ಕರುನಾಡಿನ ಸೊಸೆ ಮಾಯಾ…… ನಿರೂಪಣೆಗೆ ಮನಸೋತ ಅಭಿಮಾನಿಗಳು ವಿಶ್ವಕಪ್‌ನಲ್ಲಿ ಹಾಟ್ ಮಾಯಾಂತಿ ಹವಾ

 

ಸದ್ಯ ಎಲ್ಲೆಡೆ ವಿಶ್ವಕಪ್ ಕ್ರಿಕೆಟ್ ಜ್ವರ ಜೋರಾಗಿದೆ, ಅಷ್ಟೆ ಜೋರಾಗಿ ಸ್ಟಾರ್ ಸ್ಪೋಟ್ಸ್‌ನ ಖ್ಯಾತ ಕ್ರೀಡಾ ಹಾಗೂ ಸಕತ್ ಹಾಟ್ ನಿರೂಪಕಿ ಮಾಯಾಂತಿ ಲ್ಯಾಂಗರ್ ತಮ್ಮ ಮಾದಕ ಮೈಮಾಟ ನಿರೂಪಣೆಯಿಂದಲೇ ವಿಶ್ವದ್ಯಾದಂತ ಕ್ರಿಕೆಟ್ ಅಭಿಮಾನಿಗಳಿಗೆ ಜ್ವರ ತಂದಿದ್ದಾರೆ.

ಮೊದಲೆಲ್ಲಾ ಕ್ರಿಕೆಟ್‌ನ ಎಕ್ಸ್‌ಟ್ರಾ ಇನ್ನಿಂಗ್ಸ್ ನೋಡಲು ಹಿಂದೇಟ್ಟು ಹಾಕುತ್ತಿದ್ದ ಕ್ರಿಕೆಟ್ ಅಭಿಮಾನಿಗಳು ಇದೀಗ ಮಾಯಾಂತಿ ಲ್ಯಾಂಗರ್ ಅಲಿಯಾಸ್ ಮಾಯಾ ಮಾಡುವ ನಿರೂಪಣೆಗೆ ಫಿದಾ ಆಗಿಬಿಟ್ಟಿದ್ದಾರೆ. ಬಹುಶಃ ಕ್ರಿಕೆಟ್ ನಲ್ಲಿ ಮಂದಿರಾ ಬೇಡಿ ಬಳಿಕ ಇಷ್ಟು ಖ್ಯಾತಿ ಪಡೆದಿರುವ ಮಾಯಾ ಮಾತ್ರ ಎನ್ನಬಹುದು. ಇದರ ನಡುವೆ ಕ್ರೀಡೆ ಬಗ್ಗೆ ಆಕೆಗೆ ಇರುವ ಜ್ಞಾನ, ಆಕೆಯ ಬ್ರಿಟಿಷ್ ಆಕ್ಸೆಂಟ್ ಇಂಗ್ಲೀಷ್. ಡ್ರೆಸ್ಸಿಂಗ್ ಸ್ಟೈಲ್‌ಗೆ ಅನೇಕ ಕ್ರೀಡಾ ವಾಹಿನಿಗಳು ನಿರೂಪಣೆ ಮಾಡುವಂತೆ ಹಿಂದೆ ಬಿದ್ದಿರುವುದು ಸುಳ್ಳಲ್ಲ. ಕ್ರಿಕೆಟ್ ದಿಗ್ಗಜರ ಜೊತೆ ಬೌಲಿಂಗ್, ಪಿಚ್, ಬ್ಯಾಟಿಂಗ್‌ಗಳ ಬಗ್ಗೆ ಹಲವಾರು ರೀತಿ ವಿಮರ್ಶೆ ಮಾಡುವುದಲ್ಲದೇ, ಪಂದ್ಯದಲ್ಲಾಗುವ ತಪ್ಪುಗಳ ಬಗ್ಗೆಯೂ ತನಿಖೆ ಮಾಡಿ ಚರ್ಚೆ ನಡೆಸುವುದು ಅಷ್ಟೊಂದು ಸುಲಭದ ಮಾತಲ್ಲ. ಅಷ್ಟಕ್ಕೂ ಈ ಮಾದಕ ನಿರೂಪಕಿ ಕರುನಾಡಿನ ಸೊಸೆ ಎಂಬುದು ನಿಜಕ್ಕು ಹೆಮ್ಮೆಯ ವಿಚಾರ.

