ಕಬಡ್ಡಿಯಲ್ಲಿ ಮಿನುಗುತ್ತಿರುವ ಕವಿತಾ ಠಾಕೂರ್

ಇಂಡೋ ನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.  ಈಗಾಗಲೇ ಸ್ಪರ್ಧೆಯಲ್ಲಿ ರೈತನ ಪುತ್ರ ಸೌರಭ್ ಚೌಧರಿ ಸೇರಿದಂತೆ ಅನೇಕ  ಮಂದಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಕೆಲವು ವರ್ಷಗಳ ಹಿಂದೆಯಷ್ಟೆ ಡಾಬಾದಲ್ಲಿ ಕಸ ಗುಡಿಸಿ, ತೊಳೆದು ಸ್ವಚ್ಛಗೊಳಿಸುತ್ತಿದ್ದ ಸಾಮಾನ್ಯ ಹುಡುಗಿ ಇಂದು ಇಂಡೋನೇಷ್ಯಾದಲ್ಲಿ ಆರಂಭವಾಗುತ್ತಿರುವ ಏಷ್ಯನ್ ಗೇಮ್ಸನಲ್ಲಿ ಚಿನ್ನ ಗೆಲ್ಲಲು ವಿಮಾನ ಹತ್ತಿ ಇಂದು ಪ್ರಮುಖ ಕೇಂದ್ರಬಿಂದುವಾಗಿ ದ್ದಾರೆ. ಹೌದು, ಹಿಮಾಚಲ ಪ್ರದೇಶದ ಬಡ ಹುಡುಗಿ ಕವಿತಾ ಠಾಕೂರ್ ಏಷ್ಯನ್ ಗೇಮ್ಸ್‌ನಲ್ಲಿ ಆಡುತ್ತಿರುವ ಮಹಿಳಾ ಕಬಡ್ಡಿ ತಂಡದ ಪ್ರತಿಭಾನ್ವಿತ ಆಟಗಾರ್ತಿ.

ಇನ್ನೊಂದೆಡೆ ಭಾರತೀಯ ವನಿತೆಯರ ಕಬಡ್ಡಿ ತಂಡ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು, ಆಡಿದ ಪಂದ್ಯ ಗಳಲ್ಲಿ ಎದುರಾಳಿ ತಂಡವನ್ನು ಬಗ್ಗುಬಡಿಯುವಲ್ಲಿ ಯಶ್ವಸಿಯಾಗಿದೆ. ಈ ತಂಡವನ್ನು ಪಾಯಲ್ ಚೌಧರಿ ಬಹಳು ಅಚ್ಚುಕಟ್ಟಾಗಿ ನಿಭಾಸಿಕೊಂಡು ಹೋಗುತ್ತಿದ್ದಾರೆ ಎನ್ನಬಹದು. ಇನ್ನು ಇದೇ ತಂಡದಲ್ಲಿ ಆಟಗಾರ್ತಿಯಾಗಿ ಗಮನ ಸೆಳೆದಿರುವ ಕವಿತಾ ಠಾಕೂರ್ ಕೂಡ ಉತ್ತಮ ಆಟ ಪ್ರದರ್ಶನದ ಜೊತೆಗೆ ಇತರರಿಗೂ ಮಾದರಿಯಾಗಿದ್ದಾರೆ.

