ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ: ಡಾ. ಮಾಳಿ

ರಾಮದುರ್ಗ, ಆ 31- ಕನ್ನಡ ಸಾಹಿತ್ಯ ವೈವಿದ್ಯಮಯ ಸಾರಸ್ವತ ಲೋಕವಾಗಿದ್ದು ಹಲವು ರೂಪಗಳಿಂದ ಶ್ರೀಮಂತವಾಗಿದೆ. ಕನ್ನಡಿಗರ ಸಾಂಸ್ಕೃತಿಕ ಹಿರಿಮೆಯ ಮಾನವೀಯ ಕಣಜವಾಗಿದೆ ಎಂದು ವಿಮರ್ಶಕ ಡಾ. ವಿ.ಎಸ್. ಮಾಳಿ ಹೇಳಿದರು.

 
ಇಲ್ಲಿನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಿ.ಎಸ್. ಬೆಂಬಳಗಿ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಣ್ಯಕೋಟಿ ಕಥೆ, ಭಾಗೀರಥಿಯ ಕಥನ ಕವನಗಳು ಸತ್ಯ ಮತ್ತು ತ್ಯಾಗದ ಚಿಂತನೆಯ ಅಸ್ಮಿತೆಗಳಾಗಿವೆ ಎಂದು ತಿಳಿಸಿದರು.
ಪೂರ್ವದ ಹಳಗನ್ನಡ ಮೊದಲುಗೊಂಡು ಆಧುನಿಕ ಕನ್ನಡವರೆಗೂ ಕನ್ನಡ ಸಾಹಿತ್ಯ ಹಲವು ರೂಪುಗಳನ್ನು ಪಡೆದುಕೊಂಡು ತನ್ನ ಸಂಸ್ಕೃತಿಯ ಮೂಲ ಸತ್ವವನ್ನು ಅಭಿವ್ಯಕ್ತಿಗೊಳಿಸುತ್ತ ಬಂದಿದೆ. ಕನ್ನಡ ಸಾಹಿತ್ಯ ರೂಪಗಳೆಂದರೆ ಸಂವೇದನೆಯ ವಿವಿಧ ಆಯಾಮಗಳಾಗಿವೆ ಎಂದು ಹೇಳಿದರು.

 

 
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಚಾರ್ಯ ಪ್ರೊ. ಎಸ್.ಎಸ್. ಕೊಡತೆ ಮಾತನಾಡಿ, ಓದುವುದು ಜ್ಞಾನವನ್ನು ಅಭಿವೃದ್ಧಿಗೊಳಿಸುತ್ತದೆ. ವಿದ್ಯಾರ್ಥಿಗಳು ಮೊಬೈಲ್‍ನಲ್ಲಿ ಹೆಚ್ಚಿನ ಸಮಯ ಕಳೆಯದೇ ಅಧ್ಯಯನದ ಕಡೆಗೆ ಗಮನ ವಹಿಸಬೇಕು ಎಂದರು.

 
ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಮಾತನಾಡಿ, ಕನ್ನಡವು ಪ್ರಾಚೀನ ಭಾಷೆಯಾಗಿದ್ದು, ಶ್ರೇಷ್ಠ ಸಾಹಿತ್ಯವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದೆ. ವಿದ್ಯಾರ್ಥಿಗಳು ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಲು ತಿಳಿಸಿದರು.

 

 
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಆರ್.ಜಿ. ಅಣ್ಣಾನವರ ಪ್ರಾಸ್ತಾವಿಕ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ. ಅಜವಾನ, ಸಿ.ಡಿ. ಹಲ್ಯಾಳ ಪ್ರೌಢಶಾಲೆಯ ಕನ್ನಡ ಶಿಕ್ಷಕ ಹ. ಈ ಪೂಜಾರ, ಎಸ್.ಎಸ್. ಜೋಗಳೆ ವೇದಿಕೆ ಮೇಲಿದ್ದರು.
ನಿಕಟಪೂರ್ವ ಕಸಾಪ ಅಧ್ಯಕ್ಷ ಪ್ರೊ. ಎಸ್.ಎಂ. ಸಕ್ರಿ ಸ್ವಾಗತಿಸಿದರು. ಪ್ರೊ. ಪ್ರಕಾಶ ತೆಗ್ಗಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಡಾ. ಎಚ್.ಪಿ. ಹಾಲೊಳ್ಳಿ ವಂದಿಸಿದರು.

Leave a Comment