ಕಬ್ಬಿನ ಹಾಲಿನ ಉಪಯೋಗ

ಮೂತ್ರನಾಳಗಳಲ್ಲಿ ಉಂಟಾಗುವ ಸೊಂಕಿಗೆ ಕಬ್ಬಿನಹಾಲಿನ ಜ್ಯೂಸ್ ಉತ್ತಮ. ಇದು ಸೋಂಕನ್ನು ದೂರ ಮಾಡುವುದರ ಜೊತೆಗೆ ಕಿಡ್ನಿ ಕಲ್ಲುಗಳು ಹೊರಹೊಗಲು ಸಹಾಯ ಮಾಡುತ್ತದೆ, ಮತ್ತು ಸ್ಟೋನ್ ಉಂಟಾಗದಂತೆ ತಡೆಯುತ್ತದೆ.

ಕಬ್ಬಿನ ಹಾಲಿನಲ್ಲಿ ಅನೇಕ ರೀತಿಯ ಮಿನರಲ್‌ಗಳಿವೆ. ಇವು ಬಾಯಿಯ ಆರೋಗ್ಯವನ್ನು ಕಾಪಾಡಿ, ವಾಸನೆಯುಕ್ತ ಉಸಿರಾಟ, ಹಲ್ಲು ಹಾಳಾಗುವುದನ್ನು ತಡೆಯುತ್ತದೆ.

19-aa2

ಕಬ್ಬಿನಹಾಲು ತ್ವಚೆಯ ಆರೋಗ್ಯಕ್ಕೂ ಉತ್ತಮ. ಇ ಕ್ಯೂಸುನ್ನು ಸೇವಿಸುವುದರಿಂದ ತ್ವಚೆ ಮೃದುವಾಗುತ್ತದೆ. ಹಾಗೆ ಕಾಂತಿಯುತವಾಗಿ ಆರೋಗ್ಯವಾಗಿರುತ್ತದೆ. ತ್ವಚೆ ಸದಾ ಯಂಗ್ ಆಗಿ ಕಾಣುವಂತೆ ಮಾಡಲು ಕಬ್ಬಿನಹಾಲು ಸಹಕಾರಿ.

ಕಬ್ಬಿನ ಹಾಲಿನಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ಪೊಟ್ಯಾಶಿಯಮ್ ಹಾಗು ಇತರೆ ಪೌಷ್ಟಿಕಾಂಶಗಳಿರುವುದರಿಂದ ದೇಹಕ್ಕೆ ತ್ವರಿತವಾಗಿ ಎನರ್ಜಿಯನ್ನು ನೀಡುತ್ತದೆ. ಸುಸ್ತು, ಅಶಕ್ತತೆ ಎನಿಸಿದಾಗ ಕಬ್ಬಿನಹಾಲು ಸೇವಿಸಿ, ಆರಾಮ ಸಿಗುತ್ತದೆ.

ಸ್ತನ ಕ್ಯಾನ್ಸರ್ ಮತ್ತು ಪ್ರೊಸ್ಟೆಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಕೂಡ ಕಬ್ಬಿನಹಾಲಿನ ಜ್ಯೂಸ್ನ್ನು ಸೇವಿಸಿಲು ಸಲಹೆ ನೀಡಲಾಗುತ್ತದೆ.

ಕಬ್ಬಿನಹಾಲಿನಲ್ಲಿ ಪೊಟ್ಯಾಶಿಯಮ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಜೊತೆಗೆ ವಿವಿಧ ರೀತಿಯ ಸೋಂಕುಗಳಿಂದ ಜಿರ್ಣಾಂಗವ್ಯವಸ್ಥೆ ಮತ್ತು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

ಜಾಯಿಂಡೀಸ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕಬ್ಬಿನಹಾಲನ್ನು ಸೇವಿಸಲು ಸಲಹೆ ನೀಡುತ್ತಾರೆ. ಏಕೆಂದರೆ ಕಬ್ಬಿನಹಾಳು ಲಿವರ್ಗೆ ಶಕ್ತಿ ನೀಡುತ್ತದೆ ಮತ್ತು ಜಾಯಿಂಡೀಸ್ ಸಮಸ್ಯೆಯಿಂದ ಕಳೆದುಹೋದ ಪೌಷ್ಠಿಕಾಂಶವನ್ನು ಮರಳಿ ನೀಡುತ್ತದೆ.

Leave a Comment