ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮ

ಅರಸೀಕೆರೆ, ಜ. ೧೨- ಕರ್ನಾಟಕ ಪ್ರವಾಸೋಧ್ಯಮ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ಕೌಂಟ್ಸ್ ಮತ್ತು ಗೈಡ್ಸ್ ಸಹಯೋಗದೊಂದಿಗೆ ಹಾಸನ ಜಿಲ್ಲೆಯಿಂದ ಸ್ಕೌಟ್ಸ್ ಮತ್ತು ಗೈಡ್ಸ್‌ನ 200 ಶಾಲಾ ಮಕ್ಕಳಿಗೆ 4 ದಿನಗಳ “ಕರ್ನಾಟಕ ದರ್ಶನ” ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅರಸೀಕೆರೆಯಿಂದ ಒಟ್ಟು 29 ಮಕ್ಕಳು ಪ್ರವಾಸದಲ್ಲಿ ಪಾಲ್ಗೊಂಡಿದ್ದು ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳಾದ ಚಿತ್ರದುರ್ಗ, ಹೊಸಪೇಟೆ, ಹಂಪೆ, ಪಟ್ಟದಕಲ್ಲು, ಬಾದಾಮಿ, ಐಹೊಳೆ, ಕೂಡಲಸಂಗಮ, ಶಿವಯೋಗಿ ಮಂದಿರ, ಗೋಕಾಕ್, ಮುರುಡೇಶ್ವರ, ಶೃಂಗೇರಿ, ಹೊರನಾಡು ಇನ್ನೂ ಮುಂತಾದ ಶಾಲಾ ಪಠ್ಯದಲ್ಲಿರುವ ಸ್ಥಳಗಳ ಪರಿಚಯ ಮಾಡಿಕೊಡಲಾಗುವುದು.

ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಹಾಸನಕ್ಕೆ ಹೊರಡಲು ಸಿದ್ದರಾಗಿದ್ದ ಮಕ್ಕಳಿಗೆ ಅರಸೀಕೆರೆ ತಾಲ್ಲೂಕು ಸ್ಕೌಂಟ್ಸ್ ಮತ್ತು ಗೈಡ್ಸ್‌ ಅಧ್ಯಕ್ಷ ಬಿಇಒ ಮೋಹನ್‌ಕುಮಾರ್, ಕಾರ್ಯದರ್ಶಿ ಸುರೇಶ್, ಹಾಸನ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತುದಾರರಾದ ಕಾಮೇಶ್ವರಿ ಭಟ್, ಕುರುವಂಕ ಪ್ರೌಢಶಾಲಾ ಶಿಕ್ಷಕ ಗಂಗಾಧರ್ ಹಾಗೂ ಪೋಷಕರು ಮಕ್ಕಳಿಗೆ ಶುಭಕೋರಿದರು.

Leave a Comment