ಕರ್ಮದ ಫಲಾಫಲ

ಪಾಪ ಕರ್ಮಗಳು ಮನುಷ್ಯನನ್ನು ಕಾಡುತ್ತವೆ ಎನ್ನುವ ಮಾತಿದೆ. ಅದಕ್ಕೆ ಪೂರಕವಾಗಿ ಇಲ್ಲೊಂದು ಚಿತ್ರತಂಡ ಕರ್ಮದ ಪಲಾಫಲಗಳನ್ನು ಮುಂದಿಟ್ಟುಕೊಂಡು ’ಸಾಲಿಗ್ರಾಮ’ ಚಿತ್ರ ನಿರ್ಮಾಣ ಮಾಡಿದೆ.

ಹರ್ಷ ನಾರಾಯಣಸ್ವಾಮಿ ಚಿತ್ರಕ್ಕೆ ನಿರ್ದೇಶನ ಮಾಡಿ ಬಂಡವಾಳ ಹಾಕಿದ್ದಾರೆ. ಬೆಂಗಳೂರು,ತೀರ್ಥಹಳ್ಳಿ,ಶಿವಮೊಗ್ಗ ಮತ್ತು ಮನಾಲಿ ಸೇರಿದಂತೆ ಮತ್ತಿತರ ಕಡೆ ಚಿತ್ರವನ್ನು ಚಿತ್ರೀಕರಣ ಮಾಡಿ ಬಿಡುಗಡೆಯ ಹಂತಕ್ಕೆ ಚಿತ್ರವನ್ನು ತಂದಿದ್ದಾರೆ.

ಫ್ಯಾಮಿಲಿ ಡ್ರಾಮ ಹಾರ್ ಥ್ರಿಲ್ಲರ್ ವಿಷಯವನ್ನು ಮುಂದಿಟ್ಟುಕೊಂಡು ಚಿತ್ರ ಮಾಡಲಾಗಿದೆ, ಹಾಗಂತ ಸಾಲಿಗ್ರಾಮ ಯಾವುದೇ ಊರಿಗೆ ಸಂಬಂಧಿಸಿದ ಹೆಸರಲ್ಲ. ಇದೊಂದು ಕಾಲ್ಪನಿಕ ಚಿತ್ರ ಎಂದು ಮಾತಿಗಿಳಿದರು ನಿರ್ದೇಶಕ ಹರ್ಷ ನಾರಾಯಣಸ್ವಾಮಿ. ಕುಟುಂಬವೊಂದು ವರ್ಗಾವಣೆ ಸಂಬಂಧ ಹಳ್ಳಿಗೆ ಬರುತ್ತದೆ.ಅಲ್ಲಿಗೆ ಬಂದ ನಂತರ ದುಷ್ಟಶಕ್ತಿ ಹಿಂಬಾಲಿಸಿ ಬರುತ್ತದೆ ಇದರಿಂದಾಗಿ ಕುಟುಂಬ ಪಡಬಾರದ ಕಷ್ಟ ಎದುರಿಸುತ್ತದೆ ಇದರಿಂದ ಮುಂದೇನಾಗಲಿದೆ ಎನ್ನುವುದು ಚಿತ್ರದ ತಿರುಳು.

ಕಟುಂಬಕ್ಕೆ ಈ ಕಷ್ಟ ಯಾಕೆ ಬಂತು ಎನ್ನುವ ಕಾರಣ ಹುಡುಕಿಕೊಂಡು ಹೊರಟಾಗ ಎದುರಾಗಿದ್ದೇ ಕರ್ಮದ ಫಲ. ಮುಂದೆ ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದು ಹೇಳಿಕೊಂಡರು. ಚಿತ್ರದಲ್ಲಿ ದಿಶಾ ಪೂವಯ್ಯ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಯಸ್ಸಿಗೆ ಮೀರಿದ ಪಾತ್ರ ಮಾಡಿದ್ದೇನೆ. ಫ್ಯಾಮಿಲಿ ಡ್ರಾಮವಿದೆ. ಎರಡು ಮಕ್ಕಳ ತಾಯಿಯಾಗಿ ಸಂಸಾರವನ್ನು ಹೇಗೆ ನಿಭಾಯಿಸುತ್ತೇನೆ ಎನ್ನುವುದರ ಹಿಂದೆ ಕಥೆ ಸಾಗಿದೆ. ಒಳ್ಳೆಯ ಪಾತ್ರ ಸಿಕ್ಕಿದೆ ಎಲ್ಲರ ಪ್ರೋತ್ಸಾಹ ಬೆಂಬಲ ಬೇಕು ಎಂದರು.

ಮತ್ತೊಬ್ಬ ನಾಯಕಿ ಪಲ್ಲವಿ ರಾಜು, ಅನಾಥ ಹುಡುಗಿ,ಧೈರ್ಯದಿಂದ ಸವಾಲು ಎದುರಿಸುವ ಪಾತ್ರ.ಅನಾಥಾಶ್ರಮದಲ್ಲಿ ಬೆಳೆದು ಅಲ್ಲಿಯೇ ಶಿಕ್ಷಕಿಯಾಗಿ ಕೆಲಸ ಮಾಡುವ ಪಾತ್ರ ನನ್ನದು ಎಂದು ಹೇಳಿಕೊಂಡರು.

ನಾಯಕರಾಗಿ ರಿತೇಶ್ ಕಾಣಿಸಿಕೊಂಡಿದ್ದು ಒಳ್ಳೆಯ ಅನುಭವ ಎಂದರು.ಸನ್ನಿ ರಾಜು ಚಿತ್ರಕ್ಕೆ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಬೇಬಿ ಮನಸ್ವಿನಿ ಕಾಣಿಸಿಕೊಂಡಿದ್ದು ಚಿತ್ರ ಸದ್ಯದಲ್ಲಿಯೇ ತೆರೆಗೆ ಬರುವ ಎಲ್ಲಾ ಸಾದ್ಯತೆಗಳಿವೆ.

Leave a Comment