ಕಫ ಸಮಸ್ಯೆಗೆ ಮನೆ ಮದ್ದು

ಚಳಿಗಾಲದಲ್ಲಿ ಕಫದ ಸಮಸ್ಯೆ ಸಾಮಾನ್ಯ. ಸ್ವಲ್ಪ ಕಫವಾದ್ರೂ ಕೆಲವರು ವೈದ್ಯರ ಬಳಿ ಓಡ್ತಾರೆ. ಅದ್ರ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮನೆ ಮದ್ದು ಸೇವನೆ ಮಾಡುವುದು ಬಹಳ ಒಳ್ಳೆಯದು. ಕಫದಿಂದ ಬಳಲುತ್ತಿರುವವರು ಈ ಕೆಲ ಔಷಧಿಯನ್ನು ಮನೆಯಲ್ಲಿಯೇ ಮಾಡಿ ಸೇವನೆ ಮಾಡಿ. ಕೆಲವೇ ದಿನಗಳಲ್ಲಿ ಕಫ ಮಾಯವಾಗಿ ಆರಾಮ ಸಿಗುತ್ತದೆ.

  • ಒಂದು ಚಮಚ ಜೇನುತುಪ್ಪ ಹಾಗೂ ಅರ್ಧ ಚಮಚ ಶುಂಠಿ ಪುಡಿಯನ್ನು ಒಂದು ಕಪ್ ಬಿಸಿಬಿಸಿ ನಿಂಬೆ ನೀರಿನೊಂದಿಗೆ ಬೆರೆಸಿ ಕುಡಿಯಿರಿ.
  • ಒಂದು ಹಿಡಿ ಒಣ ದ್ರಾಕ್ಷಿಗೆ ಅರ್ಧ ಚಮಚ ಶುಂಠಿ ಪುಡಿ ಉದುರಿಸಿ ತಿನ್ನಿ.
  • ಒಂದು ಚಮಚ ಶುಂಠಿ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕುಡಿಯಿರಿ.
  • ಬೆಳಿಗ್ಗೆ ಹಾಗೂ ರಾತ್ರಿ ಹಾಲಿಗೆ ಅರಿಶಿನ ಪುಡಿ ಬೆರೆಸಿ ಕುಡಿಯಿರಿ.
  • ಸ್ವಲ್ಪ ಒಣ ದ್ರಾಕ್ಷಿಯನ್ನು ಬಿಸಿ ನೀರಿಗೆ ಹಾಕಿ ಕುದಿಸಿ. ನಂತ್ರ ಅದಕ್ಕೆ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.
  • ಶುಂಠಿ ಪುಡಿ, ಕಲ್ಲುಸಕ್ಕರೆ ಹಾಗೂ ತುಳಸಿ ಎಲೆಯನ್ನು ರಸವನ್ನು ಕುದಿಸಿ, ಈ ಮಿಶ್ರಣವನ್ನು ದಿನಕ್ಕೆ ೨-೩ ಬಾರಿ ಸೇವಿಸಿ.
  • ಒಂದು ಕಪ್ ನೀರಿಗೆ ೫-೬ ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ದಿನಕ್ಕೆ ೨-೩ ಬಾರಿ ಕುಡಿಯಿರಿ.

Leave a Comment