ಕಮಲಿ ಧಾರಾವಾಹಿಗೆ ಹೊಸ ಟ್ವಿಸ್ಟ್- 300 ಕಂತು ಪೂರೈಕೆ

ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗ್ರಾಮೀಣ ಸೊಗಡಿನ ಕಥಾ ಹಂದರವಿರುವ ಜನಪ್ರಿಯ ಧಾರಾವಾಹಿ ’ಕಮಲಿ’ ೩೦೦ ಕಂತುಗಳನ್ನು ಪೂರೈಸಿ ಪ್ರೇಕ್ಷಕರ ಮನ ಗೆದ್ದು ಮುನ್ನುಗುತ್ತಿದೆ.
ವಿದ್ಯಾಭ್ಯಾಸಕ್ಕಾಗಿ ಹಳ್ಳಿಯಿಂದ ನಗರಕ್ಕೆ ಬರುತ್ತಾಳೆ ಕಮಲಿ. ಆದರೆ ಕಮಲಿ ಹಲವು ಏಳು ಬೀಳುಗಳನ್ನು ಎದುರಿಸಬೇಕಾಗುತ್ತದೆ. ಅವಳ ಸ್ವಂತ ಅಜ್ಜಿ ಅನ್ನಪೂರ್ಣ ಮಹಾಜನ್ ಎದುರಿಗೆ ಇದ್ದರೂ ಕಮಲಿಗೆ ಗೊತ್ತೆ ಆಗುವುದಿಲ್ಲ. ತಾಯಿ ಸರೋಜ ಉರುಫ್ ಗೌರಿ ತನ್ನ ಪುತ್ತಿಯ ಸತ್ಯವನ್ನು ಪತಿ ಚಂದ್ರಕಾಂತ್ ಹಾಗೂ ಅನ್ನಪೂರ್ಣರಿಂದ ಮುಚ್ಚಿಟ್ಟಿರುತ್ತಾಳೆ.
ಅದಕ್ಕೆ ಕಾರಣವೂ ಇದೆ.ಕಾಮಿನಿಯಿಂದ ಕಮಲಿಯ ಪ್ರಾಣಕ್ಕೆ ಅಪಾಯವಾಗಬಾರದೆಂಬ ಉದ್ದೇಶದಿಂದ ಸರೋಜ ಈ ವಿಷಯವನ್ನು ಬಹಿರಂಗಪಡಿಸುವುದಿಲ್ಲ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ರಿಷಿ ಸರ್ ತಮ್ಮ ಮನಸ್ಸಿನಲ್ಲಿರುವ ಪ್ರೀತಿಯನ್ನು ಇನ್ನೂ ವ್ಯಕ್ತಪಡಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಆದರೆ ಕಮಲಿ ಧಾರಾವಾಹಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇಡೀ ಧಾರಾವಾಹಿಯ ಕಥೆಯ ವೇಗವನ್ನು ಬದಲಾಯಿಸುವ ಹಂತಕ್ಕೆ ಬಂದು ನಿಂತಿದೆ. ಅನ್ನಪೂರ್ಣ ಮಹಾಜನ್ ಕಮಲಿಯೇ ತನ್ನ ಮೊಮ್ಮಗಳು ಎಂದು ಮಾಧ್ಯಮದವರ ಮುಂದೆ ಬಹಿರಂಗಪಡಿಸಿದ್ದಾರೆ.
