ಕರಡಿ ದಾಳಿ: ವ್ಯಕ್ತಿಗೆ ಗಾಯ

ಹುಳಿಯಾರು, ಅ. ೧೨- ವ್ಯಕ್ತಿಯೊಬ್ಬರು ಕರಡಿ ದಾಳಿಗೆ ತುತ್ತಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ತಮ್ಮಡಿಹಳ್ಳಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಪಟ್ಟಣದ ಗೊಲ್ಲರಹಟ್ಟಿ ಗ್ರಾಮ ಮಹಾಲಿಂಗಯ್ಯ ಎಂಬುವರೇ ಕರಡಿ ದಾಳಿಯಿಂದ ಗಾಯಗೊಂಡಿರುವ ವ್ಯಕ್ತಿ. ಈತ ರಾತ್ರಿ ವೇಳೆ ತೋಟದಲ್ಲಿ ನೀರು ಹಾಯಿಸುತ್ತಿದ್ದಾಗ ನೀರು ಕುಡಿಯಲು ಬಂದ ಕರಡಿ ದಾಳಿ ಮಾಡಿದ ಪರಿಣಾಮ ಮಹಾಲಿಂಗಯ್ಯ ಗಾಯಗೊಂಡಿದ್ದಾರೆ. ಗಾಯಾಳು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಹುಳಿಯಾರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment