ಕರಾದಸಂಸ ಧರಣಿ 16ರಂದು

 

ಕಲಬುರಗಿ ಸೆ 12:ಕರ್ನಾಟಕ ರಾಜ್ಯ ದಲಿತಸಂಘರ್ಷಸಮಿತಿ (ಕ್ರಾಂತಿಕಾರಿ)ವತಿಯಿಂದ ಆರ್‍ಎಸ್‍ಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ,ಸೆಪ್ಟೆಂಬರ್16 ರಂದು  ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವದು ಎಂದು ಸಮಿತಿರಾಜ್ಯ ಸಂಘಟನಾ ಸಂಚಾಲಕ ಅರ್ಜುನಭದ್ರೆಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿರೋಧ ಪಕ್ಷಗಳ ಮುಖಂಡರ ವಿರುದ್ಧ ಇಡಿ,ಐಟಿ ಇಲಾಖೆಯ ಮೂಲಕ ತನಿಖೆ  ಬಂಧನದ ಹಿಂದೆ ದ್ವೇಷ ರಾಜಕಾರಣ ನಡೆದಿದೆ. ಪ್ರತಿ ದಿನ ದೇಶದ ಭದ್ರತೆ,ಸೈನ್ಯ,ಧರ್ಮ,ಭಾಷೆ ,ದೇವರು ವಿಚಾರಗಳನ್ನು ಎತ್ತಿಕೊಂಡು ಒಂದಿಲ್ಲ ಒಂದು  ವಿವಾದ ಹುಟ್ಟು ಹಾಕಿ ಯುವಕರನ್ನು ಪ್ರಚೋದಿಸುವ ಕಾರ್ಯ ನಡೆದಿದೆ.ಇದಕ್ಕೆ ಮೂಲ ಕಾರಣವಾದ ಆರ್‍ಎಸ್‍ಎಸ್ ಮತಧರ್ಮಗಳ ಅಂತರದಲ್ಲಿ ಇಡೀ ದೇಶವನ್ನು ತಲ್ಲಣಕ್ಕೆ ನೂಕಿದ್ದು ಹಿಂದೂದೇಶ ಮಾಡುವ ಗುರಿ ಹೊಂದಿದೆ. ಲೂಟಿಕೋರರನ್ನು ಬೆಂಬಲಿಸಿ ಹೋರಾಟಕ್ಕಿಳಿವ ಕಾಂಗ್ರೆಸ್ ಪಕ್ಷ ತತ್ವ ಆದರ್ಶ ಗಾಳಿಗೆ ತೂರಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಕ್ರಾಂತಿ,ಮಲ್ಲಿಕಾರ್ಜುನ ಖನ್ನಾ,ಶರಣು ಜೆ.ಡಿ ಸೇರಿದಂತೆ ಹಲವರಿದ್ದರು..

Leave a Comment