ಕನ್ನಡ ಶಿಕ್ಷಕರಿಂದ ಮೌಲ್ಯಮಾಪನ – ಆರೋಪ

ರಾಯಚೂರು.ಏ.16- ನಗರದ ಕರ್ನಾಟಕ ವೆಲ್‌ಫೇರ್ ಟ್ರಸ್ಟ್ ಶಾಲೆಯಲ್ಲಿ ನಡೆಯುತ್ತಿರುವ ಎಸ್ಎಸ್ಎಲ್‌ಸಿ ಮೌಲ್ಯ ಮಾಪನದಲ್ಲಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆಗಳನ್ನು ಕನ್ನಡ ಮಾಧ್ಯಮ ಶಿಕ್ಷಕರಿಂದ ಮೌಲ್ಯ ಮಾಪನ ಮಾಡಿಸಲಾಗುತ್ತದೆಂದು ನವ ನಿರ್ಮಾಣ ಸಂಘದ ಅಧ್ಯಕ್ಷ ಸಿರಾಜ್ ಜಾಫ್ರೀ ಅವರು ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಮೌಲ್ಯ ಮಾಪನ ಕೇಂದ್ರದಲ್ಲಿ ಎಸ್ಎಸ್ಎಲ್‌ಸಿ ವಿಭಾಗದ ಸಮಾಜ ವಿಜ್ಞಾನ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆಗಳನ್ನು ಕನ್ನಡ ಮಾಧ್ಯಮ ಶಿಕ್ಷಕರಿಂದ ಮೌಲ್ಯ ಮಾಪನ ಮಾಡಿಸುತ್ತಿದ್ದು, ಈ ಕುರಿತು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕರಿಗೆ ದೂರು ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.
ಮೌಲ್ಯಮಾಪನ ಕೇಂದ್ರದಲ್ಲಿ 12,000 ಕನ್ನಡ ಮಾಧ್ಯಮ ಹಾಗೂ 9,350 ಆಂಗ್ಲ ಮಾಧ್ಯಮ ಉತ್ತರ ಪತ್ರಿಕೆಗಳಿವೆ. ಸಮಾಜ ವಿಜ್ಞಾನ ಉತ್ತರ ಪತ್ರಿಕೆಗಳನ್ನು ತಕ್ಷಣ ಹಿಂಪಡೆದು ಮೌಲ್ಯ ಮಾಪನ ಮಾಡಿದವಱ್ಯಾರೆಂದು ಪರಿಶೀಲಿಸಿ, ಮತ್ತೇ ಮರು ಮೌಲ್ಯಮಾಪನ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಖಿಲ್ ಅಹ್ಮದ್, ಕೆ.ಎನ್. ಇರ್ಷಾದ್ ಉಪಸ್ಥಿತರಿದ್ದರು.

Leave a Comment