ಕನ್ನಡ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ ತೆಲುಗು ನಟ ವಿಜಯ್

ಬೆಂಗಳೂರು, ಸೆ ೩- ಟಾಲಿವುಡ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಗೀತಾ ಗೋವಿಂದ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ೧೦೦ ಕೋಟಿ ರೂನಷ್ಟು ಕೊಳ್ಳೆ ಹೊಡೆದಿದ್ದು, ಚಿತ್ರದ ನಟ ವಿಜಯ್ ದೇವರಕೊಂಡ ಈ ಯಶಸ್ಸನ್ನು ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರಿಗೂ ಅರ್ಪಿಸಿ, ಕನ್ನಡ ಪ್ರೇಕ್ಷಕರಿಗೂ ಧನ್ಯವಾದ ಹೇಳಿದ್ದಾರೆ.

ಸ್ಯಾಂಡಲ್‌ವುಡ್ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿ ವಿಜಯ್ ದೇವರಕೊಂಡ ಅಭಿನಯದ ‘ಗೀತಾ ಗೋವಿಂದ’ ಸಿನಿಮಾ ಬಿಡುಗಡೆಯಾಗಿ, ಕರ್ನಾಟಕ ಸೇರಿದಂತೆ ಎಲ್ಲ ಕಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಿಡುಗಡೆಯಾಗುವ ಮೊದಲೆ ಟ್ರೇಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡಿತ್ತು. ಗೀತಾ ಗೋವಿಂದ ಚಿತ್ರ ಸುಮಾರು ೧೨ ದಿನಗಳಲ್ಲಿ ೧೦೦ ಕೋಟಿ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಯಶಸ್ಸಿನ ಖುಷಿಯಲ್ಲಿರುವ ವಿಜಯ್ ದೇವರಕೊಂಡ ಅವರು ತಮ್ಮ ಈ ಸಂತಸದ ಸುದ್ದಿಯನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ಯಶಸ್ಸನ್ನ ಸಿನಿಮಾದಲ್ಲಿ ತಮಗೆ ಸಾಥ್ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಿದ್ದಾರೆ. ನನ್ನ ಮೊದಲ ೧೦೦ ಕೋಟಿಯನ್ನು ನನ್ನ ಕೋಚಿಂಗ್ ಸಿಬ್ಬಂದಿ, ಗೀತಾ ಆರ್ಟ್ಸ್, ನನ್ನ ಕ್ಯಾಪ್ಟನ್ ಬುಜ್ಜಿ, ನನ್ನ ಲವ್ಲಿ ಪಾಟರ್ನರ್ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಕನ್ನಡ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ವಿಜಯ್ ದೇವರಕೊಂಡ ಅವರು ಟ್ವೀಟ್ ಮಾಡಿದ್ದಾರೆ.

Leave a Comment