ಕರ್ನಾಟಕ ಬಂದ್ ಸಂಪೂರ್ಣ ವಿಫಲ

ರಾಯಚೂರು.ಫೆ.13- ಡಾ.ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನದ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ಸಂಪೂರ್ಣ ವಿಫಲವಾದದ್ದು ಇಂದು ಕಂಡುಬಂದಿತು.
ಇಂದು ನಗರದಲ್ಲಿ ಅಂಗಡಿ-ಮುಂಗಟ್ಟುಗಳು ಸಹಜ ಸ್ಥಿತಿಯಲ್ಲಿದ್ದವು. ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕರ್ನಾಟಕದ ಸ್ಥಳೀಯರಿಗೆ ಉದ್ಯೋಗ ಅವಕಾಶಕ್ಕಾಗಿ ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು ಪ್ರತಿಭಟನೆಯನ್ನು ಮಾಡಿದರೂ ಸಂಪೂರ್ಣ ವಿಫಲವಾಯಿತು. ಈ ಪ್ರತಿಭಟನೆಗೆ ನಗರದ ಯಾವುದೇ ಸಂಘಟನೆಗಳು ಬೆಂಬಲ ನೀಡದ ಹಿನ್ನೆಲೆಯಲ್ಲಿ ಮುಷ್ಕರವು ಸಂಪೂರ್ಣ ವಿಫಲವಾಯಿತು.
ರಾಜ್ಯದಲ್ಲಿ ಪರಭಾಷೆಯರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯದೆ ಅನ್ಯಾಯವಾಗಿದ್ದರಿಂದ ಈ ಕುರಿತು ಸುಮಾರು ವರ್ಷಗಳಿಂದ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಿಲ್ಲದೆ ಹಾಗೂ ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು ಈ ಮುಷ್ಕರವು ಸಂಪೂರ್ಣ ವಿಫಲವಾಯಿತು. ಎಂದಿನಂತೆ ಸಹಜ ಸ್ಥಿತಿಯಲ್ಲಿ ನಗರ ಸಂಚಾರ ವ್ಯವಸ್ಥೆ ನಡೆದಿರುವುದು ಕಂಡುಬಂದಿತು.

Leave a Comment