ಕಲಬುರಗಿಯಲ್ಲಿ ದಿವಾಲಿ ಮೇಳ 24 ರಂದು

ಕಲಬುರಗಿ ಸೆ 21: ಅನೇಕ ಸಾಮಾಜಿಕ ಚಟುವಟಿಕೆಗಳಿಗೆ ಹೆಸರಾದ ಜೈನ ಸೋಷಿಯಲ್ ಗ್ರೂಪ್ ಇಂಟರ್‍ನ್ಯಾಷನಲ್ ಫೆಡರೇಷನ್ ಸಂಘಿನಿ ಫೋರಂನ ಕಲಬುರಗಿ ಘಟಕವು ಸೆಪ್ಟೆಂಬರ್ 24 ರಂದು ನಗರದಲ್ಲಿ ದಿವಾಲಿ ಮೇಳ ಆಯೋಜಿಸಿದೆ.

ನಗರದ ಶರಣಬಸವೇಶ್ವರ ಕೆರೆ ಉದ್ಯಾನದ ಬಳಿ ಇರುವ, ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ  ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ದಿವಾಲಿ ಮೇಳ ನಡೆಯಲಿದೆ ಎಂದು ಕಲಬುರಗಿ ಸಂಘಿನಿ ಫೋರಂ ಅಧ್ಯಕ್ಷರಾದ  ನಮಿತಾ ಶಾ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೃಹ ಕೈಗಾರಿಕೆಯನ್ನು ನಡೆಸುತ್ತಿರುವ ಮಹಿಳೆಯರನ್ನು ಪ್ರೋತ್ಸಾಹಿಸಲು ಈ ಮೇಳ ಆಯೋಜಿಸಲಾಗಿದೆ.ಮೇಳದಲ್ಲಿ ಸಿದ್ಧ ಉಡುಪುಗಳು,ಸೀರೆಗಳು, ಉಪ್ಪಿನಕಾಯಿ ಹಪ್ಪಳದಂತಹ ಸಿದ್ಧ ಆಹಾರ, ಆಯುರ್ವೇದ ಉತ್ಪನ್ನಗಳು,ಸೌಂದರ್ಯವರ್ಧಕಗಳು,ಗೃಹ ಅಲಂಕಾರಿಕ ವಸ್ತುಗಳು, ಕರಕುಶಲ ಸಾಮಗ್ರಿಗಳು ಸೇರಿದಂತೆ ಹಲವಾರು ವಸ್ತುಗಳ ಮಾರಾಟ ನಡೆಯಲಿದೆ. ಹುಬ್ಬಳ್ಳಿ, ಸೊಲ್ಲಾಪುರ,ಬಾರ್ಸಿ ,ನಾಸಿಕ್ ಮೊದಲಾದ ಕಡೆಗಳಿಂದ  ಮಹಿಳಾ ಉದ್ಯಮಿಗಳು ಆಗಮಿಸುವರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮೇಳ ಉದ್ಘಾಟಿಸುವರು. ಗಣ್ಯರಾದ ಶೇಖರ್ ದೇವಾನಂದ,ಉಷಾ ಲಾಹೋಟಿ,ಮೀರಾ ರಘೋಜಿ,ಮಣಿಲಾಲ್ ಶಾ, ಕೇತನ್ ದೋಶಿ, ನವೀನ್ ಅಂಚಲಿಯಾ,ಡಾ.ಮೊಹ್ಮದ್ ಅಲೀಮುದ್ದೀನ್ ಅತಿಥಿಗಳಾಗಿ ಆಗಮಿಸುವರು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾರುಲ್ ಕೊಠಾರಿ,ಶೀತಲ್ ಕುಲಕರ್ಣಿ,ಶಿಲ್ಪಾ ಕುಲಕರ್ಣಿ,ಮೋನಿಕಾ ಶಾ,ಮೋನಿಕಾ ಮೆಹತಾ,ಜಯಾ ಅಂಚಲಿಯಾ ಉಪಸ್ಥಿತರಿದ್ದರು..

Leave a Comment