ಕಬಿನಿ ಹಿನ್ನೀರಿನಲ್ಲಿ ಚಿರತೆ ಮೃತದೇಹ ಪತ್ತೆ

ಹೆಚ್.ಡಿ.ಕೋಟೆ. ಆ.4- ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಇತ್ತೀಚೆಗೆ ಹೆಣ್ಣು ಹುಲಿಯ ಮೃತದೇಹವೊಂದು ಪತ್ತೆಯಾಗಿತ್ತು. ಇದೀಗ ಚಿರತೆಯ ಮೃತದೇಹ ಪತ್ತೆಯಾಗಿದೆ.
ಕಾಡುಪ್ರಾಣಿಗಳ ಸಾವು ಮುಂದುವರಿದಿದ್ದು, ಸ್ಥಳೀಯರಲ್ಲಿ ಆತಂಕ ಕಾಡಿದೆ. ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿಗೆ ನುಗ್ಗುವುದು ಸಾಮಾನ್ಯವೆನಿಸಿದರೂ ಮರಣ ಸಂಭವಿಸಿದ ಕುರಿತು ವರದಿಯಾಗಿರಲಿಲ್ಲ. ಆದರೆ ಕಳೆದೆರಡು ದಿನಗಳ ಹಿಂದೆ ಕಬಿನಿ ಹಿನ್ನೀರಿನಲ್ಲಿ ಹೆಣ್ಣು ಹುಲಿಯೊಂದರ ಮೃತದೇಹ ಪತ್ತೆಯಾಗಿತ್ತು. ಆದರೆ ಇಂದು ಕಬಿನಿ ಜಲಾಶಯದ ಪಕ್ಕದಲ್ಲಿ ಚಿರತೆಯೊಂದರ ಮೃತ ದೇಹಪತ್ತೆಯಾಗಿದೆ. ಕಾಡುಪ್ರಾಣಿಗಳು ನೀರಿನ ಸಮೀಪ ಬಂದ ಸಾವನ್ನಪ್ಪುತ್ತಿದ್ದು, ಈ ಕುರಿತು ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಜಲಾಶಯಗಳ ಬಳಿ ಬರದಂತೆ ತಡೆಯಲು ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Comment