ಕರಗುತ್ತಿರುವ ಹಿಮ ನದಿಗಳು ಜಲಚರಗಳಿಗೂ ಗಂಡಾಂತರ

ಜಾಗತಿಕ ತಾಪಮಾನ ಏರಿಕೆ ಹಿಮ ನದಿಗಳ ಗತಿಯನ್ನು ಬದಲಾಯಿಸುತ್ತಿದ್ದು ಇದು ಸಾಗರ ಜೀವ ರಾಶಿಗೆ ಭಾರಿ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದು ನಾಸಾ ವಿಜ್ಞಾನಿಗಳು, ಮತ್ತೊಮ್ಮೆ ಎಚ್ಚರಿಸಿದ್ದಾರೆ. ತಾಪಮಾನ ಏರಿಕೆಯಿಂದಾಗಿ ಹಿಮ ನದಿಗಳು (ಗ್ಲೇಷಿಯಱ್ಸ್) ಕರಗಲಾರಂಭಿಸಿದ್ದು, ಇದು ನಿರಂತರವಾಗಿ ಸಾಗರ ಮಟ್ಟ ಏರಿಕೆಗೆ ಕಾರಣವಾಗುತ್ತಿದೆ. ಇದರಿಂದ ಮುಂದೊಂದು ದಿನ ಕರಾವಳಿ ಭೂ ಭಾಗಗಳ ಭಾರಿ ಅನಾಹುತಕ್ಕೆ ತುತ್ತಾಗುವ ಸಂಭವವಿದೆ ಎಂದು ನಾಸಾದ ಜೆಟ್ ಫ್ರೂಪುಲ್‌ಷನ್ ಲ್ಯಾಬೊರೆಟ್‌‌ನ ವಿಜ್ಞಾನಿಗಳು ಇತ್ತೀಚಿನ ತಮ್ಮ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

