ಕನ್ಯಾ

ಈ ವರ್ಷ ಗುರುದೇವನು 12.9.2017ವರೆಗೆ ಜನ್ಮದಲ್ಲಿರುವನು. ನಂತರ 17.3.2018ವರೆಗೆ 2ನೇ ಗುರುವಿರುತ್ತಾನೆ. ಸಾಂಸಾರಿಕ ಬದುಕು ನಿಯಂತ್ರಣ ತಪ್ಪಲಿದೆ. ವೃಥಾ ಖರ್ಚು-ವೆಚ್ಚಗಳು ಅಂಟಿ ಬಾಧಿಸುವವು. ದೈಹಿಕ ಪರಿಶ್ರಮ ಅಧಿಕವಾಗುವುದು. ಸಾಲದಬಾಧೆ ಹಿಂಸಿಸುವುದು. ಸಹಾಯಕ್ಕೆ ಯಾರೂ ಬರಲಾರರು. ಅತೃಪ್ತಿ ಜೀವನ ಕಂಡು ಬರುವುದು. ಆರೋಗ್ಯಕ್ಕೆ ಕುತ್ತು ಬರುವುದು. ನೌಕರಿದಾರರು ಕಷ್ಟ-ನಷ್ಟಗಳನ್ನು ಅನುಭವಿಸುವರು. ಬರಬೇಕಾದ ಬಡ್ತಿ ಕಾನೂನಿನ ಚೌಕಟ್ಟಿಗೆ ಒಳಗಾಗುವುದು. ರೈತರು ಮುಂಗಾರು ಬೆಳೆಯಿಂದ ಹಾನಿಗೊಳಗಾಗುವರು. ಹಿಂಗಾರು ಬೆಳೆ ಅತ್ಯುತ್ತಮ ಆದಾಯ ತಂದುಕೊಡುವುದು. ಗುರುಸೇವೆಗೆ ಮುಂದಾಗುವಿರಿ. ವೇದಾಂತಗೋಷ್ಠಿ ದರ್ಶನ. ಗುರುದ್ವೀಯದಲ್ಲಿ ಬಂದಾಗ ಬದುಕು ನಿಧಾನವಾಗಿ ರೂಪುಗೊಳ್ಳುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದುವರು. ಆಟಗಾರರು ಅನ್ಯ ರಾಜ್ಯಗಳ ಕ್ರೀಡೆಗಳಿಗೆ ಆಯ್ಕೆಯಾಗುವರು. ಆರ್ಥಿಕ ಸಂಬಂಧಗಳು ಕುದುರುವವು. ಮನೆಯಲ್ಲಿ ಮಂಗಳ ಕಾರ್ಯಗಳು ಸಂಭ್ರಮಿಸುವವು. ಪ್ರವಾಸ ಅನುಭವಿಸುವಿರಿ. ಸಂಸ್ಥೆಯೊಂದರ ಆಡಳಿತ ನಿಮ್ಮ ಕೈವಶವಾಗುವುದು. ಖಾಸಗಿ ನೌಕರರು ಇರುವ ಉದ್ಯೋಗ ಬಿಟ್ಟು, ಬೇರೆ ಕಂಪನಿಗಳಲ್ಲಿ ನೌಕರಿ ಸೇರುವರು. ವ್ಯವಸಾಯ, ಕೈಗಾರಿಕೆಗಳು ಕಾನೂನಿನ ಕಾಟಗಳಿಂದ ಮುಕ್ತವಾಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಅಪವಾದಕ್ಕೆ ಗುರಿಯಾಗುವಿರಿ. ವ್ಯವಸಾಯ, ಕೈಗಾರಿಕೆಗಳು ಆಟ-ಪಾಠಗಳು ಗಗನ ಕುಸುಮವಾಗುವವು. ಎಲ್ಲವನ್ನು ಮೆಟ್ಟಿ ನಿಲ್ಲಿವು ಧೈರ್ಯ ತಾಕತ್ತುಗಳು ಮೇಳೈಸುವವು.

ಆದಾಯ-2, ವ್ಯಯ-11