ಕರ್ನಾಟಕ ಸಂಘ : ಕನ್ನಡ ಡಿಂಡಿಮ ಕಾರ್ಯಕ್ರಮ

ರಾಯಚೂರು.ನ.10- ಕುವೆಂಪು, ದಾ.ರಾ.ಬೇಂದ್ರೆ, ಪಂ.ತಾರಾನಾಥ ಸೇರಿದಂತೆ ಇನ್ನಿತರ ಮಹಾನ್ ವ್ಯಕ್ತಿಗಳು ಆಗಮಿಸಿದ ಕರ್ನಾಟಕ ಸಂಘಕ್ಕೆ ನನ್ನನ್ನು ಆಹ್ವಾನಿಸಿರುವುದು ಸಂತೋಷವಾಗಿದೆಂದು ಕೆನರಾ ಬ್ಯಾಂಕ್‌ನ ನಿವೃತ್ತ ಹಿರಿಯ ವ್ಯವಸ್ಥಾಪಕರಾದ ಸತ್ಯನಾರಾಯಣ ಮುಜೂಂದಾರ್ ಅವರು ಹೇಳಿದರು.
ಅವರಿಂದು ನಗರದ ಕರ್ನಾಟಕ ಸಂಘದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಅಂಗವಾಗಿ ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿದರು. ಈ ಕರ್ನಾಟಕ ಸಂಘಕ್ಕೆ ಮಹಾನ್ ವ್ಯಕ್ತಿ ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ ದಾ.ರಾ.ಬೇಂದ್ರೆ, ಕುವೆಂಪು ಹಾಗೂ ಪಂ.ತಾರಾನಾಥ ಅವರು ಆಗಮಿಸಿದ ಸ್ಥಳಕ್ಕೆ ಮುಖ್ಯಾತಿಥಿಯಾಗಿ ನನ್ನನ್ನು ಆಹ್ವಾನಿಸಿರುವುದು ಸಂತೋಷವಾಗಿದೆ.
1928 ರಲ್ಲಿ ಕರ್ನಾಟಕ ಸಂಘವೂ ಪ್ರಾರಂಭವಾಗಿದ್ದು, ಇದಕ್ಕೆ ಹೆಚ್ಚಿನ ಚೈತನ್ಯವನ್ನು ನೀಡಬೇಕು. ನನ್ನ ಹಾಡುಗಳಲ್ಲಿ ಅನುಭವದ ಬಗ್ಗೆ ಮೂಡಿ ಬಂದಿರುತ್ತದೆ. ಅಂದಿನ ದಿನಮಾನಗಳಲ್ಲಿ ನನಗೆ ದೇವಿ ಚೇತನಾ ಮೂಡಿ ಬಂದು ಹಾಡುಗಳನ್ನು ಬರೆಯಲು ಪ್ರಾರಂಭ ಮಾಡಿದರು. ಸಂಕಲನ ರೂಪದಲ್ಲಿ 16 ಪುಸ್ತಕಗಳನ್ನು ಬರೆದಿದ್ದೇನೆ. 1 ಸಂಕಲನವೂ ಸೋಲಾಪೂರು ಪಠ್ಯ, ಪುಸ್ತಕದಲ್ಲಿ ಪ್ರಕಟಗೊಂಡಿದೆಂದು ಹೇಳಿದರು. ನಂತರ 20ಕ್ಕೂ ಹೆಚ್ಚು ಜನ ಕವಿತಾ ಗಾಯನವನ್ನು ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ರಾಚಣ್ಣ, ಮಹಾಂತೇಶ ಮಸ್ಕಿ, ಪಲಗುಲ ನಾಗರಾಜ, ಮರಳಿಧರ ಕುಲಕರ್ಣಿ, ಭಾರತಿ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment