ಕಲಬುರಗಿ ಉಚ್ಚನ್ಯಾಯಾಲಯದ ದಶಮಾನೋತ್ಸವ 8 ರಂದು

ಕಲಬುರಗಿ ಸ 5: ಕಲಬುರಗಿ ಉಚ್ಚನ್ಯಾಯಾಲಯ ಪೀಠ ಸ್ಥಾಪನೆಯಾಗಿ 10 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಸಪ್ಟೆಂಬರ್ 8 ರಂದು ಬೆಳಿಗ್ಗೆ 10.30 ಕ್ಕೆ ಕಲಬುರಗಿ ಉಚ್ಚನ್ಯಾಯಾಲಯದ  ಆವರಣದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮೋಹನ್ ಎಂ ಶಾಂತನಗೌಡರ ಮತ್ತು ನ್ಯಾಮೂ.ಎಸ್ ಅಬ್ದುಲ್ ನಜೀರ್ ಅವರು ಆಗಮಿಸುವರು. ಮುಖ್ಯ ಅತಿಥಿಗಳಾಗಿ ಉಚ್ಚ ನ್ಯಾಯಾಲಯದ   ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಅವರು ಆಗಮಿಸುವರು ಎಂದು ಗುಲಬರ್ಗ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಆರ್ ಕೆ ಹಿರೇಮಠ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅತಿಥಿಗಳಾಗಿ ಉಚ್ಚ ನ್ಯಾಯಾಲಯ ಕಲಬುರಗಿ ಪೀಠದ ನ್ಯಾಯಮೂರ್ತಿಗಳಾದ  ನ್ಯಾಮೂ.ಎಸ್ ಸುಜಾತಾ,   ನ್ಯಾಮೂ. ಎನ್ ಕೆ ಸುಧೀಂದ್ರರಾವ,ನ್ಯಾಮೂ.ಮೊಹಮ್ಮದ ನವಾಜ್ ಮತ್ತು ಸರಕಾರದ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಅವರು ಆಗಮಿಸುವರು .ಗೌರವ ಅತಿಥಿಗಳಾಗಿ ಆಗಮಿಸುವ ಕನ್ನಡಿಗರಾದ  ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮೋಹನ್ ಎಂ ಶಾಂತನಗೌಡರ ಮತ್ತು ನ್ಯಾಮೂ.ಎಸ್ ಅಬ್ದುಲ್ ನಜೀರ್ ಅವರನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದರು

ನಿಲ್ಲದ ಹೋರಾಟ:

ಕಲಬುರಗಿ ಪೀಠದಲ್ಲಿ ಇದುವರೆಗೆ ಸುಮಾರು 1.22 ಲಕ್ಷ ಮೊಕದ್ದಮೆಗಳು ದಾಖಲಾಗಿದ್ದು,ಸದ್ಯ ಸುಮಾರು 29 ಸಾವಿರ ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಬಳ್ಳಾರಿ ಕೊಪ್ಪಳ ಜಿಲ್ಲೆಗಳನ್ನು ಕಲಬುರಗಿ ಪೀಠದ ವ್ಯಾಪ್ತಿಗೆ ಸೇರಿಸುವದು,ಕೆಇಟಿ ಸ್ಥಾಪನೆ ಮೊದಲಾದ ವಿಷಯಗಳ ಕುರಿತು ನಮ್ಮ ಸಂಘದ ಹೋರಾಟ ನಿರಂತರವಾಗಿ ಜಾರಿಯಲ್ಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿಗಳಾದ ಎಸ್ ಜಿ ಮಠ,ಕಾಶೀನಾಥ ಮೋತಕಪಲ್ಲಿ, ಸತೀಶ ಪಾಟೀಲ, ವೈಜನಾಥ ಝಳಕಿ,ಬಿ ಎನ್ ಪಾಟೀಲ, ರಾಜೇಶ ದೊಡ್ಡಮನಿ ಸೇರಿದಂತೆ ಹಲವರಿದ್ದರು..

Leave a Comment