ಕರಣ್ ಚಿತ್ರದಲ್ಲಿ ಶಾಹಿದ್!

ಮುಂಬೈ, ಜೂ 26 -ಇತ್ತೀಚೆಗಷ್ಟೇ ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ ‘ಕಬೀರ್ ಸಿಂಗ್’ ಚಿತ್ರ ಬಿಡುಗಡೆಗೊಂಡಿದ್ದು, 100 ಕೋಟಿ ರೂ.ಗಲ್ಲಾಪೆಟ್ಟಿಗೆ ತುಂಬಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಕರಣ್ ಜೋಹರ್ ಅವರ ಕಣ್ಣು ಈಗ ಶಾಹಿದ್ ಮೇಲೆ ಬಿದ್ದಿದೆ.

ಕೆಲ ದಿನಗಳ ಹಿಂದಷ್ಟೇ ತಮ್ಮ ಬಳಿ ಯಾವುದೇ ಚಿತ್ರವಿಲ್ಲ ಎಂದು ಶಾಹಿದ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೀಗ ‘ಕಬೀರ್ ಸಿಂಗ್’ ಚಿತ್ರದ ಯಶಸ್ವಿನ ನಂತರ ಅವರಿಗೆ ಭಾರಿ ಬೇಡಿಕೆ ಹೆಚ್ಚಿದ್ದು, ಅನೇಕ ಚಿತ್ರಗಳು ಒಲಿದು ಬರುತ್ತಿವೆ.

ಶಾಹಿದ್ ಮತ್ತೊಮ್ಮೆ ತೆಲುಗು ಚಿತ್ರದ ಹಿಂದಿ ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಬಿಟೌನ್ ದಲ್ಲಿ ಹರಿದಾಡುತ್ತಿದೆ. ತೆಲುಗು ನಟ ನಾನಿ ಅಭಿನಯದ ‘ಜರ್ಸಿ’  ಚಿತ್ರದ ಹಿಂದಿ ರಿಮೇಕ್ ಹಕ್ಕನ್ನು ಕರಣ್ ಖರೀದಿಸಿದ್ದಾರಂತೆ.

ಕರಣ್, ತಮ್ಮ ಈ ಚಿತ್ರದ ನಾನಿ ಪಾತ್ರಕ್ಕೆ ಶಾಹಿದ್ ಅವರನ್ನು ಕರೆತರುವ ಯೋಜನೆಯಲ್ಲಿದ್ದಾರಂತೆ . ಆದರೆ, ಈ ಕುರಿತು ಕರಣ್ ತುಟ್ಟಿಬಿಚ್ಚಿಲ್ಲ. ‘ಜರ್ಸಿ’ ಕ್ರೀಡಾಧಾರಿತವುಳ್ಳ ಚಿತ್ರಕಥೆ ಆಗಿದ್ದು, ನಟ ನಾನಿ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಏಪ್ರಿಲ್ ನಲ್ಲಿ ಬಿಡುಗಡೆಗೊಂಡಿದ್ದು, ಪ್ರೇಕ್ಷಕ ವರ್ಗ ಭಾರಿ ಮೆಚ್ಚುಗೆ ವ್ಯಕ್ತಪಡಿಸಿತ್ತು.

Leave a Comment