ಕನ್ನಡ ಸಮೃದ್ಧ ಭಾಷೆಯಾಗಿದೆ.- ಹೊರಕೇರಿ

ಹುಬ್ಬಳ್ಳಿ,ನ.8- ಶಾಸ್ತ್ರೀಯ ಸ್ಥಾನಮಾನ, ಎರಡು ಸಾವಿರ ವರ್ಷ ಇತಿಹಾಸ ಹೊಂದಿರುವ ಕನ್ನಡ ಭಾಷೆ ಶ್ರೀಮಂತ, ಸಮೃದ್ಧ ಭಾಷೆಯಾಗಿದೆ. ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಬೇಕು. ಭಾಷೆ ಬಳಸಿದರೆ ಬೆಳೆಯುತ್ತದೆ ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಗ್ರಂಥಪಾಲಕ ಶ್ರೀ ಸುರೇಶ ಡಿ. ಹೊರಕೇರಿ ಅವರು ಹೇಳಿದರು.
ಅವರು ವಿಜಯನಗರದ ಸೆವೆಂತ್ ಡೇ ಪ್ರಾಥಮಿಕ ಹಾಗೂ ಫ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಧ್ವಜಾರೋಹಣ ನೆರವೆರಿಸಿ ಮಾತನಾಡಿದರು.
ಸ್ವಾತಂತ್ರ ಪೂರ್ವದಲ್ಲಿ ಹರಿದು ಹಂಚಿ ಹೊಗಿದ್ದ ಕನ್ನಡ ನಾಡನ್ನು ಹಲವಾರು ಪುಣ್ಯಾತ್ಮರ ತ್ಯಾಗ, ಹೊರಾಟಗಳ ಫಲವಾಗಿ 1956 ನವೆಂಬರ್‍ನಲ್ಲಿ  ಮೈಸೂರು ರಾಜ್ಯ ನಿರ್ಮಾಣವಾಯಿತು. ಮೈಸೂರು ಹೆಸರನ್ನು ತೆಗೆದು ಕರ್ನಾಟಕ ಎಂದು ಹೆಸರು ನಾಮಕರಣ ಗೊಳ್ಳುವುದಕ್ಕೂ ಬೃಹತ್ ಮಟ್ಟದ ಹೋರಾಟ ನಡೆಯಿತು.  ಕರ್ನಾಟಕ ಏಕೀಕರಣಕ್ಕಾಗಿ ಅದರಗುಂಚಿ ಶಂಕರಗೌಡ್ರು ಸೇರಿದಂತೆ ಮುಂತಾದ ಮಹನೀಯರು ಶ್ರಮ ವಹಿಸಿ ದುಡಿದರು. ಗಣ್ಯರ ನಿಸ್ವಾರ್ಥ ಹೋರಾಟದಿಂದ ಕರ್ನಾಟಕ ಒಂದಾಯಿತು. ಕನ್ನಡ ಸಾಹಿತ್ಯ ಬೆಳವಣಿಗೆಗೆ ಬಸವಾದಿ ಶರಣರ ವಚನಗಳು, ಸಾಹಿತಿಗಳ  ಕೊಡುಗೆ ಅಪಾರ.  ನೆಲ-ಜಲ-ಗಡಿ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಮಕ್ಕಳು ಕನ್ನಡ ಸಾಹಿತ್ಯವನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕಿ ಮರಿಯಮ್ಮ ಸ್ವಾಗತಿಸಿದರು. ಸಭಾ ಪಾಲಕ ಸುರೇಶ ಕೆ, ಪ್ರಾರ್ಥಿಸಿದರು. ಶಾಲಾ ಸಮಿತಿ ಕಾರ್ಯದರ್ಶಿ ರಿಚರ್ಡ ಸ್ಟ್ಯಾನ್ಲಿ  ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕ ಚನ್ನಬಸಪ್ಪ ವಂದಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಆನಂದ ಘಟಪನದಿ, ಮುಖ್ಯ ಶಿಕ್ಷಕಿ ವೀನಯ ಶೀಲಾ, ಶಿಕ್ಷಕಿ ಲೀನಾ ರಿಚರ್ಡ, ದೈಹಿಕ ಶಿಕ್ಷಕ ಧರ್ಮ ನಾಯಕ, ಮಕ್ಕಳು, ಪಾಲಕರು, ಮುಂತಾದವರು ಇದ್ದರು.

Leave a Comment