ಕಲಬುರಗಿಯಲ್ಲಿ ಮತ್ತೆ 6 ಜನರಿಗೆ ಕೊರೊನಾ ಸೋಂಕು

 

ಕಲಬುರಗಿ,ಮೇ.24-ಮಹಾರಾಷ್ಟ್ರದಿಂದ ಆಗಮಿಸಿದ ಐದು ಜನ ಮತ್ತು ಆಂಧ್ರದಿಂದ ಬಂದ ಒಬ್ಬ ವಲಸೆ ಕಾರ್ಮಿಕ ಸೇರಿದಂತೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 6 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ಆ ಮೂಲಕ ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.

ಸೋಂಕು ತಗುಲಿದವರ ಪೈಕಿ 32 ವರ್ಷದ ಪುರುಷ (ಪಿ-1965), 20 ವರ್ಷದ ಯುವಕ (ಪಿ-1966), 48 ವರ್ಷದ ಪುರುಷ (ಪಿ-1667), 50 ವರ್ಷದ ಮಹಿಳೆ (ಪಿ-1668) ಮತ್ತು 45 ವರ್ಷದ ಪುರುಷ (ಪಿ-2000) ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದು, 30 ವರ್ಷದ ಪುರುಷ (ಪಿ-2001) ಆಂಧ್ರ ಪ್ರದೇಶದಿಂದ ಬಂದವನಾಗಿದ್ದಾನೆ.

ಇವರೆಲ್ಲರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು. ಗಂಟಲು ದ್ರವ ಮಾದರಿ ಪರೀಕ್ಷೆಯ ನಂತರ ಇವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಎಲ್ಲರು ಇಎಸ್ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ 62 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಉಳಿದಂತೆ 7 ಜನ ಸಾವನ್ನಪ್ಪಿದ್ದಾರೆ. ಇನ್ನೂ 72 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

Share

Leave a Comment