ಕಲಬುರಗಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು

 

ಕಲಬುರಗಿ,ಏ.7-ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 7ಕ್ಕೆ ಏರಿದಂತಾಗಿದೆ.

ದೆಹಲಿಯ ತಬ್ಲೀಗಿ ಮರ್ಕೆಜ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಶಹಾಬಾದಗೆ ಮರಳಿದ್ದ ವ್ಯಕ್ತಿಯ  ಸೊಸೆ ಮತ್ತು ಕಲಬುರಗಿಯ ಇನ್ನೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಶಹಾಬಾದನ 28 ವರ್ಷದ ಮಹಿಳೆ ಮತ್ತು ಕಲಬುರಗಿಯ 57 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ಅವರನ್ನು ನಗರದ ಇಎಸ್ಐಸಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಹಾಬಾದನ ಮಹಿಳೆ ದೆಹಲಿಯ ತಬ್ಲೀಗಿ ಮರ್ಕೆಜ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಅವರ ಮಾವನ ನೇರ ಸಂಪರ್ಕಕ್ಕೆ ಬಂದಿದ್ದರಿಂದ ಸೋಂಕು ತಗುಲಿದ್ದು, ಕಲಬುರಗಿಯ ವ್ಯಕ್ತಿಗೆ ಯಾರ ಸಂಪರ್ಕದಿಂದ ಸೋಂಕು ತಗುಲಿತು ಎಂಬುವುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ.ತಿಳಿಸಿದ್ದಾರೆ.

Leave a Comment