ಕಬೀರ್ ಸಿಂಗ್’ ಚಿತ್ರದ ಎಫೆಕ್ಟ್: ಹುಡುಗಿಯನ್ನು ಕೊಂದ ಟಿಕ್ ಟಾಕ್ ಸ್ಟಾರ್

 

ಶಾಹೀದ್ ಕಪೂರ್ ನಟಿಸಿದ್ದ ಸೂಪರ್ ಹಿಟ್ ‘ಕಬೀರ್ ಸಿಂಗ್’ ಚಿತ್ರವನ್ನ ಬಹಳ ಇಷ್ಟ ಪಟ್ಟಿದ್ದ ಉತ್ತರ ಪ್ರದೇಶದ ಟಿಕ್ ಟಾಕ್ ಖ್ಯಾತಿಯ ಜಾನಿದಾದಾ, ತಾನು ಪ್ರೀತಿಸಿದ ಹುಡುಗಿಯನ್ನ ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಾನು ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗಲು ನಿರಾಕರಿಸಿ, ಇನ್ನೊಬ್ಬ ವ್ಯಕ್ತಿಯ ಜೊತೆ ವಿವಾಹವಾಗಲು ಸಜ್ಜಾಗಿದ್ದರು. ಈ ವಿಷಯ ತಿಳಿದ ಜಾನಿದಾದಾ, ‘ನನಗೆ ಸಿಗದವರು, ಬೇರೆ ಯಾರಿಗೂ ಸಿಗಬಾರದು’ ಎಂಬ ಕಾರಣಕ್ಕಾಗಿ ಆಕೆಯನ್ನ ಕೊಂದಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹುಡುಗಿಯನ್ನ ಕೊಲೆ ಮಾಡಿ ತಲೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಜಾನಿದಾದಾ ಅಲಿಯಾಸ್ ಅಶ್ವಿನ್ ಕುಮಾರ್, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಯುವತಿ ಹೆಸರು ನಿಖಿತಾ ಶರ್ಮಾ ಎಂದು ತಿಳಿದುಬಂದಿದೆ. ಇನ್ನು ಜಾನಿ ದಾದಾ ಅವರ ಬಗ್ಗೆ ತನಿಖೆ ನಡೆಸಿದಾಗ, ಆತ ಕಬೀರ್ ಸಿಂಗ್ ಚಿತ್ರದಿಂದ ಬಹಳಷ್ಟು ಪ್ರಭಾವಿತನಾಗಿದ್ದನು ಎಂಬುದು ತಿಳಿದುಬಂದಿದೆ. ಕಬೀರ್ ಸಿಂಗ್ ಸಿನಿಮಾದ ಆ ನಾಯಕನ ಪಾತ್ರದಿಂದ ಸ್ಪೂರ್ತಿ ಪಡೆದುಕೊಂಡಿದ್ದ ಜಾನಿ ದಾದಾ ಹಲವು ಟಿಕ್ ಟಾಕ್ ವಿಡಿಯೋಗಳನ್ನ ಮಾಡಿದ್ದನಂತೆ.
ಕೊನೆಯದಾಗಿ, ಕಬೀರ್ ಸಿಂಗ್ ಚಿತ್ರದ ಫೇಮಸ್ ಡೈಲಾಗ್ ‘ನನಗೆ ಸಿಗದವರು, ಬೇರೆ ಯಾರಿಗೂ ಸಿಗಬಾರದು’ ಎಂಬ ವಿಡಿಯೋವನ್ನ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಕೊಲೆಯಾಗಿರುವುದಕ್ಕೂ, ಆ ವಿಡಿಯೋ ಮಾಡಿರುವುದಕ್ಕೂ ಸಂಬಂಧವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕಬೀರ್ ಸಿಂಗ್ ಚಿತ್ರದ ನಿರ್ದೇಶಕ ಸಂದೀಪ್ ವಂಗಾ ಪ್ರತಿಕ್ರಿಯಿಸಿದ್ದು, ”ಆ ಯುವತಿಗೆ ಮತ್ತು ಅವರ ಕುಟುಂಬಕ್ಕೆ ನಾನು ಕ್ಷಮೆ ಕೇಳುತ್ತೇನೆ. ಸಿನಿಮಾಗಳನ್ನ ಯಾರೂ ಕೆಟ್ಟ ಉದ್ದೇಶದಿಂದ ಮಾಡುವುದಿಲ್ಲ. ಕೊಲೆ ಮಾಡುವುದನ್ನ ಕಬೀರ್ ಸಿಂಗ್ ಸಿನಿಮಾ ಬೆಂಬಲಿಸುವುದಿಲ್ಲ” ಎಂದಿದ್ದಾರೆ.

Leave a Comment