ತಾಪಮಾನ ಏರಿಕೆಯಿಂದ ಕರಗುವ ಹಿಮ ನದಿಗಳು ಸಮುದ್ರ ಜಲ ಚರಗಳ ಮೇಲೆ ಬೀರುವ ಪ್ರತಿಕೂಲ ಪರಿಣಾಮಗಳ ಕುರಿತಂತೆ ಇತ್ತೀಚೆಗೆ ಡೆನ್ಮಾರ್ಕ್‌ನ ಆರ್ಥನ್ ವಿ.ವಿ. ವಿಜ್ಞಾನಿಗಳ ತಂಡ ವರದಿ ಮಾಡಿದೆ. ಹಿಮ ನದಿಗಳ ಕರಗುವಿಕೆಯಿಂದ ಸಾಗರ ಮೇಲ್ಮೆ ಭಾಗದಲ್ಲಿ ಸಿಹಿ ನೀರಿನ ಪ್ರಮಾಣ ಏರಿಕೆ ಯಾಗಲಿರುವುದರಿಂದ ತಳಭಾಗದಲ್ಲಿರುವ ಕ್ಷಾರಭರಿತ ಪೌಷ್ಠಿಕ ಅಂಶಗಳುಳ್ಳ ನೀರು ಮೇಲ್ಭಾಗಕ್ಕೆ ಬರಲು ತಡೆಯಾಗುತ್ತದೆ. ಇದರಿಂದ ಆಲ್ಗೆಯಂತಹ ಸಸ್ಯಹಾರ ಕೊರತೆಯಾಗಿ ಇದು ಜಲಚರಗಳಿಗೆ ಆಹಾರ ಕೊರತೆಯನ್ನು ಉಂಟು ಮಾಡುತ್ತದೆ ಎಂದು ವರದಿಯಲ್ಲಿ ಹೇಳಿದೆ.
ಹೀಗೆ ಸಂಕಷ್ಟಕ್ಕೆ ತುತ್ತಾಗುವ ಕರಾವಳಿ ಭೂಭಾಗವನ್ನು ಜಾಗತಿಕವಾಗಿ ಭಾರಿ ಪ್ರಮಾಣ ಭೂ ಭಾಗವನ್ನು ವ್ಯಾಪಿಸಿದೆ. ಒಂದು ಅಂದಾಜಿನಂತೆ ವಿಶ್ವದಲ್ಲಿ 293 ಬಂದರು ನಗರಗಳು ಈ ವ್ಯಾಪ್ತಿಗೆ ಬರುತ್ತದೆ. ಭಾರತದಲ್ಲಿಯು ಇಂತಹ ಬಂದರು ನಗರಗಳಲ್ಲಿ ಕರ್ನಾಟಕದ ಮಂಗಳೂರು, ಮಹಾರಾಷ್ಟ್ರದ ಮುಂಬೈ ಕೂಡ ಸೇರಿವೆ. ಹಿಮ ನದಿಗಳು ಕರಗುವಿಕೆಯಿಂದ ಸಾಗರ ಮಟ್ಟ ಏರಿ, ತಟವರ್ತಿ ಭೂ ಭಾಗಗಳು ನೀರಿನಲ್ಲಿ ಮುಳುಗಡೆಯಾಗುವ ಕುರಿತಂತೆ ಬಂದಿರುವ ವರದಿಗಳು ಹೆಚ್ಚಿನ ಆತಂಕಕ್ಕೆ ಎಡೆಮಾಡಿಕೊಟ್ಟಿವೆ.
ಜಲಚರಿಗಳ ಮೇಲೆ
ತಾಪಮಾನ ಏರಿಕೆ, ಅರರಿಂದ ಹಿಮ ರಾಶಿಗಳು ಕರಗುವಿಕೆಯಿಂದ ಸಮುದ್ರ ಜೀವರಾಶಿಯನ್ನು ಅಳಿವಿನಂಚಿಗೆ ತರುವ ಅಪಾಯ ಕುರಿತಂತೆ ಡೆನ್ಮಾರ್ಕ್‌ನ ಆರ್ಥನ್ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳ ತಂಡ ಇತ್ತೀಚೆಗೆ ತಮ್ಮ ಅಧ್ಯಯನ ವರದಿಯಲ್ಲಿ ಹೇಳಿದೆ.
ಗ್ರೀನ್ ಲ್ಯಾಂಡ್‌ನಲ್ಲಿರುವ ಹಿಮ ಬಂಡೆ, ನದಿಗಳು ಕರಗುವಿಕೆಯಿಂದಾಗಿ ಸಮುದ್ರದ ಮೇಲ್ಮೈಯಲ್ಲಿ ಸಿಹಿ ನೀರಿನ ಪ್ರಮಾಣ ಏರಿಕೆಯಾಗುತ್ತದೆ.
ಈ ಸಿಹಿ ನೀರಿನ ಮೇಲ್ಪದರ ಸಮುದ್ರ ದಾಳದಲ್ಲಿಯ ಲವಣ ಮಿಶ್ರಿತ ಪೌಷ್ಠಿಕಾಂಶದಿಂದ ಕೂಡಿರುವ ನೀರು ಸಮುದ್ರದ ಮೇಲು ಭಾಗಕ್ಕೆ ಬರುವುದನ್ನು ತಡೆಯುತ್ತದೆ. ಆಲ್ಗೆ ಯಂತಹ ಸಸ್ಯಹಾರ ಉತ್ಪತ್ತಿಗೆ ಲವಣ ಮಿಶ್ರಿತ ನೀರು ಅವಶ್ಯಕ. ಈ ನೀರು ಸೂರ್ಯನ ಕಿರಣಗಳ ಸಹಾಯದಿಂದ ಸಸ್ಯಹಾರವನ್ನು ಉತ್ಪತ್ತಿ ಮಾಡುತ್ತದೆ. ಈ ಉತ್ಪತ್ತಿಗೆ ಕೊರತೆಯಾದರೆ ಸಮುದ್ರ ಜೀವಿಗಳ ಆಹಾರ ಸರಪಳಿ ಕುಂಟಿತಗೊಳ್ಳುತ್ತದೆ. ಇದರಿಂದ ಮೀನಿನ ಸಂತತಿ ನಶಿಸಿ ಹೋಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

Leave a Comment