ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕ್ರೀಡಾಕೂಟಕ್ಕೆ ಚಾಲನೆ

ಚಾಮರಾಜನಗರ, ಆ.3- ಪ್ರತಿಯೊಬ್ಬ ಮನುಷ್ಯನು ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಿದ್ದಾನೆ. ಅದರೆ ಮನ್ನಸಿಗೆ ನೆಮ್ಮದಿ ತರುವುದು ಜ್ಞಾನದಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್‍ಕುಮಾರ್ ತಿಳಿಸಿದರು
ನಗರ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ. ಚಾಮರಾಜನಗರ ವಿಭಾಗದ ವತಿಯಿಂದ ನಡೆದ ವಾರ್ಷಿಕ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತಿಚ್ಚಿನ ಅಹಾರ ಪದ್ದತಿ ಗಳಿಂದ ಮುನುಷ್ಯನ ಶಕ್ತಿಯು ಕುಗ್ಗುತ್ತಿದೆ. ಇದನ್ನು ಸರಿಪಡಿಸಿ ಕೊಳ್ಳಲು ಯೋಗ, ಕ್ರೀಡೆಗಳಲ್ಲಿ ಭಾಗವಹಿಸುವುದು ಹಾಗೂ ಬೆಳಗಿನ ಸಮಯದಲ್ಲಿ ವಾಕಿಂಗ್ ಮಾಡುವುದರಿಂದ ಆರೋಗ್ಯವು ವೃದ್ದಿಯಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಿಂದ ಪ್ರತಿವರ್ಷವು ಸಂಸ್ಥೆಯ ಸಿಬದ್ದಿಗಳಿಗೆ ಕ್ರೀಡಾಕೂಟವನ್ನು ಅಮ್ಮಿಕೊಳ್ಳುತ್ತ ಬಂದಿದೆ. ಈ ಕ್ರೀಡಾಕೂಟದಲ್ಲಿ ಎಲ್ಲಾರು ಉತ್ಸಾಹದಿಂದ ಭಾಗವಹಿಸುತ್ತಾರೆ ಕ್ರೀಡೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸರ್ಧೆಯನ್ನು ಅಮ್ಮಿಕೊಳ್ಳಲಾಗಿದೆ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು ಸ್ವರ್ಧಿಗಳು ಕ್ರೀಡಾ ಮನೋಭವದಿಂದ ಭಾಗವಹಿಸಿ ಸಂಸ್ಥೆಗೆ ಕೀರ್ತಿತಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಡಿ.ಎಂ.ಇ) ಮಲ್ಲೇಶ್, ಉಗ್ರಾಣಾಧಿಕಾರಿ ಚಂದ್ರಮೌಳಿ, ಲೆಕ್ಕಾಧಿಕಾರಿ ಅರ್.ಬಿ.ರುದ್ರಮುನಿ, ವ್ಯವಸ್ಥಾಪಕರು ನಂಜನಗೂಡುಸ ಮಹದೇವಸ್ವಾಮಿ, ಕಾರ್ಮಿಕ ಕಲ್ಯಾಣಾಧಿಕಾರಿ ಎಂ.ರಶ್ಮಿ, ದೈಹಿಕ ಶಿಕ್ಷರು ಹಾಗೂ ಸಂಸ್ಥೆಯ ಸಿಬಂದ್ದಿಗಳು ಹಾಜರಿದ್ದರು.

Leave a Comment