ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಚುನಾವಣೆ: 4 ಶಿಕ್ಷಕರಿಗೆ ಜಯ

ಚಾಮರಾಜನಗರ ಜೂ.15. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆಗೆ ಶಿಕ್ಷಕರ ಕ್ಷೇತ್ರದಿಂದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎನ್.ನೇತ್ರಾವತಿ ಬಣದ ಮಹದೇವಸ್ವಾಮಿ, ಎಂ.ಡಿ.ಮದೇವಯ್ಯ, ಮಲ್ಲಶೆಟ್ಟಿ, ಹಾಗೂ ಕೆ.ರಾಚಯ್ಯ ರವರು ಜಯಗಳಿಸಿದ್ದಾರೆ.
ದಿನಾಂಕ 13ರಂದು ಬೆಳಗ್ಗೆ 11 ಯಿಂದ 4 ಗಂಟೆ ವರೆಗೆ ನಡೆದ ಚಾಮರಾಜನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮತದಾನದಲ್ಲಿ ರಾತ್ರಿ ಫಲಿತಾಂಶ ಹೊರ ಬಿದ್ದಿದ್ದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಚಾಮರಾಜನಗರ ಶಾಖೆಯ ಹಾಲಿ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ 761 ಮತ ಎಂ.ಡಿ.ಮಹದೇವಯ್ಯ 629 ಮತ, ಮಲ್ಲಶೆಟ್ಟಿ 518 ಮತ, ಕೆ.ರಾಚಯ್ಯ 446 ಮತಗಳನ್ನು ಪಡೆದು ಜಯಗಳಿಸಿದ್ದಾರೆ ಇವರಿಗೆ ಶಿಕ್ಷಕರ ಸಂಘದ ಅಧ್ಯಕ್ಷರಾದ ನೇತ್ರಾವತಿ ಅವರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಲಾಲಿಂಗಸ್ವಾಮಿ, ಕೃಷ್ಣಮೂರ್ತಿ, ಭರತ್‍ಭೂಷನ್, ಮಧು, ಸುಧಾ, ಎಸ್.ನೇತ್ರಾವತಿ, ಸುವರ್ಣಕುಮಾರಿ, ಎನ್.ಎಸ್.ಮಹದೇವಸ್ವಾಮಿ, ಮುರುಗೇಶ್‍ಕುಮಾರ್, ರಾಜು.ಎಸ್.ಜಿ, ಮಹದೇವಸ್ವಾಮಿ ಹೊನ್ನಾಳ್ಳಿ, ರೆಬೇಲೋ, ನಟರಾಜು, ಕೆಂಪರಾಜು, ನಂಜುಂಡಯ್ಯ, ವಿ.ಶಾಂತರಾಜು, ಮಹದೇವಸ್ವಾಮಿ ಚಂದಕವಾಡಿ, ಆರ್.ಶಿವಮೂರ್ತಿ, ರಾಜು.ಎಸ್.ಬಿ, ನಂಜುಂಡಸ್ವಾಮಿ ಕಾಗಲವಾಡಿ, ಪ್ರಸನ್ನಚಾರಿ, ರಾಜು.ಜಿ, ಮಲ್ಲಿಕ್ ಕಾಗಲವಾಡಿ, ಸಿದ್ದಯ್ಯನಪುರದ ನಂಜುಂಡಸ್ವಾಮಿ, ಸೋಮಸುಂದರ್,ಮಹದೇವಸ್ವಾಮಿ ಆಲೂರು, ಸಂಪತ್ತು, ಇನ್ನು ಮುಂತಾದವರು ಇದ್ದರು.

Leave a Comment