ಕಬಡ್ಡಿಯಲ್ಲಿ ಜಪಾನ್ ವಿರುದ್ಧ ಭಾರತ ವನಿತೆಯರಿಗೆ ಜಯ

ಜಕಾರ್ತ್, ಆ ೧೯- ಭಾರತೀಯ ವನಿತೆಯರ ಕಬಡ್ಡಿ ತಂಡ ಮೊದಲು ಗೆಲುವು ದಾಖಲಿಸುವ ಮೂಲಕ ಏಷ್ಯಾನ್ ಗೇಮ್ಸ್‌ನಲ್ಲಿ ಶುಭಾರಂಭ ಮಾಡಿದೆ.

ಪಾಯಲ್ ಚೌಧರಿ ನೇತೃತ್ವದ ಭಾರತೀಯ ವನಿತೆಯ ಕಬಡ್ಡಿ ತಂಡ ಜಪಾನ್ ತಂಡವನ್ನು ಅನಾಯಾಸವಾಗಿ ಬಗ್ಗು ಬಡಿದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಭಾರತ ತಂಡವು ೪೩-೧೨ ಅಂಕಗಳ ಬೃಹತ್ ಜಯದೊಂದಿಗೆ ಗೆಲುವಿನ ಕೇಕೆ ಹಾಕಿದೆ.

ಹಾಲಿ ಚಾಂಪಿಯನ್ ಭಾರತ ಮೊದಲಾರ್ಧದ ಆರಂಭದಲ್ಲೇ ೮-೬ರ ಮುನ್ನಡೆ ಕಾಯ್ದುಕೊಂಡಿತ್ತು. ಆ ಬಳಿ ಆಕ್ರಮಣಕಾರಿಯಾಟವಾಡಿದ ಭಾರತ ರೈಡಿಂಗ್ ಹಾಗೂ ಡಿಫೆನ್ಸ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರುವುದರೊಂದಿಗೆ ೧೯-೮ ಅಂಕಗಳೊಂದಿಗೆ ಮೊದಲಾರ್ಧ ಮುಕ್ತಾಯಗೊಳಿಸಿತು. ಇನ್ನು ದ್ವಿತಿಯಾರ್ಧದ ಆರಂಭದಲ್ಲೇ ಮತ್ತೊಮ್ಮೆ ಜಪಾನ್ ತಂಡವನ್ನು ಆಲೌಟ್ ಮಾಡಿದ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಆಬಳಿಕ ಕೇವಲ ಎರಡು ಅಂಕ ಬಿಟ್ಟುಕೊಟ್ಟು ಮತ್ತೊಮ್ಮೆ ಜಪಾನ್ ತಂಡವನ್ನು ಆಲೌಟ್ ಮಾಡುವುದರೊಂದಿಗೆ ಬರೋಬ್ಬರಿ ೨೮ ಅಂಕಗಳ ಭಾರೀ ಮುನ್ನಡೆ ಕಾಯ್ದುಕೊಂಡಿತು. ಅಂತಿಮವಾಗಿ ಭಾರತ ೪೩-೧೨ ಅಂಕಗಳ ಅಂತರದ ಬೃಹತ್ ಜಯ ಸಾಧಿಸುವ ಮೂಲಕ ಉತ್ತಮ ಆರಂಭ ಮಾಡಿದೆ.

ಇನ್ನು ಭಾರತೀಯ ಪುರಷರ ಕಬಡ್ಡಿ ತಂಡ ಕೂಡ ಗೆಲುವು ನೆಚ್ಚಿನ ತಂಡ ಎನಿಸಿಕೊಂಡಿದ್ದು, ಇಂದು ಮಧ್ಯಾಹ್ನ ಬಾಂಗ್ಲಾದೇಶ ಹಾಗೂ ಸಂಜೆ ಶ್ರೀಲಂಕಾ ತಂಡಗಳ ವಿರುದ್ಧ ಸೆಣಸಲಿದೆ.

ಪೋಟೋ ಕ್ಯಾಪ್ಶನ್
ಜಕಾರ್ತ್‌ನಲ್ಲಿ ನಡೆಯುತ್ತಿರುವ ಏಷ್ಯಾನ್ ಗೇಮ್ಸ್‌ನಲ್ಲಿ ಜಪಾನ್ ಕಬಡ್ಡಿ ತಂಡವನ್ನು ಮಣಿಸಿ ಶುಭಾರಂಭ ಮಾಡಿದ ಭಾರತೀಯ ವನಿತೆಯರ ತಂಡದ ವೈಖರಿ.

Leave a Comment