ಕರ್ನಾಟಕ ಮೂಲದ ಸ್ವಾಮೀಜಿಯ ಹತ್ಯೆ

ನಾಂದೇಡ್, ಮೇ ೨೫- ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಇಬ್ಬರು ಸಾಧುಗಳನ್ನು ಹೊಡೆದು ಹತ್ಯೆ ಮಾಡಿದ್ದ ಘಟನೆ ಮತ್ತೆ ಮರುಕಳಿಸಿದ್ದು ನಾಂದೇಡ್ ಜಿಲ್ಲೆಯ ಆಶ್ರಮವೊಂದರಲ್ಲಿ ಕರ್ನಾಟಕ ಮೂಲದ ಸ್ವಾಮೀಜಿಯೊಬ್ಬರನ್ನು ಹತ್ಯೆ ಮಾಡಲಾಗಿದ್ದು ಆಶ್ರಮದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಹತ್ಯೆಯಾದವರನ್ನು ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಎಂದು ಹೆಸರಿಸಲಾಗಿದೆ. ಸಾಧು ಹತ್ಯೆಯಾದ ಆಶ್ರಮದ ಶೌಚಾಲಯದಲ್ಲಿ ಮತ್ತೊಬ್ಬ ವ್ಯಕ್ತಿಯೂ ಕೊಲೆಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್‌ಪಿ ವಿಜಯ್ ಕುಮಾರ್ ಮಾಗರ್ ಅವರು, ಹತ್ಯೆಯಾದ ಸಾಧು ಹಾಗೂ ಆರೋಪಿ ಒಂದೇ ಸಮುದಾಯದವರಾಗಿದ್ದಾರೆ. ಆರೋಪಿಯು ಹತ್ಯೆಗೈದು ಪರಾರಿಯಾಗಿದ್ದು ಆತನ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.

Share

Leave a Comment