ಲೆ. ಜನರಲ್ ಸಂಜೀವ್ ಲ್ಯಾಂಗರ್ ಹಾಗೂ ಪ್ರಮೀದಾ ಲ್ಯಾಂಗರ್ ದಂಪತಿಗೆ ೧೯೮೫ರ ಫೆ ೮ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾಯಾಂತಿ ಜನಿಸಿದರು. ಅವರ ತಂದೆ ಸಂಜೀವ್ ಅವರು ಅಮೆರಿಕಕ್ಕೆ ಶಿಫ್ಟ್ ಆದ ಬಳಿಕ ಮಾಯಾಂತಿ ಬಾಲ್ಯದ ದಿನಗಳನ್ನು ಬಹಳ ಶಿಸ್ತಿನಲ್ಲಿ ಅಮೆರಿಕದಲ್ಲಿಯೇ ಕಳೆದರು. ಇನ್ನು ತಾಯಿ ಪ್ರಮೀದಾ ಅವರು ಪ್ರಶಸ್ತಿ ವಿಜೇತ ಶಿಕ್ಷಕಿಯಾಗಿದ್ದರು. ಪ್ರೌಢ ಶಿಕ್ಷಣ ಮುಗಿಸಿ ಭಾರತಕ್ಕೆ ಹಿಂತಿರುಗಿದ ಮಾಯಾಂತಿ ದೆಹಲಿಯ ಹಿಂದು ಕಾಲೇಜಿ ಒಂದರಲ್ಲಿ ಆರ್ಟ್ಸ್‌ನಲ್ಲಿ ಪದವಿ ಪಡೆದರು. ಚಿಕ್ಕಂದಿಲೂ ಫುಟ್ಬಾಲ್ ಕ್ರೀಡಾಪಟು ಹಾಗೂ ಅಭಿಮಾನಿಯಾಗಿರುವ ಮಾಯಾಂತಿಗೆ ಒಂದು ಬಾರಿ ಫಿಫಾ ಬೀಚ್ ಪುಟ್ಬಾಲ್‌ನಲ್ಲಿ ನಿರೂಪಣೆ ಮಾಡುವ ಅವಕಾಶ ಸಿಕಿತ್ತು. ಅಲ್ಲಿಂದ ಮಾಯಾ ತಾನು ಕ್ರೀಡಾ ನಿರೂಪಕಿಯಾಗಿಯೇ ಮುಂದುವರೆಯಬೇಕೆಂದು ನಿರ್ಧರಿಸಿಬಿಟ್ಟರು. ಅಲ್ಲಿಂದ ಇಲ್ಲಿಯವರೆಗೂ ವಿಶ್ವದ ಟಾಪ್ ೫ರಲ್ಲಿ ಮಾಯಾ ಸ್ಥಾನ ಪಡೆದಿದ್ದಾರೆ.

  • ವರ್ಷಕ್ಕೆ ೫೦ ಲಕ್ಷ ಸಂಬಳ

    ಮಾಯಾಂತಿ ಅವರ ನಿವ್ವಳ ಗಳಿಕೆ ೬ ಕೋಟಿಗೂ ಅಧಿಕವಾಗಿದ್ದು, ವರ್ಷಕ್ಕೆ ೨೫ ಲಕ್ಷ ದಿಂದ ೫೦ ಲಕ್ಷದ ವರೆಗೂ ಸಂಬಳ ಪಡೆಯುತ್ತಾರೆ. ತನ್ನ ಕುಟುಂಬದೊಂದಿಗೆ ಮಾಯ ಮುಂಬೈನಲ್ಲಿರುವ ಸ್ವಂತದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ೩೩ ಲಕ್ಷ ರೂ ಮೌಲ್ಯದ ಸೋಡ್ಕಾ ಕೋಡಾಯೈ ಎಸ್‌ಯುವಿ ಕಾರಿನ ಮಾಲೀಕಿಳಾಗಿದ್ದಾರೆ. ಕ್ರೀಡೆಗಳನ್ನು ವೀಕ್ಷಿಸುವುದು, ಪ್ರವಾಸ ಹವ್ಯಾಸ ಮಾಡಿಕೊಂಡಿರವ ಮಾಯಾಗೆ ಚಾಕೋಲೆಟ್ ಅಂದರೆ ಪಂಚಪ್ರಾಣ. ಇನ್ನು ಡಾರ್ಕ್ ಬ್ರಾನ್ ಆಕರ್ಷಕ ಕಣ್ಣುಗಳನ್ನು ಹೊಂದಿರುವ ಮಾಯಾ ೫.೬ ಎತ್ತರಕ್ಕೆ ಆಕರ್ಷಕ ಸೌಂದರ್ಯ ಹಾಗೂ ದೈಹಿಕ ಸೌಂದರ್ಯ ಹೊಂದಿದ್ದಾರೆ.

