ಕರ್ನಾಟಕ ರಾಜ್ಯೋತ್ಸವ ಆಚರಣೆ

ರಾಯಚೂರು.ನ.01- ಸೂಗೂರೇಶ್ವರ ವಿದ್ಯಾನಿಕೇತನ ಪ್ರೌಢ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಶಾಲಾ ಅಧ್ಯಕ್ಷರಾದ ಸುಲೋಚನಾ ಬಸವರಾಜ ಸ್ವಾಮಿ ಆಲ್ಕೂರು ಮಾಲಾರ್ಪಣೆ ಮಾಡಿದರು. ಶಾಲೆಯ ಕಾರ್ಯದರ್ಶಿಗಳಾದ ಬಸವರಾಜ ಸ್ವಾಮಿ ಆಲ್ಕೂರು ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಜಿ.ಜಂಬಣ್ಣ, ದೈಹಿಕ ಶಿಕ್ಷಕ ಶಾಂತಕುಮಾರ ಪಾಟೀಲ್, ಸಹ ಶಿಕ್ಷಕರು ಹಾಗೂ ಮಕ್ಕಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸ್ವಾಗತ ಭಾಷಣ ವಿಶ್ವನಾಥ, ವಂದನಾರ್ಪಣೆ ಕಾರ್ಯಕ್ರಮ ಗೀತಾ ನೆರವೇರಿಸಿದರು.

Leave a Comment