ಕರಣ್ ಮಡಿಲಿಗೆ ಸುಹಾನ ಗ್ಲಾಮರ್ ಪ್ರಪಂಚಕ್ಕೆ ಗ್ರಾಂಡ್ ಎಂಟ್ರಿ

ಇತ್ತೀಚೆಗಷ್ಟೇ ಹಾಟ್ ಫೋಟೋ ತೆಗೆಸಿಕೊಂಡು ಬಾಲಿವುಡ್ ಮಂದಿಯಿಂದ ಪ್ರಶಂಸೆಯ ಸುರಿಮಳೆಗೆ ಪಾತ್ರವಾಗಿದ್ದ ಸುಹಾನ ಖಾನ್,ಇದೀಗ ಗ್ಲಾಮರ್ ಪ್ರಪಂಚಕ್ಕೆ ಗ್ರಾಂಡ್ ಆಗಿ ಪ್ರವೇಶಿಸಲು ಸಿದ್ದತೆ ನಡೆಸಿದ್ದಾರೆ.

ಬಾಲಿವುಡ್ ಚಿತ್ರರಂಗದ ಬಾದ್‌ಶಾ, ಶಾರುಖ್ ಖಾನ್ ಮತ್ತು ಗೌರಿ ದಂಪತಿಯ ಪುತ್ರಿ ಸುಹಾನ ಖಾನ್ ಅವರನ್ನು ಬಣ್ಣದ ಜಗತ್ತಿಗೆ ಪರಿಚಯಿಸಲು ಹಲವು ನಿರ್ಮಾಪಕರು ತಾ ಮುಂದು ತಾ ಮುಂದು ಎಂದು ಹಾತೊರೆಯುತ್ತಿದ್ದರು.
ತಮ್ಮದೇ ’ರೆಡ್ಡಿ ಚಿಲ್ಲಿ’ ನಿರ್ಮಾಣ ಸಂಸ್ಥೆ ಹೊಂದಿರುವ ಶಾರುಖ್ ದಂಪತಿಗಳು ಮಗಳ ಚಿತ್ರರಂಗದ ಪ್ರವೇಶದ ಬಗ್ಗೆ ಯಾವುದೇ ತುಟಿ ಪಿಟಿಕ್ ಎಂದಿರಲಿಲ್ಲ. ಆದರೆ ಮಗಳು ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾಳೊ ಅದನ್ನು ಸ್ವಾಗತಿ ಬೆಂಬಲ ನೀಡುವುದಾಗಿ ಪತಿ ಪತ್ನಿಯರಿಬ್ಬರೂ ಹಸಿರು ನಿಶಾನೆ ತೋರಿದ್ದರು.
ಇದೀಗ ಇದಕ್ಕೆ ಪೂರಕ ಎನ್ನುವಂತೆ ವಿವಿಧ ಭಾವ ಭಂಗಿಗಳಲ್ಲಿ ಸುಹಾನ ಹಾಟ್‌ಲುಕ್‌ನಲ್ಲಿ ಕಾಣಿಸಿಕೊಂಡ ವಿವಿಧ ಭಾವ ಚಿತ್ರಗಳನ್ನು ನೋಡಿದ ಮಂದಿ ಶಾರುಖ್ ಮಗಳು ಚಿತ್ರರಂಗ ಪ್ರವೇಶಿಸುತ್ತಾರೆ ಎನ್ನುವ ಬಗ್ಗೆ ಮಾತನಾಡಿದ್ದರು.ಅದಕ್ಕೆ ಈಗ ಕಾಲ ಕೂಡಿ ಬಂದಿದೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ, ಸುಜಯ್ ಘೋಷ್,ಸೇರಿದಂತೆ ಹಲವರು ಮುಂದೆ ಬಂದಿದ್ದರು.ಆದರೆ ಕಡೆಗೂ ಶಾರುಖ್ ದಂಪತಿ ಕರಣ್ ಜೋಹರ್ ಮಡಿಲಿಗೆ ಹಾಕಿದ್ದಾರೆ.
ಬಾಲಿವುಡ್ ಚಿತ್ರರಂಗಕ್ಕೆ ಅನೇಕ ಪ್ರತಿಭೆಗಳನ್ನು ಪರಿಚಯಿಸಿ ಅವರನ್ನು ಸ್ಟಾರ್ ನಟಿಯನ್ನಾಗಿ ಮಾಡಿದ ಕೀರ್ತಿವೊಂದಿರುವ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, ಸುಹಾನಳನ್ನು ಬಣ್ಣದ ಬದುಕಿಗೆ ಪರಿಚಯಿಸಲು ಮುಂದಾಗಿದ್ದಾರೆ.ಇದಕ್ಕೆ ಸ್ನೇಹಿತರೂ ಆಗಿರುವ ಶಾರುಖ್ ಸಮ್ಮತಿ ನೀಡಿದ್ದಾರೆ.
ಸುಹಾನಳನ್ನು ಚಿಕ್ಕ ಮಗುವಾಗಿದ್ದಾಗಿನಿಂದಲೂ ನೋಡಿಕೊಂಡು ಬಂದಿದ್ದೇನೆ.ಆಕೆಯ ಹಾವ-ಭಾವ ಗೊತ್ತಿದೆ.ಆಕೆಯ ಸ್ಟ್ರಂಥ್,ವೀಕೆನೆಸ್ ಅರಿವಿರುವುದರಿಂದ ಇಂದಿನ ಯುವ ಜನಾಂಗಕ್ಕೆ ಹತ್ತಿರವಾಗುವ ಚಿತ್ರದ ಮೂಲಕ ಸುಹಾಳನ್ನು ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ ಎಂದು ಕರಣ್ ಜೋಹರ್ ಹೇಳಿದ್ದಾರೆ.
ಕರಣ್ ಜೋಹರ್ ನಿರ್ದೇಶನ ಮೂಲಕ ಬಣ್ಣದ ಜಗತ್ತು ಪರಿಚಯವಾಗುತ್ತಿರುವುದರಿಂದ ಸಹಜವಾಗಿಯೇ ಸುಹಾನ ಕೂಡ ಹೆಚ್ಚು ಆಸಕ್ತ ವಹಿಸಿದ್ದಾರೆ. ಒಳ್ಳೆಯ ಚಿತ್ರ ನೀಡಲಿದ್ದಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಪುತ್ರಿ ಸುಹಾನ ಬಾಲಿವುಡ್‌ಗೆ ಗ್ರಾಂಡ್ ಎಂಟ್ರಿ ಕೊಡಲು ವೇದಿಕೆ ನಿರ್ಮಾಣವಾಗಿದೆ.ಅದು ಕರಣ್ ಜೋಹರ್ ಚಿತ್ರದ ಮೂಲಕ ಚಿತ್ರ ಯಾವಾಗ ಸೆಟ್ ಏರಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

Leave a Comment