೧೮ರ ಪ್ರಾಯದಲ್ಲಿ ನಿರೂಪಣೆ
ಇನ್ನು ೧೮ ವರ್ಷ ಇದ್ದಾಗಲೇ ಮಾಯಾಗೆ ಫೀಪಾ ಬೀಚ್ ಪುಟ್ಟಾಲ್ ನಿರೂಪಣೆಗೆ ಕರೆ ಬಂತು. ಅಲ್ಲಿ ಯಶಸ್ಸು ಕಂಡ ಮಾಯಾಗೆ ಹಲವಾರು ಕಡೆಯಿಂದ ಅವಕಾಶಗಳು ಹುಡುಕಿಕೊಂಡು ಬಂದಿದ್ದು ನಿಜ. ಜೀ ಸ್ಪೋಟ್ಸ್ ವಾಹಿನಯ ಅನೇಕ ಫುಟ್ಬಾಲ್ ಪಂದ್ಯಗಳಿಗೆ ನಿರೂಪಣೆ ಮಾಡಿ ಗಮನ ಸೆಳೆದರು. ಬಳಿಕ ೨೦೧೦ರಲ್ಲಿ ಫೀಪಾ ವಿಶ್ವಕಪ್ ನಿರೂಪಣೆಗೆ ಬುಲಾವ್ ಬಂದಿದ್ದೆ ತಡ, ೨೦೧೦ರಲ್ಲಿ ಕಾಮನ್‌ವೆಲ್ತ್ ಗೇಮ್ಸ್, ೨೦-ಟ್ವಿಂಟಿ ವಿಶ್ವಕಪ್ ಕ್ರಿಕೆಟ್ , ೨೦೧೧ರಲ್ಲಿ ಕ್ರಿಕೆಟ್ ವಿಶ್ವಕಪ್ ಹಾಗೂ ಐಪಿಎಲ್ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಕರುನಾಡಿನ ಸೋಸೆ
ಹೌದು ಈ ಮಾದಕ ನಿರೂಪಕಿ ಕನ್ನಡಿಗ ಹಾಗೂ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಎಂಬುದು ಅನೇಕರಿಗೆ ಗೊತ್ತೇ ಇಲ್ಲ. ಇದೀಗ ಈ ಇಬ್ಬರು ಕ್ರಿಕೆಟ್ ಜಗತ್ತಿನ ಒಂದು ಭಾಗವಾಗಿಬಿಟ್ಟಿದ್ದಾರೆ ಎನ್ನಬಹುದು. ೬ ತಿಂಗಳು ಬಿನ್ನಿ ಜೊತೆ ಡೇಟಿಂಗ್ ನಡೆಸಿದ ಮಾಯಾ ಬಳಿಕ ೨೦೧೨ರ ಸೆಪ್ಟೆಂಬರ್ ತಿಂಗಳಿನಲ್ಲಿ ಸಪ್ತಪದಿ ತುಳಿದು ಕರುನಾಡಿನ ಸೊಸೆಯಾದರು. ಈ ಇಬ್ಬರ ಪ್ರೀತಿ ಹುಟ್ಟಿದ್ದು ಹೇಗೆ ಅನ್ನೋ ಕುತೂಹಲ ಇದ್ದೇ ಇದೆ. ಇಂಡಿಯನ್ ಕ್ರಿಕೆಟ್ ಲೀಗ್ ಟೂರ್ನಿ ಆರಂಭದಲ್ಲಿ ಕ್ರೀಡಾ ನಿರೂಪಕಿ ಮಯಾಂತಿ, ಬಿನ್ನಿಯನ್ನ ಮೊದಲು ಭೇಟಿಯಾಗಿದ್ದರು. ಬಿನ್ನಿ ಹೈದರಾಬಾದ್ ಹೀರೋಸ್ ಪರ ಆಡುತ್ತಿದ್ದರು. ಆಗ ಮಯಾಂತಿಗೆ ಬಿನ್ನಿ ಯಾರು ಅನ್ನೋದೇ ಗೊತ್ತಿರಲಿಲ್ಲ. ಕಾರ್ಯಕ್ರಮ ಆಯೋಜಕ ಬಿನ್ನಿಯನ್ನ ಮಯಾಂತಿಗೆ ಪರಿಚಯಿಸಿದರು. ಸ್ಟುವರ್ಟ್ ಬಿನ್ನಿ, ಮಾಜಿ ಕ್ರಿಕಕೆಟಿಗ ರೋಜರ್ ಬಿನ್ನಿ ಪುತ್ರ ಎಂದು ಪರಿಚಿಸಿದ್ದರು. ಆದರೆ ರೋಜರ್ ಬಿನ್ನಿ ಯಾರೆಂದು ಕೂಡ ಮಯಾಂತಿಗೆ ತಿಳಿದಿರಲಿಲ್ಲ. ಸ್ಟುವರ್ಟ್ ಬಿನ್ನಿ ಸಂದರ್ಶನದಲ್ಲಿ ನಿರ್ಮಾಪಕ ತಮಾಷೆಗಾಗಿ ಬಿನ್ನಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್‌ಮೆಂಟ್‌ಗೂ ಮುನ್ನ ಬಿನ್ನಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದಿದ್ದರು. ಇಷ್ಟೇ ಅಲ್ಲ ಈ ಕುರಿತು ಪ್ರಶ್ನೆ ಕೇಳಲು ಹೇಳಿದ್ದರು. ಮಾಯಾಂತಿ ಸಂದರ್ಶನದಲ್ಲಿ ಬಿನ್ನಿಗೆ ಅಭಿನಂದಿಸಿ ಈ ನಿಶ್ಚಿತಾರ್ಥ ಹಾಗೂ ಪ್ರದರ್ಶನದ ಪ್ರಶ್ನೆ ಕೇಳಿದ್ದರು. ಆದರೆ ಈ ರೀತಿಯ ಘಟನೆ ನಡೆದೇ ಇರಲಿಲ್ಲ. ಆಗ ನಾನು ತೀವ್ರ ಮುಜುಗರಕ್ಕೀಡಾಗಿದೆ ಎಂದು ಮಯಾಂತಿ ಮಿಸ್ ಫೀಲ್ಡ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆನಂತರ ಈ ಇಬ್ಬರ ಮಧ್ಯೆ ಸ್ನೇಹ, ಪ್ರೀತಿ ಶುರುವಾಯಿತು.

