ಕರ್ನಾಟಕ ತಂಡಕ್ಕೆ 114 ರನ್ ಹಿನ್ನಡೆ, ಎರಡನೇ ಇನ್ನಿಂಗ್ಸ್ ನಲ್ಲೂ ಆರಂಭಿಕ ಆಘಾತ

ಮೈಸೂರು, ಡಿ.27 – ಇಲ್ಲಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ಹಿಮಾಚಲ ಪ್ರದೇಶ ತಂಡ, ಆತಿಥೇಯ ಕರ್ನಾಟಕ 114 ರನ್ ಗಳ ಮುನ್ನಡೆ ಸಾಧಿಸಿದ್ದು, ಕರುಣ್ ನಾಯರ್ ಪಡೆ ಆರಂಭಿಕ ಆಘಾತಕ್ಕೆ ಒಳಗಾಗಿದೆ.

ಹಿಮಾಚಲ ತಂಡ 7 ವಿಕೆಟ್ ಗೆ 277 ರನ್ ಗಳಿಂದ ಆಟ ಮುಂದುವರಿಸಿ, 280 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 166 ರನ್ ಸೇರಿಸಿತ್ತು.

ರಿಷಿ ಧವನ್ 141 ಎಸೆತಗಳಲ್ಲಿ 93 ರನ್ ಬಾರಿಸಿ ತಂಡಕ್ಕೆ ನೆರವಾದರು. ಆಕಾಶ್ ವಶಿಷ್ಠ 69 ಎಸೆತಗಳಲ್ಲಿ 34 ರನ್ ಸೇರಿಸಿದರು. ಕರ್ನಾಟಕದ ಪರ ವಿ.ಕೌಶಿಕ್ 59 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಪ್ರತೀಕ್ ಜೈನ್ 3, ಅಭಿಮನ್ಯು ಮಿಥುನ್ 2 ವಿಕೆಟ್ ಉರುಳಿಸಿದರು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಭೋಜನ ವಿರಾಮದ ವೇಳೆ 1 ವಿಕೆಟ್ ಗೆ 34 ರನ್ ಕಲೆ ಹಾಕಿದೆ.

Leave a Comment