ಕಬ್ಬಿಣಾಂಶದ ಆಗರ-ನೆಲ್ಲಿಕಾಯಿ

ನೆಲ್ಲಿಕಾಯಿ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಅದರ ಸೇವನೆಯಿಂದ ನಮ್ಮ ಆರೋಗ್ಯ ಸುಧಾರಣೆಗೆ ನೆರವಾಗಲಿದೆ. “ಭಾರತೀಯ ಗ್ರೋಸ್ಬೆರಿ” ಎಂದೇ ಕರೆಯಲ್ಪಡುವ ನೆಲ್ಲಿಕಾಯಿಯನ್ನು ಆಮ್ಲಾ ಪೋಷಕಾಂಶಗಳ ಶಕ್ತಿ ಎಂದು ಹೇಳಲಾಗುತ್ತಿದೆ.
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಹಿಡಿದು ದೊಡ್ಡ ಸಮಸ್ಯೆಗಳ ನಿವಾರಣೆಗೂ ದಿವ್ಯ ಔಷಧಿಯನ್ನಾಗಿ ನೆಲ್ಲಿಕಾಯಿಯನ್ನು ಬಳಸಬಹುದಾಗಿದೆ. ವಿಟಮಿನ್ ‘ಸಿ’ ಯನ್ನು ಸಮೃದ್ಧವಾಗಿರುವ ನೆಲ್ಲಿಕಾಯಿ ಕಬ್ಬಿಣಾಂಶದ ಆಗರ ಎಂದೇ ಹೇಳಬಹುದಾಗಿದೆ.
ನೆಲ್ಲಿಕಾಯಿ ತಿನ್ನಲು ಸ್ವಲ್ಪ ಒಗರು, ಹಾಗೂ ಕಹಿ. ಆದರೆ, ಇತರೆ ಹಣ್ಣು, ತರಕಾರಿ ಹಾಗೂ ಟಾನಿಕ್ ಔಷಧಿಗಳಿಗಿಂತ ಹೆಚ್ಚು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ಇದರ ರಸ ಕುಡಿಯುವುದರಿಂದ ಅಥವಾ ಹಾಗೆಯೇ ತಿಂದರೂ ಆರೋಗ್ಯ ಸುಧಾರಣೆ ಸಹಕಾರಿಯಾಗುತ್ತದೆ.
ಒಂದು ಗ್ಲಾಸ್ ರಸವನ್ನು ಸೇವಿಸಿದರೆ, ದೇಹದಲ್ಲಿನ ಕೊಬ್ಬು ಕರಗಿಸುವಲ್ಲಿ ನೆರವಾಗುತ್ತದೆ. ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಹಾಗೂ ಮಲಬದ್ಧತೆ ಉಂಟಾಗುವುದನ್ನು ತಡೆಯುತ್ತದೆ. ಮಿತ ಪ್ರಮಾಣದಲ್ಲಿ ರಸ ಸೇವಿಸುವ ಬಗ್ಗೆ ಕಾಳಜಿ ಇರಬೇಕಷ್ಟೆ.
ನೆಲ್ಲಿಕಾಯಿ ರಸದಲ್ಲಿ ನಾರಿನಾಂಶ ( ಫೈಬರ್) ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆ ಸುಸೂತ್ರವಾಗಿ ನಡೆಯಲಿದೆ. ಮಾತ್ರವಲ್ಲದೆ ರಕ್ತ ಶುದ್ಧೀಕರಣದಲ್ಲಿ ಪಾತ್ರ ನಿರ್ವಹಿಸಲಿದೆ. ರಕ್ತ ಶುದ್ಧೀಕರಣದೊಂದಿಗೆ ಚರ್ಮದ ಹೊಳಪು ವೃದ್ಧಿಯಾಗಲಿದೆ.
ನಿತ್ಯ ನಿಯಮಿತವಾಗಿ ನೆಲ್ಲಿಕಾಯಿ ರಸವನ್ನು ಸೇವನೆ ಮಾಡುವುದರಿಂದ ದೃಷ್ಠಿ ದೋಷಗಳು ನಿವಾರಣೆಯಾಗುತ್ತವೆ. ಇದರಲ್ಲಿನ ‘ಸಿ’ ವಿಟಮಿನ್‌ನಿಂದ ಕಣ್ಣಿನ ಸ್ನಾಯುಗಳ ಬಲವೃದ್ಧಿಯಾಗಲಿದೆ.
ಮಧುಮೇಹವನ್ನು ನಿಯಂತ್ರಣದಲ್ಲಿಡಲು ನೆಲ್ಲಿಕಾಯಿ ರಸ, ನೈಸರ್ಗಿಕ ಔಷಧಿಯಾಗಿ ಕಾರ್ಯ ನಿರ್ವಹಿಸಲಿದೆ. ರಸ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇನ್ಸುಲಿನ್ ಸ್ರವಿಕೆಯನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ ವೃದ್ಧಿಗೂ ನೆಲ್ಲಿಕಾಯಿ ಸಹಕಾರಿ, ಇದರ ರಸ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಹೃದಯ ಹಾಗೂ ಹೃದಯ ನಾಳಗಳಲ್ಲಿ ಉಂಟಾಗುವ ಕೆಲವು ಅಡೆ ತಡೆಗಳನ್ನು ದೂರ ಮಾಡಲಿದೆ.
ಮೂಳೆಗಳ ಸದೃಢತೆ ಕಾಪಾಡಲು ನೆಲ್ಲಿಕಾಯಿ ನೆರವಾಗುತ್ತದೆ. ಮೂಳೆಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂ, ನೆಲ್ಲಿಕಾಯಿ ರಸದಿಂದ ದೊರೆಯಲಿದೆ. ಮೂಳೆಗಳು ಸಕಾರಾತ್ಮಕ ರೀತಿಯಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಂತೆ ಮಾಡಲಿದೆ.
ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ನೆಲ್ಲಿಕಾಯಿ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ, ಸಮಸ್ಯೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ. ಕ್ಯಾನ್ಸರ್ ರೋಗಕ್ಕೂ ಇದನ್ನು ಮದ್ದು ಆಗಿ ಬಳಸಬಹುದೆಂದು ಹೇಳಲಾಗಿದೆ.

Leave a Comment