ಕನ್ನಡ ಸಾಹಿತ್ಯ, ಸಿನಿಮಾಕ್ಕೆ ಕಾರ್ನಾಡ್ ಕೊಡುಗೆ ಅಪಾರ: ಶೆಟ್ಟರ್

ಬಳ್ಳಾರಿ:ಜೂ.10- ಗಿರೀಶ್ ಕಾರ್ನಾಡ್ ಅವರು ಕನ್ನಡ ಸಾಹಿತ್ಯ ಮತ್ತು ಸಿನಿಮಾ ಲೋಕ ಎರಡರಲ್ಲೂ ತಮ್ಮ ವಿಶಿಷ್ಟ ಪ್ರಯೋಗಗಳ ಮೂಲಕ ವಿಶ್ವದ ಗಮನ ಸೆಳೆದವರು ಅಂತವರ ಅಗಲಿಕೆ ಕನ್ನಡ ಲೋಕಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಸಾಹಿತ್ಯ, ವೈಚಾರಿಕತೆ ಹಿನ್ನೆಲೆಯಲ್ಲಿ ಖ್ಯಾತಿಯನ್ನು ಹೊಂದಿದ್ದ ಅವರ ನಿಧನವನ್ನು ಕೆಲವರು ಸಂಭ್ರಮಿಸುವುದು ಸರಿಯಲ್ಲ. ಅವರವರ ದೃಷ್ಟಿ ಕೋನದಿಂದ ತಮ್ಮ ನಡವಳಿಕೆಯಿಂದ ನಡೆದುಕೊಳ್ಳುತ್ತಾರೆ. ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋದ ಸರಿಯಲ್ಲ ಎಂದರು.

ನಾಟಕ, ಸಿನಿಮಾಗಳಲ್ಲಿ ಅವರು ತಮ್ಮ ಪಾತ್ರಗಳಿಗೆ ಜೀವಂತಿಕೆಯನ್ನು ತುಂಬಿದವರಾಗಿದ್ದರು. ಬಹುಮುಖ ವ್ಯಕ್ತಿತ್ವದ ಅವರ ಮಾರ್ಗದರ್ಶನದಂತೆ ಕನ್ನಡ ಸಾಹಿತ್ಯ ಲೋಕ ನಡೆಯಬೇಕಿದೆಂದರು.

Leave a Comment