ಆದರೆ ಆಸ್ತಿಯನ್ನು ಕಸಿದುಕೊಳ್ಳಲು ಸಂಚು ರೂಪಿಸುತ್ತಿರುವ ಕಾಮಿನಿ, ಊರ್ಮಿಳ ಮತ್ತು ಅನಿಕಾ ಮಾತ್ರ ಇದನ್ನು ನಂಬಲು ಸಿದ್ದರಿಲ್ಲ. ಮತ್ತೊಂದೆಡೆ ರಿಷಿ ತಾಯಿ ತಾರಾಗೆ ಕಮಲಿಯೇ ಹಿರಿಯ ಮೊಮ್ಮಗಳು ಎಂದಾದರೆ ರಿಷಿ ಜತೆ ಮದುವೆ ಮಾಡುವ ಯೋಚನೆ ಬರುತ್ತದೆ.ಆದರೆ ಕಮಲಿಯನ್ನು ಹೇಗೆ ಸೊಸೆ ಎಂದು ಒಪ್ಪಿಕೊಳ್ಳುವುದೆಂಬ ಪ್ರಶ್ನೆ ಆಕೆಯನ್ನು ಕಾಡುತ್ತದೆ.
ವಿಷಯ ಏನು ಅಂತಾ ಅಂದ್ರೆ ಕಮಲಿಯೇ ತನ್ನ ನಿಜವಾದ ಮೊಮ್ಮಗಳು ಎಂಬುದು ಗೊತ್ತೆ ಇರುವುದಿಲ್ಲ. ಆಸ್ತಿ ಬೇರೆಯವರ ಪಾಲಾಗಬಾರದು. ತಮ್ಮ ಕುಟುಂಬದ ಮೇಲೆ ಅನ್ಯರ ವಕ್ರ ದೃಷ್ಟಿ ಬಿದ್ದಿದೆ. ಯಾರನ್ನೋ ತನ್ನ ಮೊಮ್ಮಗಳೆಂದು ನಂಬಿಸುವ ಮಟ್ಟಕ್ಕೆ ಹೋಗಿದ್ದಾರೆ. ಇಂತಹ ಕೆಟ್ಟ ಉದ್ದೇಶಗಳನ್ನು ತಡೆಯಲು ಅನ್ನಪೂರ್ಣ ಕಮಲಿಯ ಬಳಿ ಬಂದು ನಿಜವಾದ ಮೊಮ್ಮಗಳು ಬರುವ ತನಕ ನೀನೆ ತನ್ನ ಮೊಮ್ಮಗಳಂತೆ ಅಭಿನಯಿಸುವಂತೆ ಕೇಳಿಕೊಳ್ಳುತ್ತಾಳೆ. ಅನ್ನಪೂರ್ಣ ಅವರ ಕೋರಿಕೆಗೆ ಕಮಲಿ ಒಪ್ಪಿಕೊಳ್ಳತ್ತಾಳೆ.
ಈ ಧಾರಾವಾಹಿಯಲ್ಲಿ ವಿಧಿಯಾಟವನ್ನು ನೋಡುತ್ತಾ ತಾತಾ ಸದಾನಂದ ಕಮಲಿಯೇ ಮೊಮ್ಮಗಳು ಎಂದು ತಿಳಿಯುವ ಕಾಲ ಸಮೀಪಿಸಿಯೇ ಬಿಟ್ಟಿತು ಎಂದು ನೆಮ್ಮದಿಯ ನಿಟ್ಡುಸಿರು ಬಿಡುತ್ತಾನೆ. ಅಂದ ಹಾಗೆ ತನಗೆ ಪ್ರಾಣಾಪಾಯ ಇರುವ ಮನೆತನಕ್ಕೆ ಕಮಲಿ ಮೊಮ್ಮಗಳಾಗಿ ನಟಿಸಲು ತನಗೆ ಅರಿವಿರದೆ ಒಪ್ಪಿಕೊಂಡಿರುತ್ತಾಳೆ ಕಮಲಿ.

