ಕಲಬುರಗಿ ಪೀಠಕ್ಕೆ ಪಿಎಲ್‍ಐ ನ್ಯಾಯಾಧಿಕಾರ ಅಗತ್ಯ

ಕಲಬುರಗಿ ಸ 7: ಕಲಬುರಗಿ ಉಚ್ಚ ನ್ಯಾಯಾಲಯ ಶಾಶ್ವತಪೀಠಕ್ಕೆ ಪಿಎಲ್‍ಐ ( ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಪರಿಹರಿಸುವ ನ್ಯಾಯಾಧಿಕಾರವನ್ನು ನೀಡುವದು ಅತ್ಯಗತ್ಯ ಎಂದು ಕಲಬುರಗಿ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್ ಕೆ ಪಾಟೀಲ ಹೇಳಿದ್ದಾರೆ.

ಪಿಎಲ್‍ಐ  ಅಧಿಕಾರ ವ್ಯಾಪ್ತಿ ನೀಡದೇ ಇರುವದು ಸ್ವತಃ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.ಕಲಬುರಗಿ ಪೀಠಕ್ಕೆ  ಆದಷ್ಟು ಬೇಗ ಪಿಎಲ್‍ಐ ನ್ಯಾಯ ನಿರ್ವಹಣೆ ಅಧಿಕಾರ ದಯಪಾಲಿಸಿದರೆ ಜನರಿಗೆ ಅತಿ ಶೀಘ್ರ ನ್ಯಾಯ ಪರಿಹಾರ ಸಿಗುತ್ತದೆ .

ಈ ಭಾಗದ ಸಾಮಾನ್ಯ ಜನರ ಹೋರಾಟಗಳು ರಾಜಧಾನಿ ಬೆಂಗಳೂರನ್ನು ತಲುಪದಿಲ್ಲ. ಆದ್ದರಿಂದ ಕಲಬುರಗಿಯಲ್ಲಿ ಉಚ್ಚ ನ್ಯಾಯಾಲಯದ ಸ್ಥಾಪನೆ  ಹೈಕ ಭಾಗಕ್ಕಲ್ಲದೇ ಉತ್ತರ ಕರ್ನಾಟಕಕ್ಕೆ ವರದಾನವಾಗಿದೆ. ಬಡವರು ಮತ್ತು ಹಿಂದುಳಿದ ವರ್ಗದವರು ನ್ಯಾಯಕ್ಕಾಗಿ ನ್ಯಾಯಾಲಯ ಮೆಟ್ಟಿಲೇರುವದು ಸಾಧ್ಯವಾಗಿದೆ.ಯುವ ನ್ಯಾಯವಾದಿಗಳಿಗೆ ಕಾನೂನು ಅಭ್ಯಾಸಿಗಳಿಗೆ ಕಲಬುರಗಿ ಪೀಠ ಸ್ಥಾಪನೆ ವಿಪುಲ ಅವಕಾಶಗಳ ಬಾಗಿಲನ್ನೇ ತೆರೆದಿದೆ,

ಕಲಬುರಗಿ ಉಚ್ಚ ನ್ಯಾಯಾಲಯ ಪೀಠ ಸ್ಥಾಪನೆಯಾಗಿ 10 ವರ್ಷ ಕಳೆದಿವೆ.ಹೈಕೋರ್ಟು ಸ್ಥಾಪನೆ ಕಾರಣದಿಂದ ಕಲಬುರಗಿ ಹೆಸರು ಭಾರತದಾದ್ಯಂತ ಗುರುತಿಸಲ್ಪಡುತ್ತಿದೆ ಎಂದು ನ್ಯಾಮೂ ಎನ್ ಕೆ ಪಾಟೀಲ ಹೇಳಿದ್ದಾರೆ..

Leave a Comment