ಕನ್ನಡಿಗರ ತಂಡ ಸಿದ್ಧಪಡಿಸಿರುವ “ನಮ್ಮ ಫ್ಲಿಕ್ಸ್” ಆಪ್ ಗೆ ಉಪೇಂದ್ರ ಚಾಲನೆ

ಬೆಂಗಳೂರು, ಏ 2 – ವರನಟ ಡಾ ರಾಜ್ ಕುಮಾರ್ ಜನ್ಮದಿನದಂದು ನಟ ಉಪೇಂದ್ರ ಒ.ಟಿ.ಟಿ” ಫ್ಲಾಟ್ ಫಾಮ್ “ನಮ್ಮ FLIX” ಆಪ್ ಬಿಡುಗಡೆಗೊಳಿಸಿದ್ದಾರೆ.

ಆನ್ ಲೈನ್ ಮೂಲಕ ಈಗಾಗಲೇ ಹಲವು ವೇದಿಕೆಗಳಿದ್ದರೂ, ಅನಿವೇಷನ್ ಎಂಟರ್ ಟೈನ್ ಮೆಂಟ್ ಕಾರ್ಪೊರೇಷನ್ ಅಡಿಯಲ್ಲಿ “ನಮ್ ಫ್ಲಿಕ್ಸ್” ಹೊರತರಲಾಗಿದ್ದು, ಕನ್ನಡಿಗರ ತಂಡವೇ ಇದನ್ನು ಸಿದ್ಧಪಡಿಸಿದೆ. “ಇದರಲ್ಲಿ ಹಳೆಯ ಹಾಗೂ ಹೊಸ ಕನ್ನಡ ಚಿತ್ರಗಳನ್ನು, ನಿಮಗಿಷ್ಟವಾದ ಸಮಯದಲ್ಲಿ ವೀಕ್ಷಿಸಬಹುದು” ಎಂದು ಉಪೇಂದ್ರ ಹೇಳಿದ್ದಾರೆ.

ಇಂದಿನ ವಿಶೇಷ ದಿನದಂದು ಕನ್ನಡಿಗರಿಗೆ ಮನರಂಜನೆ ನೀಡುವ ಸಲುವಾಗಿ ಇಲ್ಲೊಂದು ಕನ್ನಡಿಗರ ತಂಡ ಹೊಸ ಆ್ಯಪ್ ಒಂದನ್ನ ಬಿಡುಗಡೆ ಮಾಡುವ ಮೂಲಕ ಜನರಿಗೆ ಮನರಂಜನೆ ನೀಡಲು ಸಿದ್ಧವಾಗಿದೆ…
ಈ ಆ್ಯಪ್ ಕೇವಲ ಮನರಂಜನೆಗಾಗಿ. ಕನ್ನಡ ಚಿತ್ರಗಳನ್ನ ನೀವು “ನಮ್ಮ FLIX” ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಇಡೀ ಕುಟುಂಬದೊಡನೆ ವೀಕ್ಷಿಸ ಬಹುದು… ಹೇಗೆ ಅಂದರೆ ನಿಮ್ಮ ಗೂಗಲ್‌ ಪ್ಲೇ ಸ್ಟೋರ್ ಗೆ ಹೋಗಿ “ನಮ್ಮ FLIX” ಅಂತ ಟೈಪ್ ಮಾಡಿ “ನಮ್ಮ FLIX” ಒ‌.ಟಿ.ಟಿ ಆ್ಯಪ್ ಪಡೆಯಿರಿ…
200 ಕನ್ನಡ ಚಿತ್ರಗಳಲ್ಲಿ ಕೇವಲ 10% ಚಿತ್ರಗಳು ನಿಮ್ಮ ಮೊಬೈಲ್ ಪರದೆ ಮೇಲೆ ಉಳಿಯು‌ತ್ತದೆ.

ಕೇವಲ ಚಿತ್ರ ಮಾತ್ರ ಅಲ್ಲಾ ಅತೀ ಶೀಘ್ರವಾಗಿ ವೆಬ್ ಸೀರೀಸ್, ಸಂಗೀತ, ನಮ್ಮ ಸ್ಟಾರ್ ಗಳ ಮಾತು ಇಷ್ಟೇ ಅಲ್ಲಾ ಫ್ಯಾನ್ ಕ್ಲಬ್ ಕೂಡ “ನಮ್ಮ ಫ್ಲಿಕ್ಸ್ ಆಪ್ ನಲ್ಲಿ ಸಿಗಲಿದ್ದು, ಇದಕ್ಕಾಗಿ ದಿನಕ್ಕೆ ಕೇವಲ ಒಂದು ರೂಪಾಯಿ ಖರ್ಚು ಮಾಡಬೇಕಾಗುತ್ತದೆ.

ಎಲ್ಲಿ ಬೇಕಾದರೂ ಹೇಗೆ ಬೇಕಾದರೂ “ನಮ್ಮ FLIX” ಆ್ಯಪ್ ಮೂಲಕ ಕನ್ನಡ ಚಿತ್ರಗನ್ನು ವೀಕ್ಷಿಸಬಹುದು. ಪ್ರತಿ ವಾರಕ್ಕೊಮ್ಮೆ ಹೊಸ ಸಿನಿಮಾಗಳು ಬರುವುದರಿಂದ ನಿರ್ಮಾಪಕರಿಗೂ ಉಪಯೋಗವಾಗಲಿದೆ.
ಸದ್ಯಕ್ಕೆ ಎಲ್ಲಾ ಆ್ಯಂಡ್ರಡ್ ಮೊಬೈಲ್ ಗಳಲ್ಲೂ ಲಭ್ಯ…ಅತೀ ಶೀಘ್ರದಲ್ಲಿ ಅಮೆಜಾನ್ ಫೈರ್ ಟಿವಿ, ಜಿಯೋ ಟಿವಿ ಮತ್ತು ಐ ಫೋನ್ ಗಳಲ್ಲೂ ಲಭ್ಯವಾಗಲಿದೆ ಎಂದು ಒ ಟಿ ಟಿ ಪ್ಲಾಟ್ ಫಾರ್ಮ್ ತಿಳಿಸಿದೆ

Leave a Comment