ಚಿನ್ನಸ್ವಾಮಿ ಕ್ರೀಡಾಂಗಣವೇ ಬಹಳ ಇಷ್ಟ
ವಿಶ್ವದ ಬಹುತೇಕ ಎಲ್ಲಾ ಮೈದಾನದಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡ ಈ ಚೆಲುವೆಗೆ ಕರ್ನಾಟಕದ ಚಿನ್ನಸ್ವಾಮಿ ಕ್ರೀಡಾಂಗಣ ಎಂದರೆ ಬಹಳ ಅಚ್ಚುಮೆಚ್ಚು. ಸದ್ಯ ಸ್ಟಾರ್ ಸ್ಪೋರ್ಟ್ಸ್‌ನ ಸ್ಟಾರ್ ನಿರೂಪಕಿ ಎನಿಸಿಕೊಂಡಿರುವ ಮಾಯಾ ಇಡೀ ಭಾರತದ ಕ್ರೀಡಾ ಪ್ರತಿಕೋದ್ಯಮದಲ್ಲೇ ಅತ್ಯಂತ ಸುಪ್ರಸಿದ್ದ ಹಾಗೂ ಫೇಸ್ ಆಪ್ ಇಂಡಿಯನ್ ಕ್ರಿಕೆಟ್ ಎಂಬ ಖ್ಯಾತಿ ಪಡೆದಿದ್ದಾರೆ. ಇವರ ಫ್ಯಾಷನ್ ಜ್ಞಾನ ಬಾಲಿವುಡ್ ಸೆಲಿಬ್ರಿಟಿಗಳನ್ನು ನಾಚಿಸುವಂತಿದ್ದು, ಅಂದಚೆಂದ, ನಿರೂಪಣೆಗೆ ಸೋತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇವರನ್ನು ಫಾಲೋ ಮಾಡುತ್ತಿದೆ.

ಊಟಕ್ಕೆ ಕರೆದ ವ್ಯಕ್ತಿಗೆ ಖಡಕ್ ಉತ್ತರ
ನಿಮ್ಮ ಸೌಂದರ್ಯ ವರ್ಣಿಸಲು ಅಸಾಧ್ಯ.. ನಿಮ್ಮ ಜೊತೆ ಊಟ ಮಾಡಬೇಕು ಎಂದು ಆಹ್ವಾನ ಕೊಟ್ಟ ವ್ಯಕ್ತಿಯೋರ್ವನಿಗೆ ಮಾಯಾಂತಿ ಸಕತ್ ಹಾಗೆ ಉತ್ತರ ನೀಡಿದ್ದರು.ಐಪಿಎಲ್ ಸೀಸನ್ ೧೧ ಆರಂಭವಾದ ಬಳಿಕ ಮಾಯಂತಿ ಬಿನ್ನಿ ಪತ್ನಿ ಎಂಬ ವಿಚಾರ ಹೆಚ್ಚು ಪ್ರಚಾರ ಪಡೆಯಿತು. ಆಗ ಮಾಯಾಂತಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಯುವ ಪ್ರಯತ್ನ, ಟ್ರೋಲ್‌ಗಳು ಹೆಚ್ಚಾಗಿತ್ತು. ಫಹಾದ್ ಎಂಬಾತ ನಿಮ್ಮನ್ನು ಕಂಡಾಗಲೆಲ್ಲಾ ನನಗೆ ಐಪಿಎಲ್ ಪಂದ್ಯಗಳನ್ನು ನೋಡಲು ಮನಸ್ಸೇ ಆಗುವುದಿಲ್ಲ. ನೀವು ಕ್ಲಾಸ್ ಮತ್ತು ಅಸಾಧಾರಣ ವ್ಯಕ್ತಿತ್ವದ ಪರಿಪೂರ್ಣ ಮಿಶ್ರಣವಿದ್ದಂತೆ. ನಾನು ನಿಮ್ಮನ್ನು ಒಮ್ಮೆ ಡಿನ್ನರ್’ಗೆ ಕರೆದೊಯ್ಯಬೇಕೆಂಬ ಆಸೆಯಿದೆ. ನೀವು ಎಷ್ಟೊಂದು ಸುಂದರವಾಗಿದ್ದೀರಿ ಎಂಬುದನ್ನು ಹೋಗಳಲು ನನ್ನಲ್ಲಿ ಪದಗಳೇ ಇಲ್ಲ, ಎಂದು ಟ್ವೀಟ್ ಮಾಡಿದ್ದನು. ಅವನದೇ ಧಾಟಿಯಲ್ಲಿ ಉತ್ತರ ನೀಡಿದ್ದ ಮಾಯಾಂತಿ, ‘ಥ್ಯಾಂಕ್ಯೂ.. ನಾನು ಮತ್ತು ನನ್ನ ಗಂಡ ಜೊತೆಯಾಗಿ ನಿಮ್ಮ ಜೊತೆ ಡಿನ್ನರ್ ಗೆ ಬರುತ್ತೇವೆ’ ಎಂದು ಟ್ವೀಟ್ ಮಾಡಿದ್ದರು.

Leave a Comment