kavita_thakur_1534571401

ಕೆಲವು ವರ್ಷಗಳ ಹಿಂದೆಯಷ್ಟೆ ಡಾಬಾದಲ್ಲಿ ಕಸ ಗುಡಿಸಿ, ತೊಳೆದು ಸ್ವಚ್ಛಗೊಳಿಸುತ್ತಿದ್ದ ಸಾಮಾನ್ಯ ಹುಡುಗಿ ಇಂದು ಇಂಡೋನೇಷ್ಯಾದಲ್ಲಿ ಆರಂಭವಾಗುತ್ತಿರುವ ಏಷ್ಯನ್ ಗೇಮ್ಸನಲ್ಲಿ ಚಿನ್ನ ಗೆಲ್ಲಲು ವಿಮಾನ ಹತ್ತಿ ಇಂದು ಪ್ರಮುಖ ಕೇಂದ್ರಬಿಂದುವಾಗಿದ್ದಾರೆ. ಹೌದು, ಹಿಮಾಚಲ ಪ್ರದೇಶದ ಬಡ ಹುಡುಗಿ ಕವಿತಾ ಠಾಕೂರ್ ಏಷ್ಯನ್ ಗೇಮ್ಸ್‌ನಲ್ಲಿ ಆಡುತ್ತಿರುವ ಮಹಿಳಾ ಕಬಡ್ಡಿ ತಂಡದ ಪ್ರತಿಭಾನ್ವಿತ ಆಟಗಾರ್ತಿ. ಆಕೆ ಈಗಲೂ ತಮ್ಮ ತಂದೆಯ ಸಣ್ಣ ಡಾಬಾದಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಾಳೆ.

ಹಿಮಾಚಲ ಪ್ರದೇಶದ ಮನಾಲಿಯಿಂದ ೬ ಕಿ.ಮೀ ದೂರದ ಜಗನ್ ಸುಖ್ ಎಂಬ ಪುಟ್ಟ ಗ್ರಾಮ ವಿದೆ. ಅದೇ ಕವಿತಾಳ ಊರು. ಅಲ್ಲಿ ಆಕೆಯ ತಂದೆಯ ಸಣ್ಣ ಡಾಬಾ ಇದೆ. ಇಲ್ಲಿ ನಿತ್ಯ ಕಸ ಗುಡಿಸುವ, ತಿಂದ ತಟ್ಟೆಗಳನ್ನು ತೊಳೆಯುವ ಕೆಲಸ ಮಾಡುತ್ತಾಳೆ.

kavita_thakur_1534571239a

ಅಲ್ಲಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಕೂಡ ಮಾಡಿ, ಮೆಚ್ಚಿನ ಕಬಡ್ಡಿ ಆಡುವುದುಕಲಿತು ಇಂದು ಅಂತರರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿದ್ದಾಳೆ ಕವಿತಾ. ತಂದೆ ಪೃಥ್ವಿಸಿಂಗ್, ತಾಯಿ ಕೃಷ್ಣಾದೇವಿ ಅವರ ಹೆಮ್ಮೆಗೆ ಕಾರಣ ರಾಗಿದ್ದಾರೆ. ೨೦೧೪ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕವಿತಾ ಸದಸ್ಯರಾಗಿದ್ದ ಕಬ್ಬಡ್ಡಿ ತಂಡ ಬಂಗಾರದ ಪದಕ ಗೆದ್ದಿತ್ತು.

ಆ ನಂತರವಷ್ಟೆ ಅವರಿಗೆ ಬಾಡಿಗೆ ಮನೆ ಹಿಡಿಯಲು ಸಾಧ್ಯವಾಗಿತ್ತು. ಅದಕ್ಕೆ ಮುಂಚೆ ಡಾಬಾದಲ್ಲಿಯೇ ವಾಸ. ಈ ಬಾರಿ ಸಹ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ವಿಶ್ವಾಸದೊಂದಿಗೆ ಕವಿತಾ ಠಾಕೂರ್ ಇಂಡೋನೇಷ್ಯಾಕ್ಕೆ ತೆರಳಿದ್ದಾರೆ. ಭಾರತದ ಬಡ ಪ್ರತಿಭೆ ಅಂತರರಾಷ್ಟ್ರೀಯಮಣ್ಣಿನಲ್ಲಿ ಮಿನುಗಲಿದೆ ಎಂಬುದು ಕ್ರೀಡಾ ಪ್ರೇಮಿಗಳ ಆಶ ಯವಾಗಿದೆ.

Leave a Comment