ಕರ್ಷಣಂ ಗೆ ಯು/ಎ

ಧನಂಜಯ ಅತ್ರೆ ನಿರ್ಮಿಸುತ್ತಿರುವ ಕರ್ಷಣಂ ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಮಂಡಳಿ  ಯು/ಎ ಸರ್ಟಿಫಿಕೇಟ್ ನೀಡಿದೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದೆ, ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಶರವಣ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಹೇಮಂತ್ ಸುಬ್ರಮಣ್ಯ ಸಂಗೀತ, ಮೋಹನ್.ಎಂ ಮುಗುಡೇಶ್ವರನ್ ಛಾಯಾಗ್ರಹಣವಿದೆ.ಧನಂಜಯ ಅತ್ರೆ, ಶ್ರೀನಿವಾಸ ಮೂರ್ತಿ, ಅನುಷಾ ರೈ, ವಿಜಯ್ ಚೆಂಡೂರ್, ಎಚ್.ಎಂ.ಟಿ ವಿಜಯ್, ಚಿರಾಗ್.ಎಂ.ಎಸ್, ಕಾಳಿ ಪ್ರಸಾದ್, ಯಮುನಾ, ವಂದಾನ, ಗೌತಮ್ ರಾಜ್, ಮನ್ ಮೋಹನ್ ರೈ, ರಾಮಸ್ವಾಮಿ, ಗೀರಿಶ್ ಶೆಟ್ಟಿ, ಮೀನಾಕ್ಷಿ ಮುಂತಾದವರ ತಾರಾಬಳಗವಿದೆ.

ಶೀರ್ಷಿಕೆ ಆದ ‘ಲೋಫ಼ರ್‍ಸ್’

ಬಿ.ಎನ್.ಗಂಗಾಧರ್ ನಿರ್ಮಿಸುತ್ತಿರುವ ಚಿತ್ರಕ್ಕೆ ಮೊದಲು ‘ಲೋಫ಼ರ್‍ಸ್  ಎಂಬ ಶೀರ್ಷಿಕೆ ಇಡಬೇಕೆಂದು ನಿರ್ಧರಿಸಿದರೂ, ಕಾರಾಣಾಂತರಗಳಿಂದ ಶೀರ್ಷಿಕೆ ಖಚಿತವಾಗಿರಲಿಲ್ಲ. ಈಗ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅನುಮತಿ ದೊರೆತಿದೆಎಂದು ನಿರ್ಮಾಪಕರು ತಿಳಿಸಿದ್ದಾರೆ. ಪ್ರಸ್ತುತ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರೀಕರಣ ನಂತರ ಚಟುವಟಿಕೆಗಳು ಭರದಿಂದ ಸಾಗಿದೆ.

ಎಸ್.ಮೋಹನ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ ದಿನೇಶ್ ಕುಮಾರ್  ಸಂಗೀತ ನಿರ್ದೇಶ. ಪ್ರಸಾದ್ ಬಾಬು ಛಾಯಾಗ್ರಹಣವಿದೆ.ಚೇತನ್, ಅರ್ಜುನ್ ಆರ್ಯ, ಮನೋಜ್, ಕೆಂಪೇಗೌಡ, ಶ್ರಾವ್ಯ, ಸುಷ್ಮ, ಸಾಕ್ಷಿ, ಎಂ.ಎಸ್.ಉಮೇಶ್, ಟೆನ್ನಿಸ್ ಕೃಷ್ಣ, ಭಾರತಿ ಮುಂತಾದವರು  ಚಿತ್ರದ ತಾರಾಬಳಗದಲ್ಲಿದ್ದಾರೆ.

‘ನಮೋ’ ಚಿತ್ರೀಕರಣ ಮುಕ್ತಾಯ ಮದುಸೂಧನ್ ಟಿ ನಿರ್ಮಿಸುತ್ತಿರುವ ‘ನಮೋ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಬೆಂಗಳೂರು,ಕಾರಾವಾರ, ಶಿವಮೊಗ್ಗ ಮುಂತಾದ ಕಡೆ ಚಿತ್ರಕ್ಕೆ ಐವತ್ತು ದಿನಗಳ ಚಿತ್ರೀಕರಣ ನಡೆದಿದೆ.

ಪುಟ್ಟರಾಜ್‌ಸ್ವಾಮಿ ನಿರ್ದೇಶಿಸುತ್ತಿರುವ  ಚಿತ್ರದಲ್ಲಿ ಐದು ಹಾಡುಗಳಿವೆ. ಸಾಯಿ ಸರ್ವೇಶ್ ಸಂಗೀತ ನೀಡಿದ್ದಾರೆ. ನಿರ್ದೇಶಕ ಅನಂತರಾಜು ಬಳಿ ಕೆಲಸ ಮಾಡಿ ಅನುಭವವಿರುವ ಪುಟ್ಟರಾಜ್ ಸ್ವಾಮಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಶಕ್ತಿ ಶೇಖರ್ ಛಾಯಾಗ್ರಹಣವಿದೆ. ಚಿತ್ರದ ತಾರಾಬಳಗದಲ್ಲಿ ಭೈರವ್, ಟಾಮಿ, ಮಹೇಶ್‌ರಾಜ್, ಮಣಿಕಂಠ, ರಶ್ಮಿತ ಮುಂತಾದವರಿದ್ದಾರೆ.

Leave a Comment