ಕರ್ತವ್ಯಲೋಪ : ಪಿಡಬ್ಲ್ಯೂಡಿ ಹನುಮಂತ್ರಾಯಪ್ಪ ಅಮಾನತು

ರಾಯಚೂರು.ಫೆ.23- ಸರ್ಕಾರದಿಂದ ಬಿಡುಗ‌ಡೆಗೊಂಡ ಅನುದಾನ ಬಳಕೆ ನಿರ್ಲಕ್ಷ್ಯ ಆರೋಪದ ಮೇರೆಗೆ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಹನುಮಂತ್ರಾಯಪ್ಪನನ್ನು ಸರ್ಕಾರ ಅಮಾನತುಗೊಳಿಸಿ, ಆದೇಶಿಸಿದೆ.
ಫೆ.19 ರಂದು ಆದೇಶ ಪತ್ರ ಹೊರಡಿಸಿದೆ. ಬಿಡುಗಡೆಗೊಂಡ ಅನುದಾನ ನಿರ್ದಿಷ್ಟ ಕಾಲಮಿತಿಯಲ್ಲಿ ಬಳಕೆ ಮಾಡದೇ, ಕರ್ತವ್ಯಲೋಪ ವೆಸಗಿದ ಹಿನ್ನೆಲೆಯಲ್ಲಿ ಬಂಧನ ದೂರು ಗಂಭೀರ ಪರಿಗಣಿಸಿ, ಈ ಆದೇಶ ಹೊರಡಿಸಲಾಗಿದೆ. ನೆರೆಯಿಂದ ಹಾನಿಗೆ ಗುರಿಯಾದ ರಸ್ತೆ, ಸೇತುವೆ ದುರಸ್ತಿ, ಜೂರಾಲ ಜಲಾಶಯ ನಿರ್ಮಾಣ ವಿಷಯದಲ್ಲಿ ಕರ್ತವ್ಯಲೋಪ ಸರ್ಕಾರದ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಕೆಯಲ್ಲೂ ನಿರ್ಲಕ್ಷ್ಯೆ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.
ಪ್ರಮುಖ ರಸ್ತೆ ಕಾಮಗಾರಿಗಳನ್ನು ಶೇ.10 ರಷ್ಟು ಪೂರ್ಣಗೊಳಿಸದೇ, ನೆನೆಗುದಿಗೆ ಹಾಕಲಾಗಿತ್ತು. ಪ್ರತಿ ಪರಿಶೀಲನಾ ಸಭೆಗಳಲ್ಲೂ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರೂ, ಯಾವುದೇ ಉಪಯೋಗವಾಗಿರಲಿಲ್ಲ. ಅಲ್ಲದೇ, ವಿವಿಧ ಯೋಜನೆಗಳಲ್ಲಿ ಬಿಡುಗ‌ಡೆಗೊಂಡ ಅನುದಾನ ಸಮರ್ಪಕವಾಗಿ ಬಳಸದಿರುವ ಬಗ್ಗೆ ದೂರು ತೀವ್ರವಾಗಿದ್ದವು. ಹಣ ಬಳಕೆಗೆ ಸಂಬಂಧಿಸಿ ಪದೇ ಪದೇ ಕಟ್ಟುನಿಟ್ಟಿನ ಸೂಚನೆ ನೀಡಿದರೂ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನಗೊಂಡ ಮೇಲಾಧಿಕಾರಿಗಳು ಫೆ.19 ರಂದು ಅಮಾನತ್ತಿನ ಆದೇಶದ ಮೂಲಕ ಬಿಸಿ ಮುಟ್ಟಿಸಿದ್ದಾರೆ.

Leave a Comment