ಕರ್ಪ್ಯೂ ಉಲ್ಲಂಘಿಸಿ ಜೂಜಾಟ: 12 ಜನರ ಬಂಧನ, 1 ಲಕ್ಷಕ್ಕೂ ಅಧಿಕ ನಗದು ವಶ

ತುಮಕೂರು, ಮೇ ೨೫- ಕೋವಿಡ್‌-19 ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಿದ್ದರೂ ಅದನ್ನು ಉಲ್ಲಂಘಿಸಿ ಜೂಜಾಟದಲ್ಲಿ ತೊ‌ಡಗಿದ್ದವರ ಮೇಲೆ ಸಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಪೊಲೀಸರು ದಾಳಿ ನಡೆಸಿ 12 ಜನರನ್ನು ಬಂಧಿಸಿ, ಪಣಕ್ಕಿಟ್ಟಿದ್ದ 1 ಲಕ್ಷಕ್ಕೂ ಅಧಿಕ ನಗದನ್ನು ವಶಪಡಿಸಿಕೊಂಡಿದ್ದಾರೆ.

ಸಿರಾ ತಾಲ್ಲೂಕಿನ ಪಟ್ಟಣನಾಯಕನಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಹಂದಿಗುಂಟೆ ಗ್ರಾಮದ ಹಳ್ಳದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪ.ನಾ.ಹಳ್ಳಿ ಪೊಲೀಸರು ಜೂಜಾಟದಲ್ಲಿ ನಿರತರಾಗಿದ್ದ 12 ಮಂದಿಯನ್ನು ಬಂಧಿಸಿ, 16 ದ್ವಿಚಕ್ರ ವಾಹನಗಳು, 11 ಮೊಬೈಲ್ ಹಾಗೂ 1,01,160 ರೂ. ನಗದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪ.ನಾ.ಹಳ್ಳಿ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಸಿರಾ ಗ್ರಾಮಾಂತರ ವೃತ್ತದ ಇನ್ಸ್‌ಪೆಕ್ಟರ್ ಶಿವಕುಮಾರ್, ಸಿಬ್ಬಂದಿಗಳಾದ ಕಿರಣ್‌ಕುಮಾರ್, ರೇಣುಕ, ಕರೆಪ್ಪ ಹಲಗೇರಿ, ಸಂತೋಷಕುಮಾರ್, ಬಾರಿಕರ್ ಹನುಮಂತ ಪಾಲ್ಗೊಂಡಿದ್ದರು.

Share

Leave a Comment