ಕಮಲಿ ಧಾರಾವಾಹಿ ಇದೀಗ ಟಾಪ್ ೨ರಲ್ಲಿ ಸ್ಥಾನ ಗಳಿಸಿದ್ದು, ರಾಜ್ಯಾದ್ಯಾದಂತ ಕಮಲಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮೊದಲಿನಿಂದಲೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದ ಕಮಲಿ ೩೦೦ ಕಂತು ಪೂರೈಸಿದ ಬಳಿಕವೂ ಅದೇ ಯಶಸ್ಸುನ್ನು ಮುಂದುವರೆಸುವತ್ತ ಗಮನ ಹರಿಸಿದೆ. ಸಂಜೆ ಆಗುತ್ತಲೇ ಕಮಲಿ ಕಥೆ ತಿಳಿಯಲು ಜನರು ಕೌತುಕದಿಂದ ಟಿವಿ ಮುಂದೆ ಕೂರುತ್ತಿದ್ದಾರೆ. 

ಒಂದೆಡೆ ಕಮಲಿಯನ್ನು ಕೊಲೆ ಮಾಡಲು ಕಾಮಿನಿ. ಅನಿಕಾ ಮತ್ತು ಊರ್ಮಿಳಾ ಕತ್ತಿ ಮಸೆಯುತ್ತಿರುತ್ತಾರೆ. ತಾಯಿ ಸರೋಜ ದೂರವಿದ್ದರೂ ಕಮಲಿಯನ್ನು ಮೊಮ್ಮಗಳು ಎಂದು ಬಿಂಬಿಸಿರುವ ಅನ್ನಪೂರ್ಣ ಕಮಲಿಯನ್ನು ಕಾಪಾಡುತ್ತಾರೆಂಬ ನಂಬಿಕೆಯಲ್ಲಿರುತ್ತಾಳೆ ಸರೋಜ.ಇನ್ನೊಂದೆಡೆ ರಿಷಿ ಕಮಲಿಯೇ ಅನ್ನಪೂರ್ಣ ಅವರ ಹಿರಿಯ ಮಗಳು ಎಂದಾದರೆ ತನ್ನ ವಿವಾಹ ಕಮಲಿ ಜತೆ ಖಚಿತ ಎಂಬ ನಂಬಿಕೆಗೆ ಬಂದುಬಿಡುತಗತ್ತಾನೆ. ಹೀಗೆ ಧಾರಾವಾಹಿಯಲ್ಲಿ ಒದೊಂದೆ ತಿರುವುಗಳು ಪಡೆದುಕೊಳ್ಳುತ್ತಾ ಸಾಗುತ್ತದೆ.
ಇವೆಲ್ಲದರ ನಡುವೆ ಕಮಲಿಗೆ ಯಾರೋ ಅನ್ನಪೂರ್ಣ ಅವರಿಗೆ ಯಾರೊ ಮೋಸ ಮಾಡಲು ಯತ್ನಿಸುತ್ತಿದ್ದು ಅವರನ್ನು ಹಿಡಿದು ಅನ್ನಪೂರ್ಣ ಮುಂದೆ ತಂದು ನಿಲ್ಲಿಸುವ ತಯಾರಿಯಲ್ಲಿರುತ್ತಾರೆ. ಆದರೆ ವಿಧಿಯಾಟವೇ ಬೇರೆಯಾಗಿರುತ್ತದೆ. ಕಾಮಿನಿ, ಗೌರಿ (ಕಮಲಿ ತಾಯಿ)ಯನ್ನು ಹುಡುಕುತ್ತಿರುವಾಗಲೆ ಕಮಲಿ ಮಹಾಜನ್ ಕುಟುಂಬದ ಹಿರಿಯ ಮೊಮ್ಮಗಳಾಗಿ ಬಂದಿದ್ದು ಆಶ್ಚರ್ಯ ಎನಿಸಿದರೂ ಅವಳನ್ನು ಮುಗಿಸಲುವ ಪಿತೂರಿ ಮಾಡುತ್ತಾಳೆ.
ಕಾಮುನಿ, ಅನಿಕಾ ಏನೇ ಮಾಡಲು ಹೊರಟರು ಕಮಲಿಯ ಅಸಲಿ ಸತ್ಯ ಗೊತ್ತಾಗಿಬಿಡುತ್ತದೆ. ಕಮಲಿ ಇದನ್ನೆಲ್ಲಾ ಹೇಗೆ ನಿರ್ವಹಿಸುತ್ತಾಳೆ ರಿಷಿ,ಕಮಲಿಗೆ ಏನೇ ಮಾಡಲು ಹೊರಟರು ಕಮಲಿಯ ಅಸಲಿಯತ್ತು ಹೊರಗೆ ಬರುತ್ತದೆ ಎಂಬ ಆತಂಕ. ಆಗ ಕಮಲಿ ರಿಷಿಯ ಪ್ರೀತಿ ಒಪ್ಪುತ್ತಾಳೆಯೇ? ಹೀಗೆ ಧಾರಾವಾಹಿ ಇನ್ನಷ್ಟು ಕುತೂಹಲ ಘಟ್ಟದತ್ತ ಸಾಗಲಿದೆಯೇ? ಎಂಬುದನ್ನು ತಿಳಿದುಕೊಳ್ಳಬೇಕೆಂಬ ಪ್ರೇಕ್ಷಕರ ಕಾತುರತೆಯನ್ನು ಹಿಡಿದಿಟ್ಟುಕೊಳ್ಳಲು ವೇದಿಕೆ ಅಣಿಯಾಗುತ್ತಿದೆ. ಕಮಲಿ ಧಾರಾವಾಹಿಯಲ್ಲಿ ಮುಂದೇನಾಗುತ್ತದೆ ಎಂಬ ಕುತೂಹಲ ಕಾಡುತ್ತಿದ್ದರೆ ಪ್ರತಿ ರಾತ್ರಿ ೭ಕ್ಕೆ ತಪ್ಪದೇ ಜೀ ಕನ್ನಡದಲ್ಲಿ ವೀಕ್ಷಿಸಿ.

 

Leave a Comment