ಕರಾದಸಂಸ ಪ್ರತಿಭಟನೆ 20 ಕ್ಕೆ

 

ಕಲಬುರಗಿ ಜ 17: ಪೌರತ್ವ ತಿದ್ದುಪಡಿ ಕಾಯಿದೆ ( ಸಿಎಎ) ಮತ್ತು ಎನ್‍ಆರ್‍ಸಿ,ಎನ್‍ಪಿಆರ್ ಜಾರಿಗೆ ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಜನವರಿ 20 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿ ನಡೆಸಲಿದೆ ಎಂದು ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ ಕಲಬುರಗಿ ಸೇರಿದಂತೆ ರಾಜ್ಯದ ಎಲ್ಲ  ಜಿಲ್ಲಾ ಕೇಂದ್ರಗಳಲ್ಲಿ ಬೆಳಿಗ್ಗೆ  11.30 ಕ್ಕೆ ಪ್ರತಿಭಟನೆ ನಡೆಸಿ ಆಯಾ ಜಿಲ್ಲಾಧಿಕಾರಿಗಳ ಮೂಲಕ  ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವದು ಎಂದರು.

ಈ ಕಾಯಿದೆಯಿಂದ ಲಕ್ಷಾಂತರ ಹಿಂದೂಗಳಿಗೆ ತೊಂದರೆಯಾಗಲಿದೆ.ದೇಶದ ಶೇ 80 ರಷ್ಟು ದಲಿತ ಸಮುದಾಯದ ಹತ್ತಿರ ದಾಖಲೆಗಳೇ ಇಲ್ಲ.ಅನಾಥರು,ಗಿರಿಜನರು,ಬಡವರ್ಗದ ಬ್ರಾಹ್ಮಣರು,ಒಕ್ಕಲಿಗರು,ಬಂಟರು,ಬಿಲ್ಲವರು ಸೇರಿದಂತೆ ಎಲ್ಲ ವರ್ಗದಲ್ಲಿ ದಾಖಲೆಗಳಿಲ್ಲದೇ ಅನೇಕರಿದ್ದಾರೆ. ಪ್ರತಿಭಟನೆಗೆ ಪಕ್ಷ ಜಾತಿ ಭೇದ ಮರೆತು ಎಲ್ಲರೂ ಕೈ ಜೋಡಿಸಲು ಮನವಿ ಮಾಡಿದರು.         ಸುದ್ದಿಗೋಷ್ಠಿಯಲ್ಲಿ  ಸುರೇಶ ಹಾದಿಮನಿ,ಕೃಷ್ಣಪ್ಪ ಕರಣಿಕ,ಉಮೇಶ ನರೋಣಾ, ರೇವಣಸಿದ್ಧ ಜಾಲಿ,ರಾಜು ಸಂಕಾ, ಜೈಭೀಮ ಉಪಸ್ಥಿತರಿದ್ದರು..

Leave a Comment