖಂಡರ, ಭಕ್ತರ , ಹೋರಾಟಗಾರರ ,ಸಮಾನ ಮನಸ್ಕರ ಸಭೆ ಆಯೋಜಿಸಿ ನಾಮಕರಣ ವಿಷಯ ಕುರಿತಂತೆ ಚರ್ಚಿಸಲಾಗುವದು ಎಂದರು. ಸುದ್ದಿಗೋಷ್ಠಿಯಲ್ಲಿ ಅನೀಲ ಜಮಾದಾರ, ಬಸವರಾಜ ಕೋಲಕುಂದಿ,ಸಂಗಯ್ಯಸ್ವಾಮಿ ಹಿರೇಮಠ, ಶಿವರಾಜ ಪಾಟೀಲ ಗೊಣಗಿ,ಶಿವಾನಂದ ಮಠಪತಿ, ಉಪಸ್ಥಿತರಿದ್ದರು..

